ಕೃಷಿ ಮಸೂದೆ ವಿರೋಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹರ್ಸಿಮ್ರತ್ ಕೌರ್ ಬಂಧನ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯನ್ನು ವಿರೋಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಂಸದೆ ಹರ್ಸಿಮ್ರತ್ ಕೌರ್‌ ಬಾದಲ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿ ದಳವು ಕೃಷಿ ಮಸೂದೆಯನ್ನು ವಿರೋಧಿಸಿ ಕಿಸಾನ್‌ ಮಾರ್ಚ್‌ ಹೆಸರಿನ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಸಂದರ್ಭದಲ್ಲಿ ಚಂಡೀಗಢದಲ್ಲಿ ಹರ್ಸಿಮ್ರತ್‌ ಅವರನ್ನು ಬಂಧಿಸಲಾಗಿದೆ.

ಅಕಾಲಿ ದಳವು ಪಂಜಾಬ್‌ನಲ್ಲಿ ಕೃಷಿ ಮಸೂದೆಯನ್ನು ವಿರೋಧಿಸಿ ಮೂರು ಭಾಗಗಳಿಂದ ಪ್ರತಿಭಟನಾ ಮೆರವಣಿಗೆ ಆಯೋಜಿಸಿತ್ತು. ಅಕಾಲಿದಳ ಮುಖ್ಯಸ್ಥ ಸುಖ್ಭೀರ್​ ಸಿಂಗ್​ ಬಾದಲ್​, ಹರ್ಸೀಮ್ರತ್​ ಕೌರ್, ಪ್ರೇಮ್​ ಸಿಂಗ್​ಅವರು ಒಂದು ಮೆರಣವಣಿಗೆಯ ನೇತೃತ್ವ ವಹಿಸಿದ್ದರು. ಮೂರೂ ಮೆರವಣಿಗೆಗಳು ಚಂಡೀಘಡದಲ್ಲಿ ಸೇರಿ ಬೃಹತ್‌ ಪ್ರತಿಭಟನಾ ಸಮಾವೇಶ ನಡೆಸಲು ಉದ್ದೇಶಿಸಿದ್ದವು.

ಈ ವೇಳೆ ಅಮೃತಸರದಿಂದ ಪ್ರತಿಭಟನಾ ಮೆರವಣಿಗೆಯನ್ನು ಮುನ್ನಡೆಸಿಕೊಂಡು ಬಂದ ಹರ್ಸಿಮ್ರತ್ ಕೌರ್‌ ಅವರನ್ನು ಚಂಡೀಘಡ ಗಡಿ ಭಾಗದಲ್ಲಿ ಪೊಲೀಸರು ಬಂಧಿಸಿದ್ದಾರೆ.

ರೈತರ ಪರ ಧ್ವನಿ ಎತ್ತಿದ್ದಕ್ಕಾಗಿ ನಮ್ಮನ್ನು ಬಂಧಿಸಲಾಗಿದೆ. ಅವರು ನಮ್ಮ ಧ್ವನಿ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಾವು ಸತ್ಯವನ್ನು ಅನುಸರಿಸುತ್ತೇವೆ. ನಮ್ಮ ಧ್ವನಿಯನ್ನು ಬಲಪ್ರಯೋಗದ ಮೂಲಕ ಧಮನ ಮಾಡಲು ಬಿಡುವುದಿಲ್ಲ ಎಂದು ಹರ್ಸಿಮ್ರತ್ ಕೌರ್ ಟ್ವೀಟ್‌ ಮಾಡಿ ಕಿಡಿಕಾರಿದ್ದಾರೆ.

ಬಿಜೆಪಿಯ ಹಳೆ ಮೈತ್ರಿ ಪಕ್ಷವಾಗಿದ್ದ ಅಕಾಲಿದಳವು ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ಎನ್​ಡಿಎ ಒಕ್ಕೂಟದಿಂದ ಹೊರ ಬಂದಿದೆ.


ಇದನ್ನೂ ಓದಿ: ಖೈರ್ಲಾಂಜಿಯಿಂದ ಹತ್ರಾಸ್‌ವರೆಗೆ ದಲಿತರ ಮೇಲಿನ ಅತ್ಯಾಚಾರ ಮತ್ತು ದಮನದ ಕಥನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights