ನಾಯಕತ್ವ ಬಿಟ್ಟುಕೊಡಲು ಬಿಎಸ್ವೈಗೆ ಗಡುವು ನೀಡಿದಿಯಾ ಹೈಕಮಾಂಡ್? : ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆ!

ನಾಯಕತ್ವ ಬಿಟ್ಟುಕೊಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗಡುವು ನೀಡಿದೆಯೇ ಎಂಬ ವಿಚಾರವಾಗಿ ರಾಜಕೀಯ ವಲಯದಲ್ಲಿ ಸಾಕಷ್ಟು ಬಿಸಿ ಚರ್ಚೆ, ಗುಸುಗುಸು ನಡೆಯುತ್ತಿದೆ. ದಿಲ್ಲಿ ಭೇಟಿ ವೇಳೆ ಸಂಪುಟ ವಿಸ್ತರಣೆಗೆ ಹೈಕಮಾಂಡಿನ ಒಪ್ಪಿಗೆ ಪಡೆಯಲಾರದೇ ಹಿಂತಿರುಗಿದ ಯಡಿಯೂರಪ್ಪನವರಿಗೆ ಸಿಎಂ ಆಗಿ ಇದೇ ಕೊನೆಯ ಅಧಿವೇಶನವಾಗುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ಹೇಳಿರುವ ವರದಿಗಳಿವೆ.

ಅಕ್ಟೋಬರ್ 6ರ ಹೊತ್ತಿಗೆ ನಾಯಕತ್ವ ಬದಲಾವಣೆ ಸಂಬಂಧ ತಮ್ಮ ಒಪ್ಪಿಗೆ ಸೂಚಿಸುವಂತೆ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿಗೆ ಸೂಚನೆ ನೀಡಿದೆ ಎಂಬುದು ಸದ್ಯದ ಬಿಸಿ ಮಾತಾಗಿದೆ. ನಾಯಕತ್ವಯ ತ್ಯಾಗಕ್ಕೆ ಬಿಎಸ್ವೈ ಕನಿಷ್ಟ ಮುಂದಿನ ವರ್ಷದ ಬಜೆಟ್‌ವರೆಗೆ ಸಮಯಾವಕಾಶ ಕೋರಿದ್ದರಾದರೂ ಅದನ್ನು ಪೂರೈಸಲು ಬಿಜೆಪಿಯ ದಿಲ್ಲಿ ಪ್ರಭುಗಳು ಮನಸ್ಸು ಮಾಡಿದಂತಿಲ್ಲ ಎನ್ನುತ್ತವೆ ಮೂಲಗಳು.

ಈ ಮಧ್ಯೆ ಯಡಿಯೂರಪ್ಪ ಅವರ ಕೋರಕೆ ಈಡೇರಿಸುವಂತೆ ಬಿಜೆಪಿ ಹೈಕಮಾಂಡಿನ ಮೇಲೆ ರಾಜ್ಯದ ಕೆಲವು ಆರೆಸ್ಸೆಸ್ ಮುಖಂಡರು ಪ್ರಯತ್ನ ನಡೆಸಿದ್ದಾರೆ ಎಂದೂ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಒಟ್ಟಿನಲ್ಲಿ ಸಂಸತ್ತಿನ ಅಧಿವೇಶನ ಮುಗಿದ ನಂತರ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುವುದು ನಿಶ್ಚಿತ ಎಂಬದು ಬಿಎಸ್ವೈ ವಿರೋಧಿ ಪಾಳೆಯದ ಲೆಕ್ಕಾಚಾರವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights