ಐಸಿಸಿ ಟೆಸ್ಟ್ ಫೈನಲ್‌ ಪಂದ್ಯ: ಇಂದಿನಿಂದ ಸೆಣೆಸಾಡಲಿವೆ ಭಾರತ ಮತ್ತು ನ್ಯೂಜಿಲೆಂಡ್‌!

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಇಂದು ಸೌತಾಂಪ್ಟನ್ ನಲ್ಲಿ ಆರಂಭವಾಗಲಿದೆ. ಪೈನಲ್‌ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಕ್ರಿಕೆಟ್‌ ತಂಡಗಳು ಸೆಣೆಸಾಡಲಿವೆ. ಟೆಸ್ಟ್‌ ಚಾಂಪಿಯನ್‌ಶಿಪ್‌ಅನ್ನು ಗೆಲ್ಲಲೇಬೇಕು ಎಂದು ಟೀಂ ಇಂಡಿಯಾ ಶತಪ್ರಯತ್ನ ನಡೆಸುತ್ತಿದೆ.

ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿದ್ದು, ಭಾರತದಲ್ಲಿ 2 ನೇ ಸ್ಥಾನದಲ್ಲಿದೆ. 59 ಸಲ ಉಭಯ ತಂಡಗಳು ಮುಖಾಮುಖಿಯಾಗಿದ್ದು, ನ್ಯೂಜಿಲೆಂಡ್ 12 ಬಾರಿ ಜಯಗಳಿಸಿದೆ. ಭಾರತ ತಂಡ 21 ಪಂದ್ಯಗಳಲ್ಲಿ ಜಯಿಸಿದೆ. 26 ಪಂದ್ಯಗಳು ಡ್ರಾ ಆಗಿವೆ.

ಐಸಿಸಿ ಡಬ್ಲ್ಯೂಟಿಸಿ ಫೈನಲ್‌ಗೆ ಸೌತಾಂಪ್ಟನ್‌ನ ದಿ ಏಗಾಸ್ ಬೌಲ್ ಸಿದ್ದವಾಗಿದೆ. ಫೈನಲ್ ಪಂದ್ಯವು ಭಾರತದ ಸಮಯದಂತೆ ಮಧ್ಯಾಹ್ನ 3:00 ಗಂಟೆಗೆ ಪ್ರಾರಂಭವಾಗಲಿದೆ. ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ.

ಇದನ್ನೂ ಓದಿ: 08 ವರ್ಷಗಳ ಹಿಂದಿನ ಟ್ವೀಟ್‌; ಕ್ರಿಕೆಟ್‌ನಿಂದ ರಾಬಿನ್ಸನ್‌ ಅಮಾನತು; ರಾಬಿನ್ಸನ್‌ ಕ್ರಿಕೆಟ್‌ ಬದುಕು ಅಂತ್ಯ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights