ದಕ್ಷಿಣ ಕೊರಿಯಾ: ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ; ಮಾಜಿ ಮೇಯರ್‌ಗೆ 3 ವರ್ಷ ಜೈಲು!

ದಕ್ಷಿಣ ಕೊರಿಯಾದ ಎರಡನೇ ಅತಿದೊಡ್ಡ ನಗರ ಬುಸಾನ್‌ನ ಮಾಜಿ ಮೇಯರ್ ಅವರು, ತಮ್ಮ ಅಧಿಕಾರಾವಧಿಯಲ್ಲಿ ಇಬ್ಬರು ಪಾಲಿಕೆ ನೌಕರರಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಬುಸಾನ್‌ನ ಜಿಲ್ಲಾ ನ್ಯಾಯಾಲಯವು ಮಾಜಿ ಮೇಯರ್ ಓ ಕಿಯೋ-ಡಾನ್‌ ಅವರಿಗೆ ಕೌನ್ಸೆಲಿಂಗ್‌ಗೆ ಒಳಗಾಗುವಂತೆ ಆದೇಶ ನೀಡಿದೆ. ಅಲ್ಲದೆ, ಜೈಲು ಶಿಕ್ಷೆ ಮುಗಿದ ನಂತರ ಐದು ವರ್ಷಗಳ ಕಾಲ ಮಕ್ಕಳ ಕಲ್ಯಾಣ ಸಂಸ್ಥೆಗಳಲ್ಲಿ ಮತ್ತು ಅಂಗವೈಕಲ್ಯ ಸೇವೆಗಳಲ್ಲಿ ಕೆಲಸ ಮಾಡುವುದಂತೆ ಸೂಚಿಸಿದೆ.

ಓ ಕಿಯೋ ಅವರು ಮಹಿಳಾ ಸಾರ್ವಜನಿಕ ಸೇವಕರೊಂದಿಗೆ “ಅನಗತ್ಯ ದೈಹಿಕ ಸಂಪರ್ಕ” ಹೊಂದಿದ್ದಾರೆಂದು ಒಪ್ಪಿಕೊಂಡ ನಂತರ 2020ರ ಏಪ್ರಿಲ್‌ನಲ್ಲಿ ಬುಸಾನ್ ನಗರದ ಮೇಯರ್ ಸ್ಥಾನದಿಂದ ಕೆಳಗಿಳಿದರು.

ಓ ಕಿಯೋ ಅವರ ವರ್ತನೆಯು ತನ್ನ ಆಘಾತಕಾರಿ ಒತ್ತಡದ ಕಾಯಿಲೆಗೆ ಕಾರಣವಾಗಿದೆ ಎಂದು ಅಪರಿಚಿತ ಮಹಿಳೆ ಹೇಳಿದ್ದಾರೆ ಎಂದು ಅವರ ವಕೀಲರು ಹೇಳಿದ್ದಾರೆ.

ಓ ಕಿಯೋ ಅವರು 2018 ರಲ್ಲಿ ಪಾಲಿಕೆ ಇನ್ನೊಬ್ಬ ಮಹಿಳಾ ಉದ್ಯೋಗಿಯೊಂದಿಗೆ ಲೈಂಗಿಕ ಸಂಪರ್ಕವನ್ನು ಹೊಂದಿದ್ದಾರೆಂದು ಮತ್ತೊಮ್ಮೆ ಪ್ರತ್ಯೇಕವಾಗಿ ಆರೋಪಿಸಲಾಗಿತ್ತು.

ಇದನ್ನೂ ಓದಿ: ನಶಿಸುತ್ತಿದೆ ಆಕ್ಸಿಜನ್‌ ತೊಟ್ಟಿಲು ಅಮೆಜಾನ್‌; ಕಾಡು ರಕ್ಷಣೆಗಾಗಿ ಸೇನೆ ಕಳಿಸಲಿದೆ ಬ್ರೆಜಿಲ್‌ ಸರ್ಕಾರ!

72 ವರ್ಷ ವಯಸ್ಸಿನ ಓ ಕಿಯೋ ಅವರು ಸಮಾಜಕ್ಕೆ ಸಕಾರಾತ್ಮಕ ಕೊಡುಗೆಗಳನ್ನು ನೀಡಿದ್ದಾರೆ. ಆದರೆ, ಅವರು ಅರಿವಿನ ದುರ್ಬಲತೆಗೆ ಕಾರಣವಾಗುವ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಓ ಕಿಯೋ ಅವರ ವಕೀಲರು ವಾದಿಸಿದ್ದಾರೆ.

ನ್ಯಾಯಾಲಯವು ಆ ವಾದವನ್ನು ತಿರಸ್ಕರಿಸಿದೆ. ಮಹಿಳೆಯರಿಗೆ ಕಿರುಕುಳ ನೀಡುವಾಗ ಓ ಕಿಯೋ ಅವರು ತನ್ನ ಸ್ಥಾನಮಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಅವರ ಈ ಕೃತ್ಯಗಳು ಆಕಸ್ಮಿಕವಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಹೇಳಿದೆ.

“ಪ್ರತಿವಾದಿಯು ಸಲ್ಲಿಸಿದ ಸಾಕ್ಷ್ಯಗಳ ಆಧಾರದ ಮೇಲೆ, ಓ ಕಿಯೋ ಅವರು ಅರಿವಿನ ದೌರ್ಬಲ್ಯವನ್ನು ಹೊಂದಿದ್ದಾರೆ ಎಂದು ನಂಬುವುದು ಕಷ್ಟ. ಒಂದು ವೇಳೆ ಅವರಿಗೆ ಸಮಸ್ಯೆ ಇದ್ದರೆ, ಅದು ಅವರು ಅಪರಾಧಗಳನ್ನು ಮಾಡುವಾಗ ಅವರ ಕೃತ್ಯಗಳ ಮೇಲೆ ಪ್ರಭಾವ ಬೀರುತ್ತಿತ್ತು” ಎಂದು ನ್ಯಾಯಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಕಪ್ಪು ವರ್ಣೀಯ ಜಾರ್ಜ್‌ ಪ್ಲಾಯ್ಡ್‌ ಹತ್ಯೆ: ಪೊಲೀಸ್‌ ಅಧಿಕಾರಿಗೆ 22.5 ವರ್ಷ ಜೈಲು ಶಿಕ್ಷೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights