ತರಬೇತಿ ಸಂಸ್ಥೆಗಳ ವಿಚಾರದಲ್ಲಿ ಇಲಾಖೆಯ ಧೋರಣೆ ಖಂಡಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಯುಕ್ತರಿಗೆ ಮನವಿ ಪತ್ರ ಸಲ್ಲಿಕೆ!

ರಾಜ್ಯದ ಖಾಸಗಿ ಹಾಗೂ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ಮೇಲೆ ಕೇಂದ್ರ ಕೈಗಾರಿಕಾ ಇಲಾಖೆ ಹಾಗೂ ರಾಜ್ಯ ಕೈಗಾರಿಕಾ ತರಬೇತಿ ಇಲಾಖೆಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯದ ಎಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಗಳ ಅಧ್ಯಕ್ಷರು ಮತ್ತು ಪ್ರಾಂಶಪಾಲರು ಮತ್ತು ಮುಖಂಡರು ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತ ಹರೀಶ್ ರವರಿಗೆ ಮನವಿ ಪತ್ರ ಸಲ್ಲಿಸಿದೆ.

2013 ರಿಂದ ಇದೂವರೆವಿಗೂ ರಾಜ್ಯದಲ್ಲಿರುವ ಐಟಿಐ ಸಂಸ್ಥೆ ಗಳಿಗೆ ಹಾಗೂ ತರಬೇತಿ ಪಡೆದಿರುವ ಪಡೆಯುತ್ತಿರುವ ವಿದ್ಯಾರ್ಥಿಗಳಿಗೂ ಹಲವಾರು ರೀತಿಯಲ್ಲಿ ಕೇಂದ್ರದ ಇಲಾಖೆಯ ಆದೇಶ ಹಾಗೂ ರಾಜ್ಯ ಇಲಾಖೆಯು ನೀಡಿರುವ ನಿರ್ದೇಶನಗಳು ಬಂದಕ್ಕೊಂದು ಹೋಲಿಕೆಯಾಗದಂತೆ ಆದೇಶಗಳನ್ನು ನೀಡಿ ಹಲವಾರು ರೀತಿಯಲ್ಲಿ ರಾಜ್ಯದ ಮಕ್ಕಳ ಭವಿಷ್ಯಕ್ಕೆ ಐಟಿಐ ಸಂಸ್ಥೆ ಗಳಿಗೂ ತೊಂದರೆ ಯಾಗಿದ್ದು ಅದರಂತೆ ವಿದ್ಯಾರ್ಥಿಗಳಿಗೆ ಐಟಿಐ ಸಂಸ್ಥೆಗಳ ಸಿಬ್ಬಂದಿಗಳಿಗೆ ನೀಡಬೇಕಾದ ಸೌಲಭ್ಯ ಮತ್ತು ಆರ್ಥಿಕ ನೆರವನ್ನು ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರ ಸಹಕರಿಸಿದೆ ಇರುವುದು ರಾಜ್ಯದ ಉನ್ನತಿಗೆ ಸರ್ಕಾರವೆ ಧೋರಣೆ ಮಾಡಿದಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.

ವಿವಿಧ ಸಂಸ್ಥೆ ಸಂಘಟನೆ ಮತ್ತು ಕೈಗಾರಿಕಾ ತರಬೇತಿ ಸಂಸ್ಥೆಗಳ ಬೇಡಿಕೆಗಳು ಹೀಗಿವೆ: 

  • ಸಿಇಟಿ ಪರೀಕ್ಷೆ ತಕ್ಷಣ ರದ್ದುಪಡಿಸುವುದು.
  • ನಾಲ್ಕು ವೃತ್ತಿ ಘಟಕಗಳು ಪ್ರಾರಂಭಿಸುವ ಹೊಸ ಆದೇಶ ಹಿಂಪಡಿಯುವುದು.
  • ಏಳು ವರ್ಷ ಪೂರೈಸಿದ ಐಟಿಐಗಳ ಸಿಬ್ಬಂದಿಯನ್ನು ವೇತನಾನುದಾನಕ್ಕೆ ಒಳಪಡಿಸುವುದು.
  • 2018 ರಿಂದ 2021 ನೇ ಸಾಲಿನಲ್ಲಿ ಕೋವಿಡ್ ಕಾರಣದಿಂದ ಪರೀಕ್ಷೆ ಸರಿಯಾದ ಸಮಯಕ್ಕೆ ಹಾಗೂ ವಿದ್ಯಾರ್ಥಿಗಳ ಮನಸ್ಥಿತಿ ಹಾಗೂ ಪೋಷಕರ ಪರಿಸ್ಥಿತಿ ಮತ್ತು ಪರೀಕ್ಷಾ ನಿಯಮಗಳ ಗೊಂದಲವಿದ್ದ ಕಾರಣ ಪರೀಕ್ಷೆ ಪಡೆಯದೆ ವಿದ್ಯಾರ್ಥಿಗಳು ಮುಂದಿನ ಭವಿಷ್ಯಕ್ಕೆ ವಿದ್ಯಾರ್ಥಿಗಳನ್ನು ಪಿಯುಸಿ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಿದ್ದಾರೆ ಎಂದು ಹೇಳಿದ ಆಗೆ ನಮ್ಮ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣರಾಗಿದ್ದಾರೆ ಎಂದು ಆದೇಶ ಹೊರಡಿಸಬೇಕು.
  • ಸ್ಥಳಾಂತರಗೊಂಡ ಐಟಿಐ ಗಳಿಗೆ ಕೊಡಲೆ ಸಂಯೋಜನೆ ಅಧಿಕೃತಗೊಳಿಸುವುದು.
  • ಕೋವಿಡ್ ಕಾರಣ ಪ್ರತಿ ಐಟಿಐ ಸಂಸ್ಥೆ ಗಳಿಗೆ ಪ್ರತಿ ವೃತ್ತಿ ಘಟಕ್ಕೆ 10 ಸಾವಿರ ಪರಿಹಾರ ಧನ ನೀಡುವುದು.
  • ಖಾಸಗಿ ಐಟಿಐಗಳಲ್ಲಿ ವ್ಯಾಸಂಗ ಮಾಡುವ ತರಬೇತಿದಾರರಿಗೆ ಸರ್ಕಾರದಿಂದ ನೀಡುವ ಭೋದನಾ ಶುಲ್ಕವನ್ನು ಕಾಲೇಜುಗಳ ಖಾತೆಗೆ ನೀಡುವುದು.
  • ತರಬೇತಿದಾರರಿಗೆ ಸುಮಾರು 5 ವರ್ಷಗಳಿಂದ ನೀಡದೆ ಇರುವ ಲ್ಯಾಫ್ ಟಾಪ್ ಟೂಲ್ ಕಿಟ್ ಗಳನ್ನು ಕೊಡಲೆ ಖಾಸಗಿ ಐಟಿಐಗಳಿಗೆ ವಿತರಿಸುವುದು.
  • ಕನಿಷ್ಠ ೫ ವರ್ಷ ಗಳಲ್ಲಿ ನಿಧನರಾದ ಸಿಬ್ಬಂದಿ ವರ್ಗದವರ ಕುಟುಂಬಕ್ಕೆ ಪರಿಹಾರ ನಿಧಿಯನ್ನು ಜಾರಿಗೊಳಿಸುವುದು.
  • 2018 ರಲ್ಲಿ ಪ್ರಾರಂಭವಾದ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಖಾಸಗಿ ಕಾಲೇಜುಗಳಿಗೆ 2 ಎಕರೆ ಜಮೀನು ಮಂಜೂರು ಮಾಡಿ ಕೊಡಬೇಕು.

ಹಕ್ಕೊತ್ತಾಯ ಮನವಿ ಸಲ್ಲಿಕೆಯ ಮೇಳೆ ಖಾಸಗಿ ಐಟಿನ ಕಾರ್ಯದರ್ಶಿಗಳಾದ ವಿಜಯಪ್ರಕಾಶ್, ಜಗದೀಶ್ ಕುಮಾರ್, ರಾಜೇಂದ್ರ, ಹನುಮಂತರಾಯಪ್ಪ, ಮಂಜುನಾಥ್, ಮೋಹನ್, ಶಿವಶಂಕರ್ ಪ್ರಾಚಾರ್ಯರಾದ ಸೋಮಶೇಖರ್, ಸಂತೋಷ್, ರವಿ, ಪುನೀತ್, ವೆಂಕಟೇಶ್ ಮತ್ತಿತರರು ಇದ್ದರು.

ಇದನ್ನೂ ಓದಿ: ಭವಾನಿಪುರ ಉಪ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಗೆಲುವು ಖಚಿತ: ಹೆಚ್‌ಡಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights