ವೈರಲ್ ಆಯ್ತು ಎಂ.ಎಸ್ ಧೋನಿ ಮಾಜಿ ಗರ್ಲ್ ಫ್ರೆಂಡ್ ಫೋಟೋ..!

ರೈಲ್ವೆ ಇಲಾಖೆಯಲ್ಲಿ ಸಣ್ಣ ಕೆಲಸ ಮಾಡಿಕೊಂಡಿದ್ದ ಮಹೆಂದ್ರ ಸಿಂಗ್ ಧೋನಿ ಇಂದು ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಮಾದರಿ ವ್ಯಕ್ತಿಯಾಗಿದ್ದಾರೆ. ಐಪಿಎಲ್ ನಲ್ಲಿ ಚೈನ್ನೈ ಸೂಪರ್ ಕಿಂಗ್ಸ್ ನಾಯಕರಾಗಿ ಟ್ರೋಫಿಗಳಿಗೆ ಮುತ್ತಿಟ್ಟಿದ್ದನ್ನ ಮರೆಯುವಂತಿಲ್ಲ.

ಲಕ್ಷಾಂತರ ಕ್ರಿಕೆಟ್ ಅಭಿಮಾನಿ ಬಳಗವನ್ನೇ ಹೊಂದಿರುವ ಧೋನಿ ಬಗ್ಗೆ ಕೆಲ ಗೊತ್ತಿರದ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಧೋನಿ ಆಗಾಗ ಪತ್ನ ಸಾಕ್ಷಿ ರಾವತ್ ಹಾಗೂ ಮಗಳು ಜೀವ ಜೊತೆ ಸಾಮಾಜಿಕ ಜಾಲದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಫಾರ್ಮಿಂಗ್ ಮಾಡುವ ಬಗ್ಗೆ ಕೂಡ ಅವರ ಫೋಟೋಗಳು ವೈರಲ್ ಆಗಿತ್ತು. ಈಗ ಮಾಹಿ (ಮಹೇಂದ್ರ ಸಿಂಗ್ ಧೋನಿ) ಮಾಜಿ ಲರ್ಗ್ ಫ್ರೆಂಡ್ ನೊಂದಿಗಿನ ಫೋಟೋ ಭಾರೀ ವೈರಲ್ ಆಗಿದೆ.

ವೈರಲ್ ಫೋಟೋದಲ್ಲಿ ಕಾಣಿಸಿಕೊಂಡು ಹುಡುಗಿಯೊಂದಿಗೆ ಧೋನಿ ಪ್ರೀತಿಸುತ್ತಿದ್ದರಂತೆ. ಆದರೆ ಆ ಹುಡಿಗಿ ಅಪಘಾತದಲ್ಲಿ ಸಾವಗೀಡಾಗಿದ್ದಾರೆ. ಈ ಬಗ್ಗೆ ಎಂಎಸ್ ಧೋನಿ ದಿ ಅನ್ಟೋಲ್ಡ್​​ ಸ್ಟೋರಿ ಸಿನಿಮಾದಲ್ಲೂ ಪ್ರಸ್ತಾಪವಾಗಿದೆ. ಆದರೆ, ಧೋನಿ ಜೊತೆ ನಿಂತುಕೊಂಡಿದ್ದ ಹುಡುಗಿ ಯಾರು ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ. ಸೂರ್ಯಾಸ್ತದ ವೇಳೆ ಈ ಫೋಟೋ ಸೆರೆ ಹಿಡಿಯಲಾಗಿದೆ. ಆದರೆ, ಇದು ಮಹೇಂದ್ರ ಸಿಂಗ್​ ಧೋನಿ ಅವರ ದಿವಂಗತ ಗೆಳತಿ ಪ್ರಿಯಾಂಕಾ ಎಂದು ಹೇಳಲಾಗ್ತಿದೆ. ಆದರೆ ಇದರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.

ಕೆಲವರು ಹೇಳುವ ಪ್ರಕಾರ ಈ ಹುಡುಗಿಯ ಹೆಸರು ಪ್ರಿಯಾಂಕ. ಹುಡುಗಿಯ ಜೊತೆಗೆ ಧೋನಿ ಬೆಟ್ಟದ ಮೇಲೆ ನಿಂತುಕೊಂಡಾಗ ತೆಗೆದಿರುವ ಚಿತ್ರ ಇದಾಗಿದ್ದು ಸೂರ್ಯಾಸ್ತದ ವೇಳೆ ಈ ಫೋಟೋ ಸೆರೆ ಹಿಡಿಯಲಾಗಿದೆ. ಇನ್ನು ಕೆಲವರು ಸಾಕ್ಷಿ ಜೊತೆಗಿನ ಫೋಟೋ ಇದಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದಾದ ಬಳಿಕ ಸಾಕ್ಷಿ ಜತೆ ಮಹೇಂದ್ರ ಸಿಂಗ್​ ಧೋನಿ ಮದುವೆಯಾಗಿದ್ದು, ಇದೀಗ ಮುದ್ದಾದ ಹೆಣ್ಣು ಮಗುವಿದೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights