ಕೃಷಿ ಕ್ಷೇತ್ರದ ಬಳಿಕ ವಿದ್ಯುತ್ ವಿತರಣಾ ನಿಗಮಗಳ ಖಾಸಗೀಕರಣಕ್ಕೆ ಕೈ ಹಾಕಿದ ಕೇಂದ್ರ ಸರ್ಕಾರ!

ನರೇಂದ್ರ ಮೋದಿ ಸರಕಾರದ ಕಣ್ಣು ಈಗ ವಿದ್ಯುತ್ ಕ್ಷೇತ್ರದತ್ತ ಹೊರಳಿದೆ. ಕೃಷಿ ಕ್ಷೇತ್ರದಲ್ಲಿ ಮಹತ್ವದ ಕಾಯಿದೆ ತಿದ್ದುಪಡಿಗಳ ನಂತರ ಕೇಂದ್ರ ಸರಕಾರ  ವಿದ್ಯುತ್ ವಿತರಣಾ ನಿಗಮಗಳ ಖಾಸಗೀಕರಣ ಮಾಡಲು ಮುಂದಾಗಿದೆ.. ಈ ಮೂಲಕ ಆ ಕ್ಷೇತ್ರವನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಈಗ ಹೆಜ್ಜೆ ಇರಿಸಿದೆ.

ಈ ಸಂಬಂಧ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಕೇಂದ್ರ ಸರಕಾರವು ಸಿದ್ಧಪಡಿಸಿದ್ದು ಅದನ್ನು ರಾಜ್ಯ ಸರಕಾರಗಳಿಗೆ ರವಾನಿಸಲಾಗಿದೆ. ಈಗಾಗಲೇ ಹೆಚ್ಚಿನ ನೆರವು ಬೇಕಿದ್ದಲ್ಲಿ ವಿದ್ಯುತ್ ಕ್ಷೇತ್ರದ ಸುಧಾರಣೆಗೆ ಒಪ್ಪಬೇಕಾದ ಕಂಡೀಷನ್ ಹಾಕಿರುವ ಕೇಂದ್ರ ಸರಕಾರ ಡಿಸ್ಕಾಮ್‌ಗಳ ಖಾಸಗೀಕರಣದ ಮೂಲಕ ಬದಲಾವಣೆಗೆ ಮುನ್ನುಡಿ ಬರೆಯಲಿ ಹೊರಟಿದೆ.. ಇದುರೈತರಿರಿಗೆ ಮತ್ತೊಂದು ಮರಣ ಶಾಸನವಾಗಲಿದೆ ಎನ್ನಲಾಗುತ್ತಿದೆ…

ಈ ಕರಡು ಮಾರ್ಗಸೂಚಿಗಳಿಗೆ ಏನಾದರೂ ಆಕ್ಷೇಪ ಅಥವಾ ಸಲಹೆಗಳಿದ್ದಲ್ಲಿ ಅವುಗಳನ್ನು ಅಕ್ಟೋಬರ್‍ 5ರ ಒಳಗೆ ತಿಳಿಸುವಂತೆ ರಾಜ್ಯ ಸರಕಾರಗಳಿಗೆ ಕೇಂದ್ರವು ಸೂಚನೆ ನೀಡಿದೆ. ವಿದ್ಯುತ್ ವಿತರಣೆ ರಾಜ್ಯಗಳ ವ್ಯಾಪ್ತಿಗೆ ಬರುವ ವಿಚಾರವಾಗಿದ್ದು, ಕೇಂದ್ರ ಸರಕಾರವು ಮಾರ್ಗದರ್ಶಿಯ ಪಾತ್ರವನ್ನು ಮಾತ್ರ ವಹಿಸಬಹುದಾಗಿದೆ.

ಸದ್ಯ ದಿಲ್ಲಿ, ಮುಂಬಯಿ, ಅಹಮದಾಬಾದ್ ಮತ್ತು ಆಗ್ರಾ ನಗರಗಳಲ್ಲಿ ಮಾತ್ರ ವಿದ್ಯುತ್ ವಿತರಣೆ ಖಾಸಗಿಯವರ ಪಾಲಾಗಿದೆ. ಇತ್ತೀಚೆಗೆ ಘೋಷಿಸಲಾದ ಆತ್ಮ ನಿರ್ಭರ ಯೋಜನೆಯಡಿ ಎಲ್ಲ ಕೇಂದ್ರಾಡಳಿತ ಪ್ರದೇಶಗಳ ಡಿಸ್ಕಾಮ್‌ಗಳನ್ನು ಖಾಸಗೀಕರಣ ಮಾಡುವುದಾಗಿ ಘೋಷನೆ ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights