“ರಮೇಶ್ ಗೆ ಇಂದು ಕೊರೊನಾ ನಾಳೆ ..ಡ್ಸಾ ಬೈರತಿ ಬಸವರಾಜ್?” – ವಕೀಲ ಸೂರ್ಯಮುಕುಂದರಾಜ್ ವ್ಯಂಗ್ಯ!

ಮಾಜಿ ಸಚಿವ ರಮೇಶ್ ಸಿಡಿ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಅನಾರೋಗ್ಯದ ಕಾರಣ ಹೇಳಿ ವಿಚಾರಣೆಗೆ ಗೈರಾಗುತ್ತಿದ್ದ ರಮೇಶ್ ಜಾರಕಿಹೊಳಿಗೆ ಕೊರೊನಾ ತಗುಲಿದೆ ಎಂದು ಸಚಿವ ಬೈರತಿ ಬಸವರಾಜ್ ಹೇಳಿದ್ದಾರೆ. ಹೀಗಾಗಿ ರಮೇಶ್ ಜಾರಕಿಹೊಳಿ ಎಸ್ಐಟಿ ವಿಚಾರಣೆ ಹಾಜರಾಗುವುದು ಡೌಟ್ ಎನ್ನಲಾಗುತ್ತಿದೆ.

ಬೆಳಗಾವಿ ಬೈ ಎಲೆಕ್ಷನ್ ಹಿನ್ನಲೆ ಮಾತನಾಡಿದ ಸಚಿವ ಬೈರತಿ ಬಸವರಾಜ್, ” ನಾನು ರಮೆಶ್ ಜಾರಕಿಹೊಳಿಗೆ ಮಾತನಾಡಿದ್ದೇನೆ. ಅವರಿಗೆ ಕೊರೊನಾ ಇರುವುದರಿಂದ ಪ್ರಚಾರಕ್ಕೆ ಹಾಜರಾಗಿಲ್ಲ. ರಮೇಶ್ ಬೆಳಗಳೂರಿನಲ್ಲೇ ಇದ್ದಾರೆ. ಚೇತರಿಕೆ ಬಳಿಕ ಪ್ರಚಾರಕ್ಕೆ ಆಗಮಿಸುತ್ತಾರೆ ” ಎಂದಿದ್ದಾರೆ.

ಹೀಗಾಗಿ ಟ್ವಿಟ್ ಮಾಡಿದ ಸೂರ್ಯಮುಕುಂದರಾಜ್ ” ಇಂದು ಕೊರೊನಾ ನಾಳೆ ..ಡ್ಸ್? ಬೈರತಿ ಬಸವಚರಾಜ್” ಎಂದು ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ಧಾರೆ.

ಜೊತೆಗೆ ಕಾಂಗ್ರೆಸ್ ಕೂಡ ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದೆ. “ಸರ್ಕಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರವಾಗಿ ನಿಂತುಕೊಂಡಿದೆ. ಪ್ರಮುಖ ಆರೋಪಿಗೆ ರಾಜ ಮರಿಯಾದೆ ಕೊಡುತ್ತಿದೆ. ಅತ್ಯಾಚಾರದ ಆರೋಪಿಯನ್ನು ನೆಪ ಮಾತ್ರ ವಿಚಾರಣೆ ನಡೆಸಲಾಗುತ್ತಿದೆ” ಎಂದು ಬಿಜೆಪಿ ವಿರುದ್ಧ ಸಿಡಿದೆದ್ದು ಕಾಂಗ್ರೆಸ್ ಟ್ವೀಟ್ ಮಾಡುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights