ಅಪಘಾತದಲ್ಲಿ ಸುಟ್ಟುಹೋದ ಕಾರು; ತಿರುಪತಿಗೆ ಹೊರಟಿದ್ದ ಐವರು ಸಜೀವ ದಹನ
ವೇಗವಾಗಿ ಬಂದ ಕಾರೊಂದು ರಸ್ತೆ ವಿಭಜಕ (Road Divider)ಗೆ ಡಿಕ್ಕಿ ಹೊಡೆದ ಪರಿಣಾಮ, ಕಾರು ಉರುಳಿ ಬಿದ್ದು ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ಐವರು ಜೀವಂತವಾಗಿ ಸುಟ್ಟುಹೋಗಿರುವ ಹೃದಯವಿದ್ರಾವಕ ಘಟನೆ ತಿರುಪತಿ ಬಳಿಯ ಇತೆಪಲ್ಲಿಯಲ್ಲಿ ನಡೆದಿದೆ.
ಭಾನುವಾರ, ವಿಜಯನಗರಂ ಜಿಲ್ಲೆಯವರಾದ ಒಂದೇ ಕುಟುಂಬದ ಎಂಟು ಮಂದಿ ತಿರುಪತಿಗೆ ಯಾತ್ರೆ ಹೊರಟಿದ್ದರು. ಈ ವೇಳೆ, ಕಾರು ಅಪಘಾತಕ್ಕೀಡಾಗಿದ್ದು, ಮಗು ಸೇರಿದಂತೆ ಐವರು ಸಜೀವ ದಹವಾಗಿದ್ದಾರೆ. ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ರಸ್ತೆಯಲ್ಲಿ ತೆರಳುತ್ತಿದ್ದ ದಾರಿಹೋಕರು ಕಾರಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿ, ಮೂವರನ್ನು ರಕ್ಷಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾರು ಸಂಪೂರ್ಣ ಸುಟ್ಟುಹೋಗಿದ್ದರಿಂದಾಗಿ, ಕಾರಿನಲ್ಲಿದ್ದ ಎಲ್ಲಾ ದಾಖಲೆ ಪತ್ರಗಳೂ ಸುಟ್ಟುಹೋಗಿವೆ. ಹೀಗಾಗಿ, ಸಾವನ್ನಪ್ಪಿದ್ದವರ ಗುರುತು ಪತ್ತೆಯಾಗಿಲ್ಲ. ಬುದುಕುಳಿದಿರುವವರು ಇನ್ನೂ ಮಾತನಾಡುವ ಪರಿಸ್ಥಿತಿಯಲ್ಲಿಲ್ಲ. ಹೀಗಾಗಿ, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕಾಶ್ಮೀರದಲ್ಲಿ ಪರಿಸ್ಥಿತಿ ಉಲ್ಬಣಗೊಂಡಿದೆ: ಯೂಸುಫ್ ತರಿಗಾಮಿ