ದೆಹಲಿ ಆಸ್ಪತ್ರೆಗಳು ದೆಹಲಿ ಜನರಿಗಷ್ಟೇ ಸೀಮಿತ: ಅರವಿಂದ್ ಕೇಜ್ರಿವಾಲ್

ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ದೆಹಲಿಯಲ್ಲಿಯೂ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕೊರೊನಾಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳು ದೆಹಲಿ ಜನರಿಗಷ್ಟೇ ಸೀಮಿತವಾಗಿರಲಿವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭಾನುವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ದೆಹಲಿ ಆಸ್ಪತ್ರೆ ದೆಹಲಿ ಜನತೆಗಷ್ಟೇ ಸೀಮಿತವಾಗಿರಲಿದ್ದು, ಕೇಂದ್ರೀಯ ಆಸ್ಪತ್ರೆಗಳು ಎಲ್ಲರಿಗೂ ಸೇವೆ ಸಲ್ಲಿಸಲಿವೆ. ನರಶಸ್ತ್ರಚಿಕಿತ್ಸೆಯಂತಹ ವಿಶೇಷ ಶಸ್ತ್ರಚಿಕಿತ್ಸೆಗಳನ್ನು ಹೊರತುಪಡಿಸಿ ಖಾಸಗಿ ಆಸ್ಪತ್ರೆಗಳೂ ಕೂಡ ದೆಹಲಿ ನಿವಾಸಿಗಳಿಗೆ ಕಾಯ್ದಿರಿಸಲಾಗಿದೆ ಎಂದು ಹೇಳಿದ್ದಾರೆ.

ಜೂನ್ ಅಂತ್ಯದ ವೇಳೆಗೆ 15,000 ಹಾಸಿಗೆಗಳ ಅಗತ್ಯತೆ ಬೀಳಲಿದೆ. ನಾಳೆಯಿಂದ ದೆಹಲಿಯ ಎಲ್ಲಾ ಗಡಿಯನ್ನು ತೆರೆಯಲಾಗುತ್ತದೆ. ಹೋಟೆಲ್, ಬ್ಯಾಂಕ್ವೆಟ್ ಹಾಲ್ ಗಳು ಎಂದಿನಂತೆ ಬಂದ್ ಆಗಿರಲಿವೆ. ಇನ್ನು ರೆಸ್ಟೋರೆಂಟ್, ಮಾಲ್ ಹಾಗೂ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ನಿಯಮಗಳಿಗನುಸಾರವಾಗಿ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights