ಅಭಿಮಾನಿಗಳಿಗೆ ಆಫರ್ ಕೊಟ್ಟ ಲಿಲ್ಲಿ : ಹೊಸ ಹೆಸರು ಸೂಚಿಸಲು ತಿಳಿಸಿದ ನಟಿಗೆ ಫ್ಯಾನ್ಸ್ ಸಿಕ್ಕಾಪಟ್ಟೆ ಕಮೆಂಟ್ಸ್

ಟಾಲಿವುಟ್ ನ ಬಹುಬೇಡಿಕೆಯ ನಟಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕಳೆದ ಬಾರಿ ತಂಗಿಯ ಹುಟ್ಟುಹಬ್ಬ ಹಾಗೂ ಪೆಟ್ ನೇಮ್ ನೊಂದಿಗೆ ಸದ್ದು ಮಾಡಿ ಸದ್ಯ ಮತ್ತೊಂದು ವಿಚಾರಕ್ಕೆ ಅಭಿಮಾನಿಗಳನ್ನ ಬಡೆದೆಬಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ನಟಿಸಿದ ಬಳಿಕ ತೆಲುಗು ಚಿತ್ರರಂಗಕ್ಕೆ ಕಾಲಿರಿಸಿದ್ದವರು. ಅಲ್ಲಿ ಒಂದರ ಮೇಲೊಂದು ಯಶಸ್ಸು ಕಂಡ ಅವರಿಗೆ ಅಭಿಮಾನಿಗಳು ಸಾಕಷ್ಟಿದ್ದಾರೆ. ಹಾಗೆಯೇ ರಶ್ಮಿಕಾ ಅವರನ್ನು ಟೀಕಿಸುವವರು, ಅವರನ್ನು ಟ್ರೋಲ್ ಮಾಡುವವರಿಗೂ ಕಡಿಮೆ ಇಲ್ಲ. ಅಂದಹಾಗೆ ನಟಿ ರಶ್ಮಿಕಾ ಮಂದಣ್ಣ ಅವರನ್ನು ನಿಕ್ ನೇಮ್ ಬೇರೆನೇ ಇದೆ. ಅದನ್ನ ಅವರು ಯಾರೊಂದಿಗೂ ಸೇರ್ ಮಾಡಿಕೊಂಡಿರಲಿಲ್ಲ.

ಕೆಲ ದಿನಗಳ ಹಿಂದೆ ಆದರೆ ರಶ್ಮಿಕಾ ಮಂದಣ್ಣ  ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಕೊಡವ ಸಾರಿಯನ್ನು ಧರಿಸಿರುವ ಫೋಟೋವನ್ನು  ಹಂಚಿಕೊಂಡಿದ್ದಾರೆ. ಈ ವೇಳೆ ತಮ್ಮ ಪೆಟ್​ ನೇಮ್​ ಅನ್ನು ಬಹಿರಂಗ ಪಡಿಸಿದ್ದಾರೆ. ರಶ್ಮಿಕಾ ಅವರನ್ನು ‘ಮೋನಿ‘ ಎಂಬ ಅಡ್ಡ ಹೆಸರಿನಲ್ಲಿ ಕರೆಯುತ್ತಾರೆ. ಸದ್ಯ ಈ ವಿಚಾರ ಅಭಿಮಾನಿಗೆ ತಿಳಿದಿದ್ದು, ಅವರ ಫೋಟೋಗೆ ಮೋನಿ ಎಂದು ಕಾಮೆಂಟ್​ ಹಾಕಿದ್ದರು.

ಪೆಟ್ ನೇಮ್ ಗೊತ್ತಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ರಶ್ಮಿಕಾ ಅವರನ್ನು ನಿಕ್ ನೇಮ್ ನಿಂದಲೇ ಕರೆಯುತ್ತಿದ್ದಾರೆ. ಸದ್ಯ ರಶ್ಮಿಕಾ ಅವರೇ ತನ್ನ ಅಭಿಮಾನಿಗಳಿಗೆ ಒಂದೊಳ್ಳೆ ಆಫರ್ ನೀಡಿದ್ದು , ಅಭಿಮಾನಿಗಳು ತಮಗಿಷ್ಟವಾದ ಹೆಸರನ್ನು ಸೂಚಿಸಲು ತಿಳಿಸಿದ್ದಾರೆ. ಇದು ಅಭಿಮಾನಿ ಬಳಗದಲ್ಲೇ ಭಾರೀ ಸುದ್ದಿ ಮಾಡಿದೆ.

ಕರ್ನಾಟಕದ ಕ್ರಶ್ ಎಂದೇ ಫೇಮಸ್ ಆದ ರಶ್ಮಿಕಾ ಅವರಿಗೆ ಟಾಲಿವುಡ್ ನಲ್ಲಿ ಭಾರೀ ಬೇಡಿಕೆಯ ನಟಿಯಾಗಿದ್ದಾರೆ. ಹಿಂದೊಮ್ಮೆ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರು ರಶ್ಮಿಕಾ ಮಂದಣ್ಣ ಅವರನ್ನು ವೇದಿಕೆ ಮೇಲೆ ರಶ್ಮಿಕಾ ಮಂಡುಕಎಂದು ಕರೆದಿದ್ದರು. ಇದು ಅಂದು ರಶ್ಮಿಕಾರನ್ನು ಇರಿಸು ಮುರಿಸಿಗೆ ಕಾರಣವಾಗಿತ್ತು.

ಇತ್ತೀಚೆಗೆ ಅವರನ್ನು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲು ಇಚ್ಚಿಸಿದ್ದು, ರಶ್ಮಿಕಾ ತಮ್ಮ ಹೆಸರುನ್ನು ಸೂಚಿಸಲು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟರನ್ನಿ ಚರ್ಚೆ ಮಾಡಿದ ರಶ್ಮಿಕಾ ಅವರಿಗೆ ಸಾಕಷ್ಟು ಕಮೆಂಟ್ಸ್ ಗಳು ಬಂದಿದೆ. ಕೆಲವರು ಬೇರೆ ಬೇರೆ ಹೆಸರಗಳನ್ನು ಸೂಚಿಸಿದ್ದಾರೆ. ಇನ್ನೂ ಕೆಲವರು ಇರೋ ಹೆಸರನ್ನೇ ಮೆಚ್ಚಿಕೊಂಡಿದ್ದಾರೆ.

 

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights