WHOಗೆ ಆರ್ಥಿಕ ನೆರವು ಕಡಿತಗೊಳಿಸಿರುವ ಅಮೆರಿಕಾ ನಿರ್ಧಾರ ಸರಿಯಲ್ಲ: ವಿಶ್ವಸಂಸ್ಥೆ

ವಿಶ್ವಾದ್ಯಂತ ಕೊರೊನಾ ವೈರಸ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ಲಕ್ಷ ದಾಟಿ ಹೋಗುತ್ತಿದೆ. ಹಲವಾರು ರಾಷ್ಟ್ರಗಳು ಕೊರೊನಾ ನಿಯಂತ್ರಣಕ್ಕಾಗಿ ಎಣಗಾಡುತ್ತಿವೆ. ಇಂತಹ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಆರ್ಥಿಕ ನೆರವನ್ನು ಕಡಿತ ಮಾಡಿರುವ ಅಮೆರಿಕ ನಿಲುವು ಸರಿಯಲ್ಲ ಎಂದು ವಿಶ್ವಸಂಸ್ಥೆ  ಅಸಮಾಧಾನ ವ್ಯಕ್ತಪಡಿಸಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿಶ್ವ ಆರೂಗ್ಯ ಸಂಸ್ಥೆಯು ಪಕ್ಷಪಾತ ಮಾಡುತ್ತಿದೆ. ಚೀನಾ ಪರವಾದ ಒಲವು ಹೊಂದಿದ್ದು, ಚೀನಾಕ್ಕೆ ಸಹಾಯ ಮಾಡುತ್ತಿದೆ. ಇತರ ರಾಷ್ಟ್ರಗಳನನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅಮೆರಿಕಾ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಆರ್ಥಿಕ ನೆರವನ್ನು ಕಡಿತಗೊಳಿಸಲು ನಿರ್ಧರಿಸಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವಸಂಸ್ಥೆ ಅಧ್ಯಕ್ಷ ಅಂಟಾನಿಯೋ ಗುಟೆರೆಸ್ ಅವರು, ಇಡೀ ವಿಶ್ವವೇ ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಇಂತಹ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪಾತ್ರ ನಿರ್ಣಾಯಕವಾದದ್ದು, ಎಂತಹುದೇ ಪರಿಸ್ಥಿತಿಯಲ್ಲೂ ವಿಶ್ವ  ಆರೋಗ್ಯ ಸಂಸ್ಥೆಯ ಕಾರ್ಯಕ್ಕೆ ಮತ್ತು ಯೋಜನೆಗಳಿಗೆ ಅಡೆತಡೆಯಾಗಬಾರದು. ಮಾನವೀಯತೆ ಈ ಹೋರಾಟ ನಮ್ಮೆಲ್ಲರದ್ದು. ಹೀಗಾಗಿ ಅಮೆರಿಕ ನಿರ್ಧಾರ ಈ ಸಮಯಕ್ಕೆ ಸರಿಯಲ್ಲ ಎಂದು ಹೇಳಿದ್ದಾರೆ.

ಕೊರೋನಾ ವೈರಸ್ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಹೋರಾಡುತ್ತಿದ್ದು, ಆರೋಗ್ಯ ಕಾರ್ಯಕರ್ತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ವೈರಸ್ ಮತ್ತಷ್ಟು ಜೀವ ಹಾನಿ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ನಾವು ಇಂತಹ ಕಠಿಣ ಸಂದರ್ಭದಲ್ಲಿ ನಾವು ಒಗ್ಗಟ್ಟು ಪ್ರದರ್ಶನ  ಮಾಡಬೇಕು. WHO ಹೋರಾಟಕ್ಕೆ ಬೆಂಬಲವಾಗಿ ನಿಂತು ಸಾಂಘಿಕವಾಗಿ ವೈರಸ್ ತೊಲಗಿಸಬೇಕು ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights