Alert :ಕರೋನಾ ನಂತರ ಮಂಗಳೂರಿನತ್ತ ಆಂಫನ್ ಚಂಡಮಾರುತ, ಹೈ ಅಲರ್ಟ್ ಘೋಷಣೆ.

ಕರೋನಾ ವೈರಸ್, Lock down ನಿಂದ ಇಗಾಗಲೇ ತತ್ತರಿಸಿರುವ ಕರ್ನಾಟಕದ ಕರಾವಳಿ ತಿರಕ್ಕೆ ಮತ್ತೊಂದು ಗಂಢಾತರ  ಬಂದ ಒರಗಿದೆ.. ಆಂಫನ್ ಚಂಡಮಾರುತ ರಾಜ್ಯದ ಕರಾವಳಿಯತ್ತ ಬರುತ್ತಿದ್ದು, ಮಂಗಳೂರಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ..

ಲೆಕ್ಕಾವಾರಕಿಂತ ಬೀಕರ ಸ್ಚರೂಪ ಪಡೆಯುತ್ತಿರುವ ಆಂಫನ್ ಚಂಡಮಾರುತ ಮಹಾ ಚಂಡಮಾರುತವಾಗುವ ಲಕ್ಷಣ ತೋರಿದ ,  ಇದಕ್ಕಾಗಿ ಕರಾವಳಿಯಲ್ಲಿ ಕಟ್ಟೆಚ್ಚರ  ಘೋಷಿಸಲಾದೆ..ಕೊರೋನಾ ಭೀತಿಯ ನಡುವೆಯೇ ಬೀಸುತ್ತಿರುವ ಆಂಫನ್ ಚಂಡಮಾರುತ ತೀವ್ರ ಸ್ವರೂಪ ಪಡೆಯುತ್ತಿದ್ದು, ಮಂಗಳೂರಿನಲ್ಲಿ ಕಟ್ಟೆಚ್ಚರಿಕೆ (ಹೈ ಅಲರ್ಟ್) ಘೋಷಿಸಲಾಗಿದೆ.

ಭಾರೀ ರಭಸ ಹಾಗೂ ತೀವ್ರ ಪಡೆದುಕೊಂಡಿರುವ ಆಂಫನ್ ಈಗ ಮಹಾ ಮಾರುತವಾಗುವ (ಸೂಪರ್‍ ಸೈಕ್ಲೋನ್) ಲಕ್ಷಣಗಳು ಗೋಚರಿಸಿವೆ. ಈ ಹಿನ್ನೆಲೆಯಲ್ಲಿ ದೇಶದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮುನ್ನೆಚ್ಚರಿಕೆ ವಹಸಿಲಾಗಿದ್ದು, ಯಾವುದೇ ಕಾರಣಕ್ಕೂ ನೀರಿಗಿಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

ಮುಂದಿನ 12 ಗಂಟೆಗಳಲ್ಲಿ ಮಾರುತ ತೀವ್ರಗೊಳ್ಳುವ ಸೂಚನೆ ಇದ್ದು, ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದೆ. ಕೊಡಗಿನಲ್ಲಿ ಭಾನುವಾರ ಭಾರೀ ಮಳೆ ದಾಖಲಾಗಿದೆ. ಈ ಮಧ್ಯೆ ಸತತ ಮಳೆ ಮತ್ತು ಚಂಡಮಾರುತದ ಪ್ರಭಾವದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಬಂಗಾಳ ಕೊಲ್ಲಯಲ್ಲಿ ವಾಯುಭಾರ ಕುಸಿತದ ಕಾರಣ ಉಂಟಾಗಿರುವ ಚಂಡ ಮಾರುತವು ಉತ್ತರ ಮತ್ತು ಈಶಾನ್ಯ ದಿಕ್ಕಿನತ್ತ ಸಾಗಿ ಬಂಗಾಳದ ಮೂಲಕ ಬಾಂಗ್ಲಾ ಕರಾವಳಿಯನ್ನು ಬುಧವಾರದ ವೇಳೆಗೆ ಅಪ್ಪಳಿಸಲಿದೆ. ಚಂಡ ಮಾರತುದ ಪ್ರಭಾವದಿಂದಾಗಿ ನೆರೆಯ ತೆಲಂಗಾಣ  ರಾಜ್ಯಗಳಲ್ಲಿ ಸಹ ಮಳೆ ವ್ಯಾಪಕವಾಗಿದ್ದು, ಎಚ್ಚರ ಘೋಷಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights