ಭೀಕರ ರಸ್ತೆ ಅಪಘಾತದಲ್ಲಿ ಮರಾಠಿ ನಟಿ ಈಶ್ವರಿ ದೇಶಪಾಂಡೆ ದುರ್ಮರಣ..!

ಭೀಕರ ರಸ್ತೆ ಅಪಘಾತದಲ್ಲಿ ಸ್ನೇಹಿತನ ಜೊತೆ ಹೆಸರಾಂತ ಮರಾಠಿ ನಟಿ ಈಶ್ವರಿ ದೇಶಪಾಂಡೆ ನಿಧನರಾದರು ಎಂದು ಗೋವಾ ಪೊಲೀಸರು ಬಹಿರಂಗಪಡಿಸಿದ್ದಾರೆ.

ಸೆಪ್ಟೆಂಬರ್ 21ರ ಸೋಮವಾರ ಗೋವಾದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ನಟಿ ಈಶ್ವರಿ ಮೃತಪಟ್ಟಿದ್ದಾರೆ. 25ರ ಹರೆಯದ ನಟಿ ತನ್ನ ಸ್ನೇಹಿತ ಶುಭಂ ದಡ್ಗೆ ಜೊತೆ ಪ್ರಯಾಣಿಸುತ್ತಿದ್ದರು. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಲವಾರು ಮರಾಠಿ ಧಾರಾವಾಹಿಗಳಲ್ಲಿ ಹೆಸರುವಾಸಿಯಾಗಿದ್ದ ಈಶ್ವರಿ ದೇಶಪಾಂಡೆ ಮರಾಠಿ ಚಿತ್ರರಂಗ ಮಾತ್ರವಲ್ಲದೇ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಬರ್ದೇಝ್ ತಾಲೂಕಿನ ಅರ್ಪೋರಾ ಅಥವಾ ಹಡ್ಫಡೆ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಈಶ್ವರಿಯ ಕಾರು ಬೆಳಿಗ್ಗೆ 5:30 ಸುಮಾರಿಗೆ ಬಾಗಾ ಕ್ರೀಕ್ ಗೆ ನುಗ್ಗಿದೆ. ಈಶ್ವರಿ ಹಾಗೂ ಆಕೆಯ ಸ್ನೇಹಿತ ನೀರಿನ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪ್ರಾಥಮಿಕ ತನಿಖೆಯು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರುವ ಶಂಕೆ ಇದೆ ಎಂದು ಅಂಜುನಾ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ಸೂರಜ್ ಗವಾಸ್ ಹೇಳಿದ್ಧಾರೆ.

ಈಶ್ವರಿ ಮತ್ತು ಶುಭಂ ಮುಂದಿನ ತಿಂಗಳು ನಿಶ್ಚಿತಾರ್ಥ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದರು. ರಜೆಯ ನಿಮಿತ್ತ ಗೋವಾಕ್ಕೆ ತೆರಳಿದ್ದರು ಎಂದು ಮಾಧ್ಯಮ ವರದಿಗಳು ಹೇಳಿದೆ. ಅವರಿಬ್ಬರು ಅಪಘಾತವನ್ನು ಎದುರಿಸುವ ಮೊದಲು ಕ್ಲಬ್‌ಗೆ ಭೇಟಿ ನೀಡಿರಬಹುದು ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಈ ಘಟನೆಯು ಈಶ್ವರಿ ಮತ್ತು ಶುಭಂ ಅವರ ಕುಟುಂಬಗಳನ್ನು ಆಘಾತಕ್ಕೀಡು ಮಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights