ಫ್ಯಾಕ್ಟ್‌ಚೆಕ್: ಧನುಷ್‌ರವರ ‘ಕೊಲವೆರಿ ಡಿ’ ಹಾಡನ್ನು ಬೇರೆ ಜಾಹಿರಾತಿನಿಂದ ಕದಿಯಲಾಗಿದೆ ಎಂಬುದು ಸತ್ಯವೇ?

ತಮಿಳು ಚಿತ್ರರಂಗದ ಜನಪ್ರಿಯ ನಟ ಧನುಷ್ ಅಭಿನಯದ ‘ಥ್ರಿ’ (3) ” ಚಿತ್ರದ ” Why this kolaveri di ” ಹಾಡು ತನ್ನ ಅಸಂಭದ್ದ ಸಾಹಿತ್ಯ ಮತ್ತು ಹಾಡಿರುವ ಶೈಲಿಯಿಂದ  ಕೋಟ್ಯಾಂತರ ಜನರನ್ನು ಆಕರ್ಷಿಸಿತ್ತು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರಾದಿಯಾಗಿ ಈ ಹಾಡು ಹಾಡದವರಿಲ್ಲ. ತಮಿಳು ಮತ್ತು ಇಂಗ್ಲಿಷ್‌ ಸಂಮಿಶ್ರಣದ Tanglish ರೂಪದಂತೆ ಹಾಡು ಮೂಡಿ ಬಂದಿತ್ತು.

ಈ ಫೇಮಸ್‌ ಹಾಡಿನ ಬಗ್ಗೆ ತಕರಾರು ಕೇಳಿಬಂದಿದ್ದು ‘ಕೊಲವೆರಿ ಹಾಡಿನ ಶೈಲಿಯಲ್ಲಿ, ಅದೇ  ಟೂನ್‌ನೊಂದಿಗೆ  ಟರ್ಕಿಶ್ ಭಾಷೆಯಲ್ಲಿ ಕೋಕಾ-ಕೋಲಾ ಜಾಹೀರಾತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ‘ಕೊಲವೆರಿ ಡಿ’ ಹಾಡು ಈ “ಕೋಕಾ-ಕೋಲಾದ ಹಳೆಯ ಟರ್ಕಿಶ್ ಜಾಹೀರಾತಿನಿಂದ” ನೇರವಾಗಿ ಎತ್ತಲ್ಪಟ್ಟಿದೆ ಎಂದು ಹೇಳಲಾಗುತ್ತಿದೆ.

ಹಲವು ಫೇಸ್‌ಬುಕ್ ಮತ್ತು ಟ್ವಿಟರ್  ನಲ್ಲಿ ಈ ಟರ್ಕಿಶ್ ಜಾಹೀರಾತನ್ನು ಪೋಸ್ಟ್ ಮಾಡಿ, “ಕೊಲವೆರಿಯ ಮೂಲ” ಇಲ್ಲಿದೆ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಕೋಕಾ-ಕೋಲಾದ ಹಳೆಯ ಟರ್ಕಿಶ್ ಜಾಹೀರಾತಿನಿಂದ ‘ಕೊಲವೆರಿ ಡಿ’ ಹಾಡನ್ನು ಕದಿಯಲಾಗಿದೆ ಎಂದು ಹೇಳುವ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ‘ಕೊಲವೆರಿ ಡಿ’ ಹಾಡು ಟರ್ಕಿಶ್ ಜಾಹೀರಾತಿನ ನಕಲು ಎಂದು ಮಾಡಿರುವ ಪೋಸ್ಟ್‌ನ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್: 

“ಟರ್ಕಿಶ್‌ನ ಜಾಹಿರಾತು ಕೋಕಾ-ಕೋಲಾ ಟ್ಯೂನ್‌ ಕೊಲವೆರಿ ಡಿ” ಹಾಡಿನ ಸಂಯೋಜನೆ ಎಂಬ ಕೀವರ್ಡ್ ಸರ್ಚ್ ಮಾಡಿದಾಗ ಮೇ 2015 ರಲ್ಲಿ ಪ್ರಕಟವಾದ ಹಲವು  ವರದಿಗಳು ಲಭ್ಯವಾಗಿದೆ. “ವೈ ದಿಸ್ ಕೊಲವೆರಿ ಡಿ” ಹಾಡಿನ ರೂಪವನ್ನು ಬಳಸಿ ಕೋಕಾ-ಕೋಲಾ ಜಾಹಿರಾತನ್ನು ಟರ್ಕಿಯಲ್ಲಿ ಬಿಡುಗಡೆ ಮಾಡಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್, ಬಜ್‌ಫೀಡ್‌ ನಂತಹ  ಸುದ್ದಿವಾಹಿನಿಗಳು ವರದಿ ಮಾಡಿವೆ.

ಡಿಜಿಟಲ್ ಮಾರ್ಕೆಟಿಂಗ್ ಮತ್ತು ಜಾಹೀರಾತಿನ “Afaqs” ವೆಬ್‌ಸೈಟ್‌ನಲ್ಲಿ “ಸೋನಿ ಮ್ಯೂಸಿಕ್ 2011 ರ ಅತ್ಯಂತ ಹಿಟ್ ಸಾಂಗ್‌ಗಳಲ್ಲಿ ಒಂದಾದ ‘ಕೊಲವೆರಿ ಡಿ’ ಟ್ಯೂನ್‌ ಅನ್ನು ಬಳಸಿಕೊಳ್ಳಲು ಕೋಕಾ-ಕೋಲಾ ಟರ್ಕಿಗೆ ಪರವಾನಗಿ ನೀಡಿದೆ” ಎಂದು ಬರೆದಿದೆ.

2015 ರಲ್ಲಿ “ಕ್ಯಾಂಪೇನ್ ಇಂಡಿಯಾ”  ಎಂಬ ಜಾಹೀರಾತಿನ ಮತ್ತೊಂದು ವೆಬ್‌ಸೈಟ್ ನಲ್ಲಿ “ಕೊಕಾಕೋಲಾ ಟರ್ಕಿಯ ಹೊಸ TVC 2011 ರ ಭಾರತೀಯ ಟ್ರ್ಯಾಕ್‌ನ ರೀಮೇಕ್ ಮಾಡಲಾಗಿದೆ ಎಂದು ಬರೆದಿದೆ.  ‘ವೈ ದಿಸ್ ಕೊಲವೆರಿ ಡಿ’. ಟರ್ಕಿಶ್ ಆವೃತ್ತಿಯನ್ನು ಗಾಯಕರಾದ ಸ್ಲಾ ಗೆಂಕೊಲು ಮತ್ತು ಓಜ್ಕಾನ್ ಡೆನಿಜ್ ಹಾಡನ್ನು ಮರುಸೃಷ್ಟಿಸಿದ್ದಾರೆ.

ಟರ್ಕಿಯಲ್ಲಿ ಕೋಕಾ-ಕೋಲಾ ಜಾಹಿರಾತಿನ  ವೀಡಿಯೊವನ್ನು ಕೋಕಾ-ಕೋಲಾದ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದೆ. ಹಲವರು ಈ ಜಾಹೀರಾತನ್ನು 2015 ರಲ್ಲಿ ಯೂಟ್ಯೂಬ್ ಮತ್ತು ಡೈಲಿಮೋಷನ್‌ನಲ್ಲಿ ಟರ್ಕಿಶ್ ಕೋಕಾ-ಕೋಲಾ ಜಾಹಿರಾತನ್ನು ಅಪ್‌ಲೋಡ್ ಮಾಡಲಾಗಿದೆ.

ತಮಿಳು ನಟ ಧನುಷ್ ಅವರು 2011 ರಲ್ಲಿ ‘ಕೊಲವೆರಿ ಡಿ’ ಹಾಡಿನ ಮೂಲಕ ಹವಾ ಸೃಷ್ಟಿಸಿದರು ಈ ಹಾಡನ್ನು ಅನಿರುದ್ಧ್ ಸಂಯೋಜಿಸಿದ್ದರು. ಸೋನಿ ಮ್ಯೂಸಿಕ್ ಇಂಡಿಯಾ 2011 ರಲ್ಲಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡನ್ನು ಅಪ್‌ಲೋಡ್ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2011 ರಲ್ಲಿ ವೈರಲ್ ಆಗಿದ್ದ “ಕೊಲವೆರಿ ಡಿ” ಹಾಡು ನಾಲ್ಕು ವರ್ಷಗಳ ನಂತರ 2015 ರಲ್ಲಿ ಟರ್ಕಿಶ್ ನ ಕೊಕಾ-ಕೋಲಾ ಜಾಹಿರಾತಿನಲ್ಲಿ ಕೊಲೆವರಿ ಹಾಡಿನ ಟ್ಯೂನ್‌ ಅನ್ನು ಬಳಸಿಕೊಂಡು ರಚಿಸಲಾಗಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿತ್ತಿರುವಂತೆ ಹಾಡಿನ ಟ್ಯೂನ್‌ಅನ್ನು ಜಾಹಿರಾತಿನಿಂದ ಕದಿಯಲಾಗಿದೆ ಎಂಬುದು ಸುಳ್ಳು. ಬದಲಿಗೆ ಜಾಹಿರಾತಿಗಾಗಿ ‘ಕೊಲವೆರಿ’ ಹಾಡಿನ ಟ್ಯೂನ್‌ನನ್ನು ಕೊಂಡುಕೊಂಡು ಜಾಹಿರಾತಿಗೆ ಬಳಸಿಕೊಳ್ಳಲಾಗಿದೆ.

ಕೃಪೆ: ಇಂಡಿಯಾಟುಡೆ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಅಮೀರ್ ಖಾನ್ ಮೈದಾ ಹಿಟ್ಟಿನಲ್ಲಿ 15 ಸಾವಿರ ಹಣವನ್ನು ಬಡವರಿಗೆ ನೀಡ್ಡಿದ್ದರು ಎಂಬುದು ನಿಜವೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights