ಫ್ಯಾಕ್ಟ್‌ಚೆಕ್: ತಮಿಳುನಾಡಿನಲ್ಲಿ ಮಸೀದಿಗಳಿಗಿಂತ ದೇವಸ್ಥಾನಗಳಿಗೆ ಹೆಚ್ಚು ವಿದ್ಯುತ್ ದರ ವಿಧಿಸುತ್ತಿದ್ದಾರೆ ಎಂಬುದು ಸುಳ್ಳು

ತಮಿಳುನಾಡಿನಲ್ಲಿ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ವಿದ್ಯುತ್ ಶುಲ್ಕಗಳು ವಿಭಿನ್ನವಾಗಿವೆ  ಎಂದು ಹೇಳುವ ಪೋಸ್ಟ್ ಹರಿದಾಡುತ್ತಿದೆ. ಪೋಸ್ಟ್‌ರ್‌ನಲ್ಲಿ ಕಾಣುವ ಚಿತ್ರದಲ್ಲಿ ಫೋಟೋವು ಮಸೀದಿ, ಚರ್ಚ್ ಮತ್ತು ದೇವಾಲಯದ ದೃಶ್ಯಗಳಿದ್ದು, ತಮಿಳುನಾಡಿನಲ್ಲಿ ವಿದ್ಯುತ್ ದರ ದೇವಾಲಯಗಳಿಗೆ ರೂ.8=00/ಒಂದು ಯುನಿಟ್‌ಗೆ, ಮಸೀದಿಗಳಿಗೆ ರೂ.2=85/ಒಂದು ಯುನಿಟ್‌ಗೆ, ಚರ್ಚ್‌ಗಳಿಗೆ ರೂ.2=85/ಒಂದು ಯುನಿಟ್‌ಗೆ ಎಂದು ಪ್ರತಿಪಾದಿಸಲಾಗಿದೆ. ಇದರ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವಾಟ್ಸಾಪ್‌ನಲ್ಲಿ ವೈರಲ್ ಆಗುತ್ತಿರುವ ತಮಿಳುನಾಡಿನಾದ್ಯಂತ ಧಾರ್ಮಿಕ ಕೇಂದ್ರಗಳಾದ ದೇವಸ್ಥಾನ, ಮಸೀದಿ ಮತ್ತು ಚರ್ಚ್‌ಗಳ ನಡುವೆ ವಿದ್ಯುತ್ ದರಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಹಂಚಿಕೊಳ್ಳಲಾಗಿರುವ ಪೋಸ್ಟ್‌ನ ಸುಳಿವಿನ ಆಧಾರದಲ್ಲಿ ಗೂಗಲ್ ಕೀ ವರ್ಡ್‌ಗಳ ಮೂಲಕ ಸರ್ಚ್ ಮಾಡಿದಾಗ ವೈರಲ್ ಆಗುತ್ತಿರುವ ಪೋಸ್ಟ್‌ ಸುಮಾರು 2 ವರ್ಷಗಳಿಂದ ಅಂತರ್ಜಾಲದಲ್ಲಿ ಹರಿದಾಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಸುದ್ದಿ ನಿಜವೇ ಎಂದು  ಪರಿಶೀಲಿಸಿದಾಗ ಇದು ಸುಳ್ಳು ಮತ್ತು ತಪ್ಪು ಮಾಹಿತಿ ಎಂಬುದು ಖಚಿತವಾಗಿದೆ. ವಾಸ್ತವವಾಗಿ ತಮಿಳುನಾಡು ಸರ್ಕಾರ ಧರ್ಮದ ಆಧಾರದಲ್ಲಿ ವಿದ್ಯುತ್‌ ದರ ನಿಗದಿ ಮಾಡಿಲ್ಲ. ಅಲ್ಲಿ ವಿದ್ಯುತ್‌ ದರವನ್ನು 2017ರಲ್ಲಿ ಕಡೆಯಬಾರಿಗೆ ಪರಿಷ್ಕರಣೆ ಮಾಡಲಾಗಿದೆ. ಅದರಂತೆ ದೇವಸ್ಥಾನ, ಚರ್ಚ್ ಮತ್ತು ಮಸೀದಿ ಮೂರಕ್ಕೂ ಪ್ರತಿ ಯೂನಿಟ್‌ಗೆ 6.35 ರೂ ದರ ವಿಧಿಸಲಾಗುತ್ತಿದೆ. 2020ರಲ್ಲಿಯೂ ಇಂಥದ್ದೇ ವದಂತಿ ತಮಿಳುನಾಡಿನಲ್ಲಿ ಹಬ್ಬಿತ್ತು. ಹಾಗಾಗಿ ವೈರಲ್‌ ಸುದ್ದಿ ಸುಳ್ಳು.

ಇಸ್ಲಾಂ ಧರ್ಮದ ಬಗ್ಗೆ ಪೂರ್ವಾಗ್ರಹಗಳನ್ನು ಸೃಷ್ಟಿಸಿ, ತಪ್ಪು ಮತ್ತು ಸುಳ್ಳು ಸುದ್ದಿಗಳ ಪೋಸ್ಟ್‌ಗಳನ್ನು ವೈರಲ್ ಮಾಡಲಾಗುತ್ತಿದೆ. ಜಹಾಂಗೀರ್‌ಪುರಿಯಲ್ಲಿ ನಡೆದ ಕೋಮು ಹಿಂಸಾಚಾರ ನಂತರ ಈ ರೀತಿಯ ಧಾರ್ಮಿಕ ಅಸಹಿಷ್ಣುತೆಯ ಭಾವನೆಗಳನ್ನು ಬಿತ್ತುವಂತಹ ಸುದ್ದಿಗಳು ಹೆಚ್ಚಾಗಿದ್ದು, ಕೋಮು ಸೌಹಾರ್ದತೆಯನ್ನು ಪ್ರಚೋದಿಸುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ತಪ್ಪು ಮತ್ತು ಸುಳ್ಳು ಮಾಹಿತಿಗಳನ್ನು ಹರಡಲಾಗುತ್ತಿದೆ. ಇದಕ್ಕೆ ಬಲಿಬಿದ್ದು ಕೋಮು ಪ್ರಚೋದನೆಗೆ ಒಳಗಾಗದೆ ವಾಸ್ತವವನ್ನು ಅರ್ಥಮಾಡಿಕೊಂಡು ಪರಸ್ಪರ ಶಾಂತಿ ಮತ್ತು ಸೌಹಾರ್ದದಿಂದ ಮುನ್ನಡೆಯಬೇಕೆಂಬುದು ಈ ಲೇಖನದ ಆಶಯ.

ಕೃಪೆ: ದ ಲಾಜಿಕಲ್ ಇಂಡಿಯಾ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ  ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯವನ್ನು ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮುಸ್ಲಿಂ ದ್ವೇಷಕ್ಕಾಗಿ ಬಾಂಗ್ಲಾ ಫೋಟೋ ವೈರಲ್ ಮಾಡಿದ ಬಲಪಂಥೀಯರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್: ತಮಿಳುನಾಡಿನಲ್ಲಿ ಮಸೀದಿಗಳಿಗಿಂತ ದೇವಸ್ಥಾನಗಳಿಗೆ ಹೆಚ್ಚು ವಿದ್ಯುತ್ ದರ ವಿಧಿಸುತ್ತಿದ್ದಾರೆ ಎಂಬುದು ಸುಳ್ಳು

  • May 4, 2022 at 11:13 am
    Permalink

    ಕರ್ನಾಟಕ ದಲ್ಲಿರೂ ದರಗಳನ್ನು ತಿಳಿಸಿ ಸಾರ್

    Reply

Leave a Reply

Your email address will not be published.

Verified by MonsterInsights