ಅತ್ಯಾಚಾರ ಎಸಗಿದ್ದು 11 ನಿಮಿಷ ಮಾತ್ರವೆಂದು ಶಿಕ್ಷೆ ಕಡಿಮೆ ಮಾಡಿದ ಕೋರ್ಟ್!
ಕೇವಲ 11 ನಿಮಿಷಗಳ ಕಾಲ ಮಾತರ ಅತ್ಯಾಚಾರ ಎಸಗಿದ್ದು, ಸಂತ್ರಸ್ತೆಗೆ ಗಂಭೀರವಾದ ಗಾಯಗಳನ್ನು ಮಾಡಿಲ್ಲ ಎಂಬ ಕಾರಣವನ್ನು ತಿಳಿಸಿ ಅಪರಾಧಿ ಅತ್ಯಾಚಾರಿಗೆ ಜೈಲು ಶಿಕ್ಷೆಯನ್ನು ಕಡಿಮೆ ಗೊಳಿಸಿ ಸ್ವಿಟ್ಜರ್‌ಲ್ಯಾಂಡ್‌ನ ನ್ಯಾಯಾಲಯವು ತೀರ್ಪು ನೀಡಿದೆ ಎಂದು ಸ್ವಿಸ್ ಇನ್‌ಫೋ ವರದಿ ಹೇಳಿದೆ.
ಈ ತೀರ್ಪಿನ ವಿರುದ್ದ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ನೂರಾರು ಜನರು ಬಾಸೆಲ್ ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಸ್ವಿಟ್ಜರ್‌ಲ್ಯಾಂಡ್‌ನ ವಾಯುವ್ಯ ಭಾಗದಲ್ಲಿರುವ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಪೋರ್ಚುಗಲ್‌ನ 33 ವರ್ಷದ ವ್ಯಕ್ತಿ ಮತ್ತು 17 ವರ್ಷದ ಆತನ ಸ್ನೇಹಿತ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದರು.
ಈ ಘಟನೆಯು ಫೆಬ್ರವರಿ 2020 ರಲ್ಲಿ ನಡೆದಿದ್ದು, ಆರೋಪಿಗಳನ್ನು 2020ರ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು. ಅಧೀನ ನ್ಯಾಯಾಲಯವು ಅಪರಾಧಿಗಳಿಗೆ 51 ತಿಂಗಳು ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಆದರೆ, ಬಾಸೆಲ್ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಲಿಸೆಲೊಟ್ ಹೆಂಜ್ ಅವರು ಅತ್ಯಾಚಾರವು 11 ನಿಮಿಷಗಳಿಂತ ಹೆಚ್ಚು ನಡೆಸಿಲ್ಲ ಎಂದು ಉಲ್ಲೇಖಿಸಿದ್ದು, 51 ತಿಂಗಳಿದ್ದ ಜೈಲು ಶಿಕ್ಷೆಯನ್ನು 36 ತಿಂಗಳುಗಳಿಗೆ ಇಳಿಸಿ ಆದೇಶಿಸಿದ್ದಾರೆ.
https://twitter.com/ElenaNjeru/status/1424702491644600323?ref_src=twsrc%5Etfw%7Ctwcamp%5Etweetembed%7Ctwterm%5E1424702491644600323%7Ctwgr%5E%7Ctwcon%5Es1_c10&ref_url=https%3A%2F%2Fwww.dnaindia.com%2Fviral%2Freport-outrageous-swiss-court-reduces-jailtime-for-rapist-says-rape-lasted-only-11-mins-switzerland-basel-2905141
ಅತ್ಯಾಚಾರಿಗಳಿಗೆ ನೀಡಲಾಗಿರುವ ಶಿಕ್ಷೆಯನ್ನು 4 ವರ್ಷ, 3 ತಿಂಗಳಿಂದ 3 ವರ್ಷಕ್ಕೆ ಇಳಿಸಲಾಗಿದೆ. ಹೀಗಾಗಿ ಆತನನ್ನು ಆಗಸ್ಟ್ 11 ರಂದು ಬಿಡುಗಡೆ ಮಾಡಬಹುದು ಎಂದು ಸ್ವಿಸ್ ನ್ಯೂಸ್ ವೆಬ್‌ಸೈಟ್ 20 ಮಿನಿಟನ್ ವರದಿ ಮಾಡಿದೆ.
ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿರುವ ತೀರ್ಪಿನ ವಿರುದ್ದ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಶಿಕ್ಷೆಯನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: ಬುರ್ಜ್ ಖಲೀಫಾ ಅಂಚಿನಲ್ಲಿ ನಿಂತ ಮಹಿಳೆಯಿಂದ ಎಮಿರೇಟ್ಸ್ ಜಾಹೀರಾತು : ಅದ್ಭುತ ವಿಡಿಯೋ ವೈರಲ್!