08 ವರ್ಷಗಳ ಹಿಂದಿನ ಟ್ವೀಟ್‌; ಕ್ರಿಕೆಟ್‌ನಿಂದ ರಾಬಿನ್ಸನ್‌ ಅಮಾನತು; ರಾಬಿನ್ಸನ್‌ ಕ್ರಿಕೆಟ್‌ ಬದುಕು ಅಂತ್ಯ?

ಇಂಗ್ಲೆಂಡ್ ಕ್ರಿಕೆಟ್‌ ತಂಡದ ಒಲಿ ರಾಬಿನ್ಸನ್ ಅವರು ಎಂಟು ವರ್ಷಗಳ ಹಿಂದೆ ಮಾಡಿದ್ದ ಜನಾಂಗೀಕ ಮತ್ತು ಲೈಂಗಿಕ ಟ್ವೀಟ್‌ಗಳಿಗೆ ಸಂಬಂಧಿಸಿದ ತನಿಖೆ ಬಾರಿ ಇರುವುದರಿಂದ ಅವರನ್ನು ಎಲ್ಲಾ ರೀತಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಳಿಸಲಾಗಿದೆ. ಹೀಗಾಗಿ, ರಾಬಿನ್ಸನ್‌ ಅವರ ಕ್ರಿಕೆಟ್‌ ಭವಿಷ್ಯ ಇಲ್ಲಿಗೇ ಕೊನೆಗಾಣುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ನಡುವೆ ನಡೆಯುತ್ತಿವ ಟೆಸ್ಟ್‌ ಸರಣಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಪರವಾಗಿ ರಾಬಿನ್ಸನ್‌ ಆಟ ಆಡಿದ್ದರು. ಆದರೆ, ಇದೀಗ ಅಮಾನತುಗೊಂಡಿರುವ ಹಿನ್ನೆಲೆಯಲ್ಲಿ ಅವರು ಎರಡನೇ ಟೆಸ್ಟ್‌ನಲ್ಲಿ ಭಾಗಿಯಾಗುವುದಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಭಾನುವಾರ ಪ್ರಕಟಿಸಿದೆ.

ಉತ್ತಮ ಬೌಲರ್‌ ಆಗಿರುವ ರಾಬಿನ್ಸನ್ ಕಳೆದ ವಾರ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಟೆಸ್ಟ್ ನಲ್ಲಿ ಇನ್ನಿಂಗ್ಸ್‌ನಲ್ಲಿ 4-75 ರನ್‌ಗಳೊಂದಿಗೆ ಇಂಗ್ಲೆಂಡ್‌ನ್ನು ಮುನ್ನಡೆಸಿದರು ಮತ್ತು ಎರಡನೆ ಇನ್ನಿಂಗ್ಸ್ ನಲ್ಲಿ 3-26 ರನ್ ಗಳಿಸಿದರು ಮತ್ತು ಬ್ಯಾಟಿಂಗ್ ವೇಳೆ ಉಪಯುಕ್ತ 42 ರನ್ ಗ ಬಾರಿಸಿದ್ದರು.

ಆದರೆ, “ರಾಬಿನ್ಸನ್ ಅವರು 2012 ಮತ್ತು 2013 ರಲ್ಲಿ “ಮುಸ್ಲಿಂ ಜನರು ಭಯೋತ್ಪಾದನೆಗೆ ಸಂಬಂಧ ಹೊಂದಿದ್ದಾರೆಂದು ಸೂಚಿಸುವ ಕಾಮೆಂಟ್‌ಗಳು ಮತ್ತು ಮಹಿಳೆಯರು ಮತ್ತು ಏಷ್ಯನ್ ಪರಂಪರೆಯ ಜನರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಹೊಂದಿರುವ ಟ್ವೀಟ್ ಮಾಡಿದ್ದರು.

ಈ ಪೋಸ್ಟ್ ಮಾಡಿದ ಟ್ವಿಟ್ಟರ್ ಗಳ ಶಿಸ್ತಿನ ತನಿಖೆಯ ಫಲಿತಾಂಶ ಬಾಕಿ ಉಳಿದಿದೆ, ಹಾಗಾಗಿ ಎಲ್ಲಾ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ಅವರನ್ನು ಅಮಾನತುಗೊಳಿಸಲಾಗಿದೆ” ಎಂದು ಇಸಿಬಿ ಹೇಳಿಕೆ ತಿಳಿಸಿದೆ.

“ಜೂನ್ 10 ರ ಗುರುವಾರ ಎಡ್ಜ್‌ಬಾಸ್ಟನ್‌ನಲ್ಲಿ ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಆಯ್ಕೆಗೆ ಅವರು ಲಭ್ಯವಿರುವುದಿಲ್ಲ. ರಾಬಿನ್ಸನ್ ತಕ್ಷಣ ಇಂಗ್ಲೆಂಡ್ ತಂಡವನ್ನು ತೊರೆಯಲಿದ್ದಾರೆ.

“ನಾನು ವರ್ಣಭೇದ ನೀತಿಯ ಸಮರ್ಥಕನಲ್ಲ, ಅಲ್ಲದೆ ನಾನು ಸೆಕ್ಸಿಸ್ಟ್ ಅಲ್ಲ ಎಂದು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ” ಎಂದು ರಾಬಿನ್ಸನ್‌ ಹೇಳಿದ್ದಾರೆ.

ಇದನ್ನೂ ಓದಿ: ವೈರಲ್ ಆಯ್ತು ಎಂ.ಎಸ್ ಧೋನಿ ಮಾಜಿ ಗರ್ಲ್ ಫ್ರೆಂಡ್ ಫೋಟೋ..!

Spread the love

Leave a Reply

Your email address will not be published. Required fields are marked *