ಮಂಗಳೂರು: ಓದು ಮುಗಿಯುವ‌ಷ್ಟರಲ್ಲಿ ಸಾಲ ಹೆಚ್ಚುವ ಭಯ; ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಓದು ಮಗಿಯುವದರೊಳಗೆ ಸಾಲದ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತದೆ ಎಂಬ ಭಯದಿಂದ ಸುರತ್ಕಲ್ ಎನ್‌ಐಟಿಕೆ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೂಲತಃ ಬಿಹಾರ ಒರೈಯಾ ಗ್ರಾಮದ ಸೌರವ್ ಕುಮಾರ್ ಯಾದವ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ (19) ಮಾಡಿಕೊಂಡಿದ್ದಾನೆ. ಈತ ಎನ್‌ಐಟಿಕೆ ಕಾಲೇಜಿನಲ್ಲಿ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ವಿಷಯದಲ್ಲಿ ದ್ವಿತೀಯ ವರ್ಷದ ಎಂಜಿನಿಯರಿಂಗ್ ಬಿಟೆಕ್ ಎಂಜಿನಿಯರಿಂಗ್ ಓದುತ್ತಿದ್ದ. ಶನಿವಾರ ರಾತ್ರಿ ಊಟ ಮಾಡಿ ಮಲಗಿದ್ದ ಸೌರವ್ ಭಾನುವಾರ ಬೆಳಗ್ಗೆ 8ಗಂಟೆಯವರೆಗೂ ಎದ್ದಿರಲಿಲ್ಲ. ಇದನ್ನು ಕಂಡ ಸ್ನೇಹಿತ ರೂಮಿನ ಬಾಗಿಲು ತೆರೆದು ನೋಡಿದಾಗ ಸೌರವ್ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಸೌರವ್ ಆತ್ಮಹತ್ಯೆಗೆ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ನಾನು ಅನಾರೋಗ್ಯದಿಂದ ಬಳಲುತ್ತಿದ್ದು, ಮಾನಸಿಕವಾಗಿ ನೊಂದಿದ್ದೇನೆ. ಈಗಾಗಲೇ ನನ್ನ ವಿದ್ಯಾಭ್ಯಾಸಕ್ಕೆ ಲಕ್ಷಾಂತರ ರೂ. ಸಾಲ ಮಾಡಿದ್ದಾರೆ. ಇನ್ನಷ್ಟು ಸಾಲ ಮಾಡಿದರೆ ನನ್ನ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಆದುದರಿಂದ ನನ್ನ ಖಾತೆಯಲ್ಲಿ 46ಸಾವಿರ ರೂ. ಹಣವಿದ್ದು, ನನ್ನ 1ಲಕ್ಷ ರೂ. ವಿದ್ಯಾಭ್ಯಾಸ ಸಾಲವನ್ನು ಸಂದಾಯ ಮಾಡಿ ಎಂದು ಬರೆದಿದ್ದಾನೆ.

ನಾನು ಹುಚ್ಚನಾಗುವ ಭಯವಿದೆ, ಒಂದೊಮ್ಮೆ ನಾನು ಹುಚ್ಚನಾದರೇ ಮತ್ತೆ ನನ್ನ ಕುಟುಂಬದವರಿಗೆ ಹೊರೆಯಾಗುತ್ತೇನೆ, ಹೀಗಾಗಿ ನಾನು ಸಾಯುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಸೌರವ್ ಬರೆದಿದ್ದಾನೆ.

ಕಾಲೇಜು ಆಡಳಿತ ಮಂಡಳಿ ಸೌರವ್ ದೇಹವನ್ನು ತೆಗೆದುಕೊಂಡು ಹೋಗಲು ಆತನ ಪೋಷಕರಿಗೆ ಕರೆ ಮಾಡಿದೆ, ಆದರೆ ಬಡತನ, ಮತ್ತು ಹಣವಿಲ್ಲದ ಕಾರಣ,ಸೌರವ್ ಕುಟುಂಬ ಬಡತನದಲ್ಲಿದ್ದು, ಮಂಗಳೂರಿಗೆ ಬರುವ ಪರಿಸ್ಥಿತಿಯಲ್ಲಿರದ ಕಾರಣ ವಿದ್ಯಾರ್ಥಿಯ ಮೃತದೇಹ ಮಂಗಳೂರಿನಲ್ಲೇ ಅಂತ್ಯಸಂಸ್ಕಾರ ನಡೆಸಲು ಒಪ್ಪಿಗೆ ಸೂಚಿಸಿದ್ದರು. ಆದರೆ ಎನ್‌ಐಟಿಕೆ ವಿದ್ಯಾರ್ಥಿಗಳು, ಶಿಕ್ಷಕರು ಹಣ ಕ್ರೋಢೀಕರಿಸಿ ಮೃತದೇಹವನ್ನು ಸೌರವ್‌ನ ಊರಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಸೌರವ್ ಎಸ್ಸೆಸ್ಸೆಲ್ಸಿಯಲ್ಲಿರುವಾಗ ಆತ್ಮಹತ್ಯೆ ಯತ್ನಿಸಿದ ಬಗ್ಗೆ ಮಾಹಿತಿಯಿದೆ. ಆತನ ಡೆತ್‌ನೋಟ್ ವಶಕ್ಕೆ ಪಡೆಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಸಮಗ್ರ ತನಿಖೆ ಮುಂದುವರಿದಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights