ಮಧ್ಯಪ್ರದೇಶದ ಮಾಜಿ ಸಿಎಂಗೂ ತಟ್ಟಿದ ಕೊರೊನಾ ಬಿಸಿ : ರಾಜಕೀಯ ಸಲಹೆಗಾರನಲ್ಲಿ ಸೋಂಕು..?

ಕೊರೊನಾ ಸೋಂಕು ಹರಡೋಕೆ ಯಾರಾದ್ರೇನು..? ಸೆಲೆಬ್ರಿಟಿ ಆಯ್ತು, ಸದ್ಯ ರಾಜಕಾರಣಿಗಳಿಗೂ ಭಯ ಶುರುವಾಗಿದೆ. ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಅವರು ಗೃಹ ಬಂಧನದಲ್ಲಿದ್ದಾರೆ ಎನ್ನಲಾಗುತ್ತಿದೆ.

ಹೌದು ಮಾಜಿ ಸಿಎಂ ಕಮಲ್ ನಾಥ್ ಅವರ ರಾಜಕೀಯ ಸಲಹೆಗಾರನ ಪುತ್ರಿಗೆ ಕೊರೊನಾ ಸೋಂಕು ತಗುಲಿದ್ದು ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಕಮಲ್ ನಾಥ್ ಅವರೂ ಕೂಡ ಕ್ವಾರೆಂಟೈನ್ ನಲ್ಲಿದ್ದಾರೆ. ಕಮಲ್ ನಾಥ್ ಅವರ ರಾಜಕೀಯ ಸಲಹೆಗಾರ ಆರ್.ಕೆ.ಮಿಗ್ಲಾನಿ ಅವರ ಪುತ್ರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆ ಬಳಿಕ ಮಿಗ್ಲಾನಿ ಅವರಲ್ಲೂ ಸೋಂಕು ಪಾಸಿಟಿವ್ ಬಂದಿತ್ತು.

ಇದಕ್ಕೂ ಮುಂಚಿತವಾಗಿ ಕಮಲ್ ನಾಥ್ ಅವರು (ಮಾ.21) ರಂದು ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಿಗ್ಲಾನಿ ಸೇರಿದಂತೆ ಮಧ್ಯಪ್ರದೇಶದ ಬಹುತೇಕಪತ್ರಕರ್ತರು ಭಾಗಿಯಾಗಿದ್ದರು. ಕಾಂಗ್ರೆಸ್ ನ 200 ಶಾಸಕರು ಹಾಗೂಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಕೂಡ ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸೋಂಕು ಹರಡುವ ಭೀತಿ ಎದುರಾಗಿದೆ.

ಅಷ್ಟು ಮಾತ್ರವಲ್ಲದೇ ಮಿಗ್ಲಾನಿ ಅವರು ಕಮಲ್ ನಾಥ್ ಅವರ ನಿವಾಸದಲ್ಲೇ ನೆಲೆಸಿದ್ದರು. ಅಲ್ಲದೇ, ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಮಾ.23ರಂದು ಅವರನ್ನು ಸ್ಮಾರ್ಟ್ ಸಿಟಿ ಹಾಸ್ಪಿಟಲ್ ಗೆ ದಾಖಲಿಸಲಾಗಿತ್ತು. ಅವರ ವೈದ್ಯಕೀಯ ವರದಿ ಬಂದಿದ್ದು, ಇಂದು ಕೊರೊನಾ ಸೋಂಕು ದೃಢಪಟ್ಟಿದೆ.

ಮಧ್ಯಪ್ರದೇಶದಲ್ಲಿ ಇಂದು ಮತ್ತೆ ಐವರು ಶಂಕಿತರಲ್ಲಿ ಸೋಂಕು ದೃಢಪಟ್ಟಿದೆ. ಆ ಪೈಕಿ ಇಬ್ಬರು ಮಹಿಳೆಯರಾಗಿದ್ದು, ಅವರನ್ನು ಇಂದೋರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಪೈಕಿ ಯಾವ ಸೋಂಕಿತರು ವಿದೇಶ ಪ್ರಯಾಣದ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ ಎಂಬುದು ಮತ್ತೊಂದು ಆಚ್ಚರಿಯ ಸಂಗತಿ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights