ನಿಜವಾಯ್ತು ಏನ್‌ಸುದ್ದಿ ಅನುಮಾನ!: ಅಂತೂ ರಮೇಶ್ ಜಾರಕಿಹೊಳಿಗೆ ಬಂತು ಕೊರೊನಾ!
ಸಿಡಿ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು, ಕಳೆದು ಮೂರು ದಿನಗಳಿಂದ ಅನಾರೋಗ್ಯದ ನೆಪವೊಡ್ಡಿ ವಿಚರಣೆಯಿಂದ ತಪ್ಪಿಕೊಂಡಿದ್ದರು. ಇಂದು ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಹೇಳಲಾಗಿದ್ದು, ಏನ್‌ಸುದ್ದಿ.ಕಾಂ ವ್ಯಕ್ತಪಡಿಸಿದ್ದ ಅನುಮಾನ ಸತ್ಯವಾಗಿದೆ.
ಸಿಡಿ ಪ್ರಕರಣದ ಅತ್ಯಾಚಾರ ಸಂತ್ರಸ್ತೆ ನ್ಯಾಯಾಲಯದ ಮುಂದೆ ಹಾಜರಾಗಿ, ಹೇಳಿಕೆ ನೀಡಿದಾಗಿನಿಂದಲೂ ರಮೇಶ್ ಜಾರಕಿಹೊಳಿ ಯಾರ ಕೈಗೂ ಸಿಗದೇ, ವಿಚಾರಣೆಗೂ ಬಾರದೆ ಕುಂಟು ನೆಪಗಳನ್ನು ಹೇಳುತ್ತಿದ್ದರು. ಹೀಗಾಗಿ ಬಹುಶಃ ಅವರಿಗೆ ಸೋಮವಾರ ಕೊರೊನಾ ಪಾಸಿಟಿವ್ ಬರಬಹುದು. ಇದರಿಂದ ಅವರು 15 ದಿನಗಳ ಕಾಲ ಎಸ್‌ಐಟಿ ಇಂದ ತಪ್ಪಿಸಿಕೊಳ್ಳಬಹುದು ಎಂದು ಏನ್‌ಸುದ್ದಿ ಅನುಮಾನ ವ್ಯಕ್ತಪಡಿಸಿ, ವರದಿ ಮಾಡಿತ್ತು. ಇದೀಗ ಅದು ಸತ್ಯವಾಗಿದೆ.
ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ್ ಖಚಿತ ಪಡಿಸಿದ್ದಾರೆ. ಅವರಿಗೆ ಕೊರೊನಾ ಧೃಢಪಟ್ಟಿರುವುದರಿಂದ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರದಿಂದ ದೂರ ಉಳಿಯಲಿದ್ದಾರೆ ಎಂದು ತಿಳಿಸಿದ್ದಾರೆ.
ನಿನ್ನೆ ರಮೇಶ್ ಜಾರಕಿಹೊಳಿಗೆ ದೂರವಾಣಿ ಕರೆ ಮಾಡಿದ್ದ ವೇಳೆ, ತಮಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಎಸ್‍ಐಟಿ ವಿಚಾರಣೆಗೂ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಸುಧಾರಿಸಿದ ನಂತರ ತನಿಖಾಧಿಕಾರಿಗಳ ಮುಂದೆ ಹಾಜರಾಗುವುದಾಗಿ ಹೇಳಿಕೊಂಡರೆಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಬಂಧನ ಭೀತಿ: ಸೋಮವಾರ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಬರುವುದು ಖಚಿತ?

