ಆ್ಯಂಕರ್ ಹಿಂದೆ ಗನ್ ಹಿಡಿದು ನಿಂತ ತಾಲಿಬಾನಿಗಳು : ವಿಡಿಯೋ ವೈರಲ್!

ಆಫ್ಘಾನಿಸ್ತಾನದಲ್ಲಿ ದಿನೇ ದಿನೇ ಉಗ್ರರ ಉಪಟಳ ಹೆಚ್ಚುತ್ತಲೇ ಇದೆ. ಮಹಿಳಾ ಆ್ಯಂಕರ್ ಗಳನ್ನು ಕೆಲಸದಿಂದ ತೆಗೆದ ತಾಲಿಬಾನಿಗಳು ಸದ್ಯ ಸ್ಟುಡಿಯೋಕ್ಕೂ ಕಾಲಿಟ್ಟಿದ್ದಾರೆ. ತಮ್ಮನ್ನು ಹೊಗಳುವಂತೆ ಆ್ಯಂಕರ್ ಹಿಂದೆ ಗನ್ ಹಿಡಿದು ನಿಂತ ತಾಲಿಬಾನಿಗಳ ವಿಡಿಯೋ ಸದ್ಯ ಸಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಆಫ್ಘನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಆಫ್ಘನ್ನರ ಪರಿಸ್ಥತಿ ಹೇಳತೀರದ್ದಾಗಿದೆ. ಜನ ಬ್ಯಾಂಕ್ ನಲ್ಲಿ ಹಣ ಡ್ರಾ ಮಾಡಲು ಪರದಾಡುವಂತಹ ಸ್ಥಿತಿ ಇದೆ. ತುತ್ತು ಅನ್ನಕ್ಕೂ ಜನ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಉಟ್ಟು ಬಟ್ಟೆಯಲ್ಲಿ ಆಫ್ಘಾನ್ ತೊರೆಯಲು ಜೀವ ಗಟ್ಟಿಹಿಡಿದು ವಿಮಾನ ನಿಲ್ದಾಣದಲ್ಲಿ ಹಗಲಿರುಳು ಕಾಯುತ್ತಿದ್ದಾರೆ.

ಮಹಿಳೆಯರು ಭಾಷಣ, ಪ್ರತಿಭಟನೆ, ಸಾರ್ವಜನಿಕ ಸ್ಥಳಗಳಲ್ಲಿ ಗಟ್ಟಿಯಾಗಿ ಮಾತನಾಡುವಂತಿಲ್ಲ. ಮಹಿಳಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದೆ.

ಪತ್ರಕರ್ತರನ್ನು ಹತ್ಯೆ ಮಾಡಿ, ಬೆದರಿಕೆ ಹಾಕಿ ಮಾಧ್ಯಮಗಳ ಹಕ್ಕುಗಳನ್ನು ತಾಲಿಬಾನ್ ಸಂಪೂರ್ಣವಾಗಿ ದಮನಮಾಡುತ್ತಿದೆ. ಆಫ್ಘಾನ್ ನಲ್ಲಿ  ತಾಲಿಬಾನ್ ಮಾಡಿದ್ದೇ ಸರಿ ಎನ್ನುವಂತಾಗಿದೆ. ಸದ್ಯ ಟಿವಿ ಸ್ಟುಡಿಯೋಕ್ಕೂ ಕಾಲಿಟ್ಟ ತಾಲಿಬಾನಿಗಳ ಘನಘೋರ ದೃಶ್ಯಗಳು ನಿಜಕ್ಕೂ ಎದೆಯಲ್ಲಿ ನಡುಕ ಹುಟ್ಟಿಸುತ್ತಿವೆ.

https://twitter.com/AlinejadMasih/status/1432043625542819842?ref_src=twsrc%5Etfw%7Ctwcamp%5Etweetembed%7Ctwterm%5E1432043625542819842%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Fworld%2Fstory%2Ftaliban-press-news-anchor-armed-men-studio-viral-video-afghaistan-1846926-2021-08-30

ಆ್ಯಂಕರ್ ಹಿಂದೆ ಗನ್ ಹಿಡಿದು ನಿಂತ ತಾಲಿಬಾನಿಗಳು ತಮ್ಮನ್ನು ಹೊಗಳುವಂತೆ ಒತ್ತಾಯಿಸಿದ್ದಾರೆ. ಸದ್ಯ ವಿಡಿಯೋ ಅಲ್ಲಿನ ಮಾಧ್ಯಮ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights