ಹೊಸ ಪ್ರಭೇದದ ಹಳದಿ ಆಮೆ ಪತ್ತೆ; ಅದರ ವೈಶಿಷ್ಯವೇನು ಗೊತ್ತೇ?

ಆಮೆಗಳಲ್ಲಿ ಹಲವಾರು ಪ್ರಭೇದದ ಆಮೆಗಳು ಕಂಡುಬರುತ್ತವೆ. ಅವುಗಲ್ಲಿ ಕೆಲವು ಪ್ರಭೇದದ ಆಮೆಗಳು 100 ವರ್ಷಗಳಿಗಿಂತ ಬಾಳುತ್ತವೆ ಎಂದು ಹೇಳಲಾಗುತ್ತದೆ. ಅಲ್ಲದೆ, ಕೆಲವು ವಿಶೇಷ ರೀತಿಯಲ್ಲಿ ಕಂಡುಬರುತ್ತವೆ. ಅಂತಹ ವಿಶೇಷ ಜಾತಿಗೆ ಸೇರಿದ ಆಮೆಗಳಲ್ಲಿ ಹಳದಿ ಬಣ್ಣದ ಆಮೆಯೊಂದು ಕಾಣಿಸಿಕೊಂಡಿದೆ.

ಒಡಿಶಾದ ಬಾಲಸೂರ್ ಜಿಲ್ಲೆಯ ಸೊರೊ ಬ್ಲಾಕ್‌ನ ಸುಜನ್‌ಪುರ ಗ್ರಾಮದ ಸ್ಥಳೀಯರು ಭಾನುವಾರ ವಿಶಿಷ್ಟವಾದ ಹಳದಿ ಬಣ್ಣದ ಆಮೆಯನ್ನು ಕಂಡಿದ್ದಾರೆ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆದು ಮಾಹಿತಿ ನೀಡಿದ್ದಾರೆ.

ಹಿರಿಯ ಐಎಫ್‌ಎಸ್ ಅಧಿಕಾರಿ ಸುಸಂತಾ ನಂದಾ ಹೇಳಿದಂತೆ , ‘ಆಮೆ ಬಹುಶಃ ಅಲ್ಬಿನೋ ಆಗಿರಬಹುದು. ಅಂತಹ ಒಂದು ಜೀವಿಯನ್ನು ಕೆಲವು ವರ್ಷಗಳ ಹಿಂದೆ ಸಿಂಧ್‌ನ ಸ್ಥಳೀಯರು ಸಹ ಪತ್ತೆ ಮಾಡಿದ್ದಾರೆ.

ಈ ಆಮೆ ಇದು ಗುಲಾಬಿ ಕಣ್ಣುಗಳಿಂದ ಕೂಡಿದ್ದು ಒಂದು ವಿಶಿಷ್ಟ ಜೀವಿಯಾಗಿದೆ. ಎಂದು ಐಎಫ್‌ಎಸ್ ಅಧಿಕಾರಿ ಈ ಆಮೆಯ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ಹೇಳಿದ್ದಾರೆ.  ರಕ್ಷಿಸಿದ ಆಮೆಯ ಬಗ್ಗೆ ಮಾತನಾಡಿದ ವನ್ಯಜೀವಿ ವಾರ್ಡನ್ ಭಾನುಮಿತ್ರ  ಆಚಾರ್ಯ,” ಇದು ಒಂದು ಅನನ್ಯ ಸಂಶೋಧನೆಯಾಗಿದೆ.  ಈ ಮೊದಲು ಈ ರೀತಿಯ ಆಮೆಯನ್ನು ಯಾರೂ ಕಂಡಿಲ್ಲ  ಆಮೆಯ ಸಂಪೂರ್ಣ ಕವಚ ಮತ್ತು ದೇಹ ಹಳದಿ. ಬಣ್ಣದಲ್ಲಿದೆ. ಇದು ಅಪರೂಪದ ಆಮೆ, ನಾನು ಈ ಬಗೆಯ ಆಮೆಯನ್ನು ಈ ಹಿಂದೆ ನೋಡೇ ಇಲ್ಲ. ” ಆಚಾರ್ಯ ಹೇಳಿದ್ದಾರೆ.

ಕಳೆದ ತಿಂಗಳು, ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಡಿಯುಲಿ ಅಣೆಕಟ್ಟಿನಲ್ಲಿ ಅಪರೂಪದ ಜಾತಿಯ ಆಮೆಯೊಂದು ಮೀನುಗಾರರಿಂದ ಹಿಡಿಯಲ್ಪಟ್ಟಿತ್ತು.  ಇದನ್ನು ಡ್ಯೂಲಿ ಅಣೆಕಟ್ಟಿನ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ವಶಕ್ಕೆ ಪಡೆದಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights