ಕೊರೊನ ವೈರಸ್ ವಿರುದ್ಧ ಪರೀಕ್ಷೆಗೆ 69 ಔಷಧಿಗಳನ್ನು ಗುರುತಿಸಿದ ವೈದ್ಯರು

ಸುಮಾರು 70 ಔಷಧಗಳು ಮತ್ತು ಸಂಯುಕ್ತ ಮಿಶ್ರಣಗಳು ಕೊರೊನ ಚಿಕೆತ್ಸೆಯ ಪರೀಕ್ಷೆಗಾಗಿ ಸಿದ್ಧವಾಗುತ್ತಿವೆ ಎಂದು ಅಮೆರಿಕಾದ ಸಂಶೋಧಕ ತಂಡ ಭಾನುವಾರ ಹೇಳಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಈಗಾಗಲೇ ಇತರ ರೋಗಗಳಿಗೆ ಬಳಸುವ ಔಷಧಗಳನ್ನು ಕೂಡ ಪರೀಕ್ಷೆಗೆ ಸಿದ್ಧಪಡಿಸಿದ್ದು, ಹೊಸದಾಗಿ ಮೊದಲಿನಿಂದ ವೈರಲ್ ವಿರೋಧಿ ಔಷಧಿ ಸಿದ್ಧಪದಿಸುವುದಕ್ಕೆ ಮೊದಲು ಇವುಗಳು ಪರಿಣಾಮಕಾರಿಯಾಗಬಹುದೇನೋ ಎಂದು ವಿಜ್ಞಾನಿಗಳು ಹೇಳಿದ್ದಾರೆ.

bioRxiv ಜಾಲತಾಣದಲ್ಲಿ ಪ್ರಕಟಿಸಿರುವ ಅಧ್ಯಯನದಲ್ಲಿ ಈ ಔಷದಿಗಳ ಪಟ್ಟಿಯನ್ನು ಹಾಕಲಾಗಿದೆ. ಶ್ವಾಸಕೋಶದ ಸೋಂಕಿಗೆ ಕಾರಣವಾಗುವ ಕೊರೊನ ವೈರಸ್ ತನ್ನ ಜೀನ್ ಗಳನ್ನು ಶ್ವಾಸಕೋಶದ ಕೋಶಗಳ ಒಳಗೆ ನುಸುಳಿ ಮನೆಮಾಡುತ್ತದೆ. ಅಲ್ಲಿ ವೈರಸ್ ಪ್ರೋಟೀನ್ ಗಳನ್ನು ಸೃಷ್ಟಿಸಿ ಮಿಲಿಯನ್ ಗಟ್ಟಲೆ ಹೊಸ ವೈರಸ್ ಗಳನ್ನೂ ಹುಟ್ಟಿಸುತ್ತದೆ. ವೈರಲ್ ಪ್ರೋಟೀನ್ ಈ ಕೆಲಸ ಮಾಡುವುದಕ್ಕೆ ಮನುಷ್ಯನ ಪ್ರೋಟೀನ್ ಗಳ ಅವಶ್ಯಕತೆ ಇದೆ.

ಈಗಿನ ಹೊಸ ಸಂಶೋಧನೆಯಲ್ಲಿ ವಿಜ್ಞಾನಿಗಳು ಕೊರೊನ ವೈರಸ್ ನ 29 ಜೀನ್ ಗಳಲ್ಲಿ ವೈರಲ್ ಪ್ರೋಟೀನ್ ಉತ್ಪಾದಿಸುವ 26 ಜೀನ್ ಗಳನ್ನು ಕಂಡುಹಿಡಿದಿದ್ದಾರೆ. ಹಾಗೆಯೇ ಕೊರೊನ ವೈರಸ್ ದಾಳಿ ಮಾಡುವ 332 ಮಾನವನ ಪ್ರೋಟೀನ್ ಗಳನ್ನೂ ಪತ್ತೆ ಹಚ್ಚಿದ್ದಾರೆ.

ಕೆಲವು ವೈರಲ್ ಪ್ರೋಟೀನ್ ಗಳು ಕೇವಲ ಒಂದು ಮನುಷ್ಯನ ಪ್ರೋಟೀನ್ ಮೇಲೆ ದಾಳಿ ಮಾಡಿದರೆ ಇನ್ನು ಕೆಲವು ವೈರಲ್ ಪ್ರೋಟೀನ್ ಗಳು ಡಜನ್ ಗಟ್ಟಲೆ ಕೋಶ ಪ್ರೋಟೀನ್ ಗಳ ಮೇಲೆ ದಾಳಿಯಿಡುತ್ತವೆ ಎಂದು ಕಂಡುಬಂದಿದೆ.

ಕೊರೊನ ವೈರಲ್ ಪ್ರೋಟೀನ್ ಗಳು ಹೆಚ್ಚಾಗುವುದಕ್ಕೆ ಬೇಕಾಗುವ ಮನುಷ್ಯನ ಪ್ರೋಟೀನ್ ಗಳನ್ನು ಕಾಪಾಡಬಲ್ಲ ಔಷಧಿಗಳಿಗೆ ಸಂಶೋಧನೆ ನಡೆಸಿದಾಗ, ಈ ವೈರಸ್ ಗೆ ಸಂಬಂಧ ಇಲ್ಲದ ಕ್ಯಾನ್ಸರ್, ಪಾರ್ಕಿನ್ಸನ್ ಖಾಯಿಲೆ ಮತ್ತು ರಕ್ತದೊತ್ತಡಕ್ಕೆ ನೀಡುವ ಅಧಿಕೃತ ಔಷಧಗಳು ಕೂಡ ಪರಿಣಾಮಕಾರಿಯಾಗಬಲ್ಲ ಸೂಚನೆ ಸಿಕ್ಕಿದೆ.

ಸೀಜೋಫ್ರೀನಿಯಾ ಚಿಕಿತ್ಸೆಗೆ ನೀಡುವ ಹಾಲೋಪೆರಿಡಾಲ್, ಟೈಪ್ ೨ ಡಯಾಬೆಟಿಸ್ ಚಿಕಿತ್ಸೆಗೆ ನೀಡುವ ಮೆಟ್ ಫಾರ್ಮಿನ್ ಕೂಡ ಈ ಪಟ್ಟಿಯಲ್ಲಿ ಬಂದಿರುವುದು ಅಚ್ಚರಿ. ಇನ್ನು ಹಲವು ದೇಶಗಳಲ್ಲಿ ಮಲೇರಿಯಾ ರೋಗಕ್ಕೆ ಬಳಸುವ ಚಿಕತ್ಸೆ ಪರಿಣಾಮಕಾರಿಯಾಗಿರುವ ಅಧ್ಯಯನಗಳು ಕೂಡ ಪ್ರಕಟವಾಗಿವೆ.

ಆದರೆ ಇವುಗಳ ಪರೀಕ್ಷೆಯನ್ನು ವ್ಯಾಪಕವಾಗಿ ನಡೆಸಿ ಮಾತ್ರವೇ ತೀರ್ಮಾನಕ್ಕೆ ಬರಲು ಸಾಧ್ಯ ಎಂಬುದು ವಿಜ್ಞಾನಿಗಳ ನಂಬಿಕೆ. ಇದಕ್ಕೆ ಇನ್ನೂ ಹಲವು ತಿಂಗಳುಗಲು ಕಾಯುವ ಅವಶ್ಯಕತೆ ಇದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights