ಫ್ಯಾಕ್ಟ್‌ಚೆಕ್: ಭಯಾನಕ ಚಂಡಮಾರುತದ ವಿಡಿಯೋ ವೈರಲ್! ವಾಸ್ತವವೇನು?

ಮನುಷ್ಯನಿಗೆ ಪ್ರಕೃತಿಯೇ  ಪಾಠ ಕಲಿಸಬೇಕು ಇಲ್ಲದಿದ್ದರೆ ಅವನನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಮಾತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ಚಂಡಮಾರುತಗಳು ಸೃಷ್ಟಿಯಾಗಿ ಹೇಗೆ ಮನುಷ್ಯ ಕಟ್ಟಿಕೊಂಡ ಸಾಮ್ರಾಜ್ಯವನ್ನು ಕ್ಷಣ ಮಾತ್ರದಲ್ಲಿ ನೆಲಸಮ ಮಾಡುತ್ತವೆ ಎಂದು ತೋರಿಸಲಾಗಿದೆ.

ಕೆನಡಾದ ಟೊರೊಂಟೊದ ವಿಮಾನ ನಿಲ್ದಾಣದಲ್ಲಿ ಚಂಡಮಾರುತ ಕಾಣಿಸಿಕೊಂಡು ಭೂಕುಸಿತಕ್ಕೆ ಕಾರಣವಾಗಿದ್ದು. ಈ ಅದ್ಭುತ ದೃಶ್ಯಾವಳಿಗಳನ್ನು ಚೈನಾ ನ್ಯಾಷನಲ್ ಜಿಯಾಗ್ರಫಿಕ್ ನಿಯತಕಾಲಿಕವು ಈ ವೀಡಿಯೊವನ್ನು 1 ಮಿಲಿಯನ್ ಡಾಲರ್‌ಗೆ ಖರೀದಿಸಿದೆ. ಅದನ್ನು ನೋಡುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಎಂದು ಹೇಳುವ ವಿಡಿಯೊ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೊದ ಅವಧಿಯು : 4 ನಿಮಿಷ 10 ಸೆಕೆಂಡುಗಳಿದ್ದು ಪ್ರಕೃತಿಯ ಎದುರು ಮನುಷ್ಯ ಏನೇನೂ ಅಲ್ಲ ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್,  ಟ್ವೀಟರ್ ಮತ್ತು ವಾಟ್ಸಾಪ್‌ಗಳಲ್ಲಿಯೂ ಈ ವಿಡಿಯೋವನ್ನು ಅದೇ  ಹೇಳಿಕೆಯೊಂದಿಗೆ ಶೇರ್ ಮಾಡಲಾಗುತ್ತಿದೆ. ಈ ವಿಡಿಯೋವನ್ನು Fact check  ಮಾಡಿ ಎಂದು ಹಲವರು Ensuddi.com ವಾಟ್ಸಾಪ್‌  9108969301  ಸಂದೇಶಗಳ ಮೂಲಕ ವಿನಂತಿಸಿದ್ದರು.
ಹಾಗಿದ್ದರೆ ಈ ವಿಡಿಯೊ ದೃಶ್ಯಾವಳಿಗಳು ಕೆನಾಡಾದ ಟೊರೋಂಟೊದಲ್ಲಿ ನಡೆದಿದೆಯೇ ಈ ದೃಶ್ಯಾವಳಿಗಳನ್ನು ಚೈನಾ ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ ಒಂದು ಮಿಲಿಯನ್ ಡಾಲರ್‌ಗೆ ಖರೀದಿಸಿದೆ ಎಂದು ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others
ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ದೃಶ್ಯಗಳು ವಾಸ್ತವವಾಗಿ ನೈಜ ಘಟನೆಲ್ಲ. 2014 ರಲ್ಲಿ ತೆರೆಗೆ ಬಂದ ‘ಇನ್ ಟು ದಿ ಸ್ಟಾರ್ಮ್’ ಸಿನಿಮಾದಿಂದ ತೆಗೆದಿರುವ ದೃಶ್ಯಾವಳಿಗಳಾಗಿವೆ ಎಂದು ತಿಳಿದು ಬಂದಿದೆ. ಈ ವಿಡಿಯೊ ಇದೇ  ಹೇಳಿಕೆಯೊಂದಿಗೆ State observer ಎಂಬ ಫೇಸ್‌ಬುಕ್ ಪೇಜ್‌ನಲ್ಲಿ 2017 ರಲ್ಲಿ ಹಂಚಿಕೊಳ್ಳಲಾಗಿದೆ ಅದನ್ನು ಇಲ್ಲಿನೋಡಬಹುದು.

ಸೆಪ್ಟೆಂಬರ್ 2017 ರಲ್ಲಿ, ಹವಾಮಾನ ವೈಪರೀತ್ಯದಿಂದಾಗಿ ವಿಶ್ವದ ಹಲವು ದೇಶಗಳನ್ನು ಧ್ವಂಸಗೊಂಡಿತ್ತು ಎಂಬ ಹೇಳಿಕೆಯೊಂದಿಗೆ, ವಿನಾಶಕಾರಿ ಸುಂಟರಗಾಳಿಗಳ ಸರಮಾಲೆಯನ್ನು ತೋರಿಸುವ ವೀಡಿಯೊವು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಈ ದೃಶ್ಯಗಳನ್ನು $1 ಮಿಲಿಯನ್‌ಗೆ ನ್ಯಾಶನಲ್ ಜಿಯಾಗ್ರಫಿಕ್ ಖರೀದಿಸಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿತ್ತು.

ಈ ಸುಂಟರಗಾಳಿಗಳು ಎಲ್ಲಿ ಮತ್ತು ಯಾವಾಗ ಸಂಭವಿಸಿದವು ಎಂಬಂತಹ ಸಂದರ್ಭೋಚಿತ ಮಾಹಿತಿಯ ಕೊರತೆಯ ಹೊರತಾಗಿಯೂ, ಈ ತುಣುಕನ್ನು ನ್ಯಾಷನಲ್ ಜಿಯಾಗ್ರಫಿಕ್ ಖರೀದಿಸಿದೆ ಎಂದು “ಸ್ಟೇಟ್ ಅಬ್ಸರ್ವರ್ಸ್” ಮಾಡಿದ್ದ ವೀಡಿಯೊ ಪೋಸ್ಟ್‌ನಲ್ಲಿ ತೋರಿಸಿರುವ ಸುಂಟರಗಾಳಿಗಳು ನಿಜವೆಂದು ಅನೇಕ ಓದುಗರನ್ನು ನಂಬಿದ್ದರು. ಆದರೂ ಈ ಸುದ್ದಿ ನಿಜವಲ್ಲ. ಈ ವೀಡಿಯೊದಲ್ಲಿ ಪ್ರತಿ ದೃಶ್ಯವನ್ನು ಸಿನಿಮಾ ಮತ್ತು ಕಂಪ್ಯೂಟರ್ ಗ್ರಾಫಿಕ್ಸ್‌ನಿಂದ ಮಾಡಲಾದ ವಿಡಿಯೋ ತುಣುಕುಗಳು ಎಂದು ತಿಳಿದು ಬಂದಿದೆ ಮತ್ತು ಹೆಚ್ಚಿನ ತುಣುಕನ್ನು  2014 ರ ಚಲನಚಿತ್ರ ಇನ್ ಟು ದಿ ಸ್ಟಾರ್ಮ್‌ನಿಂದ ತೆಗೆದುಕೊಂಡ ದೃಶ್ಯಗಳಾಗಿವೆ ಎಂದು ಸ್ನೂಪ್ಸ್‌ ವರದಿ ಮಾಡಿದೆ.

“ಸುಂಟರಗಾಳಿ ವಿನಾಶದ ದೃಶ್ಯಗಳನ್ನು” ಇನ್‌ ಟು ದಿ ಸ್ಟಾರ್ಮ್ ಚಲನಚಿತ್ರದಿಂದ ತೆಗೆದು ಎಡಿಟ್ ಮಾಡಿ, ನ್ಯಾಷನಲ್ ಜಿಯಾಗ್ರಫಿಕ್ ಈ ವೀಡಿಯೊವನ್ನು $1 ಮಿಲಿಯನ್‌ಗೆ ಖರೀದಿಸಿದೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಂಡಿತ್ತು.  ಅದರ ಆರ್ಕೈವ್ ಮಾಡಿದ ಲಿಂಕ್‌ಅನ್ನು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ನೈಜ ಘಟನೆಯಲ್ಲ ಹಾಗೂ ಈ ದೃಶ್ಯಾವಳಿಗಳನ್ನು ಚೀನಾ ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ $1 ಮಿಲಿಯನ್‌ ಡಾಲರ್‌ಗೆ ಖರೀದಿಸಿತು ಎಂಬುದು ಕೂಡ ಸುಳ್ಳು. 2014 IN TO THE STORM ಚಿತ್ರದಲ್ಲಿ ಇರುವ ದೃಶ್ಯಗಳನ್ನು ನೈಜವೆಂದು ಹೇಳಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಇಂತಹ ವಿಡಿಯೊಗಳನ್ನು ನಂಬಿ ಶೇರ್ ಮಾಡುವ ಮೊದಲು ಪರಿಶೀಲಿಸಿ. ಸುಳ್ಳು ಸುದ್ದಿಗಳನ್ನು ಹರಡಬೇಡಿ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹುಬ್ಬಳ್ಳಿಯಲ್ಲಿ ಹಿಂದೂಗಳ ಮೇಲೆ ಹಲ್ಲೆ ಎಂದು ಬಾಂಗ್ಲಾದೇಶದ ವೀಡಿಯೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights