ಅತ್ಯಾಚಾರದ ಆರೋಪ : ಕೈ-ಕಾಲು ಕಟ್ಟಿ ವ್ಯಕ್ತಿಗೆ ಮೂತ್ರ ಕುಡಿಸಿದ ಚಿಕ್ಕಪ್ಪ-ಚಿಕ್ಕಮ್ಮ..!

ವ್ಯಕ್ತಿಯೋರ್ವನ ಮೇಲೆ ಅತ್ಯಾಚಾರದ ಆರೋಪ ಹೋರಿಸಿದ ಸಂಬಂಧಿಕರು ಆತನಿಗೆ ಮನಬಂದಂತೆ ಥಳಿಸಿ ಬಲವಂತವಾಗಿ ಮೂತ್ರ ಕುಡಿಸಿ ಹಿಂಸೆ ನೀಡಿದ ಅಮಾನವೀಯ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

ರಾಜಸ್ಥಾನದ ಕೋಟಾದಲ್ಲಿ 22 ವರ್ಷದ ವ್ಯಕ್ತಿಯೊಬ್ಬನನ್ನು ಕಟ್ಟಿ, ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸೆಪ್ಟೆಂಬರ್ 14 ರಂದು ಈ ಘಟನೆ ನಡೆದಿದೆ. ಎರಡು ದಿನಗಳ ನಂತರ ವ್ಯಕ್ತಿಯ ಅಣ್ಣ ದೂರದ ಸಂಬಂಧಿಗಳಾದ ಚಿಕ್ಕಮ್ಮ ಮತ್ತು ಚಿಕ್ಕಪ್ಪನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ವೇಳೆ ಥಳಿಸಲ್ಪಟ್ಟ ವ್ಯಕ್ತಿ ತಮ್ಮ ಮನೆಗೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಆದರೆ ಆರೋಪಿತ ಅಣ್ಣ ಹೇಳುವುದೇ ಬೇರೆ. ಹಣದ ಆಸೆಗೆ ಬಿದ್ದು ಸಂಬಂಧಿಕರು ಈ ರೀತಿ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ‘ಯುವಕನನ್ನು ದೂರದ ಸಂಬಂಧಿಕರು ಸೆಪ್ಟೆಂಬರ್ 14 ರ ಸಂಜೆ ಕೋಟಾ ಜಿಲ್ಲೆಯ ಜಗಪುರ ಗ್ರಾಮದಲ್ಲಿ ತಮ್ಮ ಮನೆಗೆ ಆಹ್ವಾನಿಸಿದ್ದಾರೆ. ನಂತರ ಅವರು ಆತನ ಕೈ ಮತ್ತು ಕಾಲುಗಳನ್ನು ಕಟ್ಟಿ ರಾತ್ರಿಯಿಡೀ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಬಳಿಕ ಅವರು ಆತನ ಮೊಬೈಲ್ ಫೋನ್, ಗುರುತಿನ ಚೀಟಿ ಮತ್ತು 22 ಸಾವಿರ ನಗದನ್ನು ತೆಗೆದುಕೊಂಡು ಆತನಿಗೆ ಮನಬಂದಂತೆ ಥಳಿಸಿದ್ದಾರೆ. ಈ ವೇಳೆ ಕ್ರೂರವಾಗಿ ಥಳಿಸುವ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಅದನ್ನು ತಪ್ಪಾಗಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ’ ಎಂದು ಸಹೋದರ ಹೇಳಿದ್ದಾರೆ. ಅಣ್ಣನ ದೂರಿನ ಆಧಾರದ ಮೇಲೆ ಸಂಬಂಧಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

ಬಲಿಪಶು ಅಹಮದಾಬಾದ್‌ನಲ್ಲಿ ಒಬ್ಬ ಕೂಲಿ ಕೆಲಸಗಾರನಾಗಿದ್ದು, ಘಟನೆ ಸಂಭವಿಸಿದಾಗ ಕೆಲವು ದಿನಗಳ ಕಾಲ ಕೋಟಾಗೆ ಮನೆಗೆ ಮರಳಿದ್ದ. ಆರೋಪಿ ಚಿಕ್ಕಪ್ಪ ಹೋಂ ಗಾರ್ಡ್‌ನಲ್ಲಿ ಕೆಲಸ ಮಾಡುತ್ತಾನೆ.

“ಈಗ ಹೊರಹೊಮ್ಮಿರುವ ವಿಡಿಯೋ ಆಧರಿಸಿ, ದಂಪತಿ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ. ಅದರ ನಂತರ ಕ್ರಮ ಕೈಗೊಳ್ಳಲಾಗುವುದು” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಜೈನ್ ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights