ಫ್ಯಾಕ್ಟ್‌ಚೆಕ್: ಪೂಜಾರಿಗೆ ಮುಸ್ಲಿಂ ದಂಪತಿ ಸಹಾಯ- ಇದು ನಾಟಕೀಯ ವಿಡಿಯೋ

ಹಿಂದೂ ಪೂಜಾರಿಯೊಬ್ಬರು ಮಗುವನ್ನು ಎತ್ತಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುವ ವೇಳೆ ಮೂರ್ಛೆ ತಪ್ಪಿ ರಸ್ತೆಯಲ್ಲಿ ಬಿದ್ದು ಒದ್ದಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದೇ ಸಮಯಕ್ಕೆ ಅಲ್ಲಿಗೆ ಬರುವ ಮುಸ್ಲಿಂ ದಂಪತಿಗಳು, ಹಿಂದೂ ವ್ಯಕ್ತಿಯನ್ನು ಪ್ರಾಣಾಪಯದಿಂದ ಕಾಪಾಡುತ್ತಿದ್ದಾರೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್ ಒಂದು ಹರಿದಾಡುತ್ತಿದೆ. ಈ ವಿಡಿಯೋದ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ವೈರಲ್ ವಿಡಿಯೊದಲ್ಲಿ, ರಸ್ತೆಯ ಮೇಲೆ ಬೀಳುವ ಹಿಂದೂ ವ್ಯಕ್ತಿಯನ್ನು ಮುಸ್ಲಿಂ ದಂಪತಿಗಳು ಹಾರೈಕೆ ಮಾಡಿ ಮಗು ಮತ್ತು ಆತನನ್ನು ಜೋಪಾನವಾಗಿ ತಮ್ಮ ವಾಹನದಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ಹೇಳಲಾಗಿದೆ. ಆದರೆ ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳಲ್ಲ ಎಂದು ಕಂಡುಹಿಡಿಯಲಾಗಿದೆ. ಇದು ಸ್ಕ್ರಿಪ್ಟ್‌ ಮಾಡಿ ಚಿತ್ರೀಕರಣ ಮಾಡಿರುವ ವಿಡಿಯೊ ಆಗಿದೆ.

ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ವೈರಲ್ ಆಗುತ್ತಿರುವ ದೃಶ್ಯಾವಳಿಗಳು ನೈಜ ಘಟನೆಯಲ್ಲ . ಇದನ್ನು ಜನಜಾಗೃತಿ ಮೂಡಿಸಲು ಮತ್ತು ಮನರಂಜನಾ ಉದ್ದೇಶಗಳಿಗಾಗಿ ಚಿತ್ರೀಕರಿಸಲಾಗಿದೆ.

ವಿಡಿಯೋದ ಕೊನೆಯಲ್ಲಿ ರಾಜಕೀಯಕ್ಕಾಗಿ ಮಾಡಲಾಗುತ್ತಿರುವ ನಾಟಕಗಳನ್ನು ನಂಬಬೇಡಿ ಮತ್ತು ಈ ಎಲ್ಲಾ ನಾಟಕಗಳು ರಾಜಕಾರಣಿಗಳಿಗೆ ಲಾಭ ಮಾಡಿಕೊಡುತ್ತವೆ ಎಂದು ಹೇಳಲಾಗಿದೆ. ದ್ವೇಷವನ್ನು ಹರಡುವ ರಾಜಕಾರಣಿಗಳ ಬಗ್ಗೆ ಜಾಗೃತರಾಗಿರಿ ಎಂದು ತಿಳಿಸಲಾಗಿದೆ.

ರಾಜ್ಯ ಮತ್ತು ದೇಶದಲ್ಲಿ ನಡೆಯುತ್ತಿರುವ ಕೋಮುಪ್ರಚೋದನೆಗಳಿಂದ ಹಿಂದೂ-ಮುಸ್ಲಿಂ ನಡುವಿನ ಸಾಮರಸ್ಯ ಹಾಳಾಗುತ್ತಿದ್ದು ಎರಡು ಧರ್ಮದ ಜನರು ಪರಸ್ಪರ ಸಹೋದರರಂತೆ ಬದುಕಬೇಕಿರುವ ಅನಿವಾರ್ಯತೆ ಎದುರಾಗಿದೆ. ಇಂತಹ ಸಂದಿಗ್ದತೆಯ ಸಂದರ್ಭದಲ್ಲಿ ಹಿಂದೂ-ಮುಸ್ಲಿಮರ ನಡುವೆ ಪರಸ್ಪರ ವಿಶ್ವಾಸ ಮೂಡಿಸುವ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕಿದೆ , ಹಾಗಾಗಿ ಈ ವಿಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಬಹುದು. ಇದು ಸ್ಕ್ರಿಪ್ಟಡ್‌ ವಿಡಿಯೊ ಆಗಿದ್ದರೂ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವಂತಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮುಸ್ಕಾನ್‌ ಖಾನ್ ನಿಧನ ಎಂದು ವದಂತಿ ಹಬ್ಬಿಸಿದ ಕಿಡಿಗೇಡಿಗಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.