‘ನನ್ನ ಹುಟ್ಟುಹಬ್ಬದ ಆಚರಣೆ ಮಾಡಬೇಡಿ’ ಅಭಿಮಾನಿಗಳಿಗೆ ನಟ ಮಾಧವನ್ ಮನವಿ!
ಕೊರೊನಾ ವೈರಸ್ ವೇಗವಾಗಿ ಹರಡುತ್ತಿರುವ ಈ ಸಮಯದಲ್ಲಿ ಹುಟ್ಟುಹಬ್ಬದ ಆಚರಣೆ ಬೇಡ ಎಂದು ಅಭಿಮಾನಿಗಳಲ್ಲಿ ಬಹುಭಾಷಾ ನಟ ಆರ್ ಮಾಧವನ್ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
‘ರೆಹನಾ ಹೈ ತೆರ್ರೆ ದಿಲ್ ಮೇ’ ಚಿತ್ರದ ಮೂಲಕ ಹೆಸರಾಗಿದ್ದ ಆರ್.ಮಾಧವನ್ ಅವರು ತಮ್ಮ 51 ನೇ ವರ್ಷದ ಜನ್ಮದಿನವನ್ನು ಜೂನ್ 1 ರಂದು ಆಚರಿಸಲಿದ್ದಾರೆ. ಅಭಿಮಾನಿಗಳು ತಮ್ಮ ಹುಟ್ಟುಹಬ್ಬದ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಶುಭಾಶಯಗಳನ್ನು ಕಳುಹಿಸಲು ಪ್ರಾರಂಭಿಸುತ್ತಿದ್ದಂತೆ, ನಿಶಾಬ್ದಮ್ ನಟ ಟ್ವಿಟ್ಟರ್ಗೆನಲ್ಲಿ ಸಂದೇಶ ಕಳುಹಿಸಿದ್ದಾರೆ. ಕೊರೋನಾ ಎರಡನೇ ಅಲೆಯಿಂದಾಗಿ ದೇಶ ತತ್ತರಿಸಿರುವುದರಿಂದ ಅವರ ಜನ್ಮದಿನಾಚರಣೆಯನ್ನು ಆಚರಿಸದೇ ಶಾಂತವಾಗಿರಿಸಬೇಕೆಂದು ಅವರು ವಿನಂತಿಸಿದರು.
ಮಾಧವನ್ ತಮ್ಮ ಜನ್ಮದಿನವನ್ನು ನಾಳೆ (ಜೂನ್ 1) ತಮ್ಮ ಕುಟುಂಬದೊಂದಿಗೆ ಸರಳವಾಗಿ ಆಚರಿಸಲಿದ್ದಾರೆ. ಶುಭಕೋರಿದ ಎಲ್ಲರಿಗೂ ಧನ್ಯವಾದ ಹೇಳಿದರು.
ಮಾರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಮಾಧವನ್ ಶೀಘ್ರದಲ್ಲೇ ರಾಕೆಟ್ರಿ: ದಿ ನಂಬಿ ಎಫೆಕ್ಟ್ ಚಿತ್ರದ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಹಿಂದಿ, ತೆಲುಗು, ಮಲಯಾಳಂ, ತಮಿಳು, ಇಂಗ್ಲಿಷ್ ಮತ್ತು ಕನ್ನಡದಲ್ಲಿ ರಾಕೆಟ್ರಿ ಬಿಡುಗಡೆಯಾಗಲಿದೆ. ಇದು ವಿಜ್ಞಾನಿ ಮತ್ತು ಏರೋಸ್ಪೇಸ್ ಎಂಜಿನಿಯರ್ ಎಸ್ ನಂಬಿ ನಾರಾಯಣನ್ ಅವರ ಜೀವನವನ್ನು ಆಧರಿಸಿದೆ. ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ, ನಂಬಿ ನಾರಾಯಣನ್ ಅವರ ಹೆಸರಿನಲ್ಲಿ ಮಾಧವನ್ ನಟಿಸಲಿದ್ದಾರೆ.