ಗೌರಿ, ಕಲ್ಬುರ್ಗಿ ಕೊಲೆ ಪ್ರಕರಣ: ಪತ್ತೆ ಸಿಕ್ಕ ರಿವಾಲ್ವರ್ ವಿಧಿವಿಜ್ಞಾನ ವರದಿ ನಿರೀಕ್ಷಿಸುತ್ತಿರುವ ಪೊಲೀಸರು

2017ರ ಗೌರಿ ಲಂಕೇಶ್ ಕೊಲೆ ಮತ್ತು 2015ರ ಎಂ ಎಂ ಕಲ್ಬುರ್ಗಿ ಪ್ರಕರಣದ ತನಿಖೆಯಲ್ಲಿ, ಅರಬ್ಬೀ ಸಮುದ್ರದಲ್ಲಿ ಸಿಕ್ಕಿರುವ ರಿವಾಲ್ವರ್ ನ ವಿಧಿವಿಜ್ಞಾನ ವರದಿಯನ್ನು ಕರ್ನಾಟಕ ವಿಶೇಷ ತನಿಖಾ ದಳ ನಿರೀಕ್ಷಿಸುತ್ತಿದೆ.

2013ರಲ್ಲಿ ನಡೆದ ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ಧಬೋಲ್ಕರ್ ಕೊಲೆಯ ತನಿಖೆ ನಡೆಸುತ್ತಿರುವ ಸಿಬಿಐ ಜೊತೆ ನಡೆಸಿದ ಶೋಧಪತ್ತೆಯಲ್ಲಿ ರಿವಾಲ್ವರ್ ದೊರಕಿತ್ತು. ಮುಂಬೈ – ನಾಸಿಕ್ ಹೆದ್ದಾರಿಯ ಅರಬ್ಬೀ ಸಮುದ್ರದ ಕೊರಕಲು ಜಾಗದಲ್ಲಿ ರಿವಾಲ್ವರ್ ಪತ್ತೆಯಾಗಿತ್ತು. ಧಬೋಲ್ಕರ್ ಕೊಲೆ ಪ್ರಕರಣದ ಪ್ರಮುಖ ಶಂಕಿತ ಶರದ್ ಕಲಸ್ಕರ್, ಬಲಪಂಥೀಯ ಉಗ್ರಗಾಮಿ ಸಂಘಟನೆ 2013 ರಿಂದ ನಡೆಸಿದ ಸರಣಿ ಕೊಲೆಗಳಲ್ಲಿ ಬಳಸಿದ ನಾಲ್ಕು ರಿವಾಲ್ವರ್ ಗಳ ಬಗ್ಗೆ ಸುಳಿವು ಕೊಟ್ಟಿದ್ದ. ಸಿಬಿಐ, ಕರ್ನಾಟಕ ಪೊಲೀಸರು ಮತ್ತು ಮಹಾರಾಷ್ಟ್ರ ಪೊಲೀಸರು ನೇಮಿಸಿಕೊಂಡಿದ್ದ ಸಂಸ್ಥೆಯೊಂದು ಈಗ ಸಮುದ್ರದ ಕೊರಕಲಿನಲ್ಲಿ ರಿವಾಲ್ವರ್ ಪತ್ತೆ ಹಚ್ಚಿದೆ.

2013ರಲ್ಲಿ ನಡೆದ ಧಬೋಲ್ಕರ್, ಮತ್ತು ಮಹಾರಾಷ್ಟ್ರದ ಎಡಪಂಥೀಯ ಚಿಂತಕ ಗೋವಿಂದ ಪನ್ಸಾರೆ, ಕಲ್ಬುರ್ಗಿ (2015) ನಂತರ ಪತ್ರಕರ್ತೆ ಗೌರಿ ಕಲಂಕೇಶ್ (2017) ಕೊಲೆಗಳಿಗೆ ಸನಾಥನ ಸಂಸ್ಥೆಗೆ ಸಂಬಂಧಿಸಿದ ಉಗ್ರ ಗುಂಪುಗಳು ಕಾರಣ ಎಂದು ಆರೋಪಿಸಲಾಗಿದೆ. ಈ ಕೊಲೆಗಳಿಗೆ ಎರಡು ವಿಭಿನ್ನ ರಿವಾಲ್ವರ್ ಗಳನ್ನು ಬಳಸಲಾಗಿದೆ ಎಂದು ತನಿಖೆಯಿಂದ ತಿಳಿಯಲಾಗಿದೆ.

ಕಲ್ಬುರ್ಗಿ ಮತ್ತು ಗೌರಿಲಂಕೇಶ್ ಅವರ ಕೊಲೆಗಳ ಸ್ಥಳಗಳಲ್ಲಿ ಸಿಕ್ಕ ಕಾಟ್ರಿಜ್, ಬುಲೆಟ್ ತನಿಖೆಯಿಂದ ಎರಡೂ ಕೊಲೆಗಳಿಗೆ ಬಳಸಿರುವ ರಿವಾಲ್ವರ್ ಒಂದೇ ಎಂದು ಶಂಕಿಸಲಾಗಿದೆ. ಈಗ ಈ ಕಾಟ್ರಿಜ್ ಮೇಲೆ ಉಳಿದಿರುವ ಗುರುತುಗಳು ಮತ್ತು ಸಿಕ್ಕಿರುವ ರಿವಾಲ್ವರ್ ನಲ್ಲಿ ಉಳಿದಿರಬಹುದಾದ ಗುರುತುಗಳು ಹೊಂದಾಣಿಕೆ ಆಗುತ್ತದೆಯೇ ಎಂಬ ಅಂಶ ವಿಧಿವಿಜ್ಞಾನ ವರದಿಯಿಂದ ತಿಳಿಯಬೇಕಿದೆ.

ಧಬೋಲ್ಕರ್, ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಕೊಲೆ ಪ್ರಕರಣಗಳಲ್ಲಿ ಆಗಸ್ಟ್ 2018 ರಂದು ಬಂಧನಕ್ಕೊಳಗಾಗಿದ್ದ ಕಲಸ್ಕರ್, ಬಳಸಿದ್ದ ರಿವಾಲ್ವರ್ ಗಳನ್ನು ಬಿಚ್ಚಿ ಸಮುದ್ರಕ್ಕೆ ಎಸೆದಿರುವುದಾಗಿ ತನಿಖೆಯಲ್ಲಿ ಒಪ್ಪಿಕೊಂಡಿದ್ದ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights