PUC Result: ಕೊರೊನಾ ನಡುವೆಯೂ ಶೇ.61.80 ವಿದ್ಯಾರ್ಥಿಗಳು ಪಾಸ್‌; ಈ ಬಾರಿ ಯಾವ ಜಿಲ್ಲೆ ಪ್ರಥಮ ಗೊತ್ತೇ?

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶೇ.61.80 ಫಲಿತಾಂಶ ಬಂದಿದೆ. ಇಂದು ಬೆಳಗ್ಗೆ 11.30 ಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದು, ಇಲಾಖೆಯ ವೆಬ್ ಸೈಟ್ ನಲ್ಲಿ ಅಧಿಕೃತ ಫಲಿತಾಂಶ ಪ್ರಕಟವಾಗಿದೆ.

ವಿದ್ಯಾರ್ಥಿಗಳು ತಮ್ಮ ಫಲಿತಾಂಶ ತಿಳಿಯಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ www.karresults.nic.in ಗೆ ಭೇಟಿ ನೀಡಿ ಫಲಿತಾಂಶ ನೋಡಬಹುದು.

1016 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಸುಮಾರು 70 ಮೌಲ್ಯಮಾಪನ ಕೇಂದ್ರಗಳಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲಾಗಿದೆ. ಒಟ್ಟು 6,75,277 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ಹೊಸಬರು 5,56267 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 3,84,947 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪುನಾರಾವರ್ತಿತ 91,025 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 25,602 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಶೇ. 76.02 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ,65.52 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾವಿಭಾಗದಲ್ಲಿ ಶೇ. 41.27 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಈ ಎರಡು ಜಿಲ್ಲೆಗಳಲ್ಲಿ ಶೇ. 90.75 ರಷ್ಟು ಫಲಿತಾಂಶ ಬಂದಿದೆ. ವಿಜಯಪುರ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ.

ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ? ಇಲ್ಲಿದೆ ನೋಡಿ ಮಾಹಿತಿ

ಉಡುಪಿ – ಶೇ. 90.71
ದಕ್ಷಿಣ ಕನ್ನಡ- ಶೇ.90.71
ಕೊಡಗು- ಶೇ.81.53
ಉತ್ತರ ಕನ್ನಡ- ಶೇ.80.97
ಚಿಕ್ಕಮಗಳೂರು- ಶೇ.79.11
ಬೆಂಗಳೂರು ದಕ್ಷಿಣ- ಶೇ. 77.56
ಬೆಂಗಳೂರು ಉತ್ತರ – ಶೇ.75.54
ಬಾಗಲಕೋಟೆ- ಶೇ.74.59
ಚಿಕ್ಕಬಳ್ಳಾಪುರ- ಶೇ.73.74
ಶಿವಮೊಗ್ಗ- ಶೇ.72.19
ಹಾಸನ – ಶೇ.70.18
ಚಾಮರಾಜನಗರ- ಶೇ.69.29
ಬೆಂಗಳೂರು ಗ್ರಾಮಾಂತರ- ಶೇ.69.02
ಹಾವೇರಿ- ಶೇ.68.01
ಮೈಸೂರು- ಶೇ.67.98
ಕೋಲಾರ ಶೇ.67.42
ಧಾರವಾಡ- ಶೇ.67.31
ಬೀದರ್ – ಶೇ.64.61
ದಾವಣಗೆರೆ- ಶೇ.64.09
ಚಿಕ್ಕೋಡಿ- ಶೇ.63.88
ಮಂಡ್ಯ -ಶೇ.63.82
ಗದಗ – ಶೇ.63
ತುಮಕೂರು- ಶೇ.62.26
ಬಳ್ಳಾರಿ- ಶೇ.62.02
ರಾಮನಗರ- ಶೇ.60.96
ಕೊಪ್ಪಳ- ಶೇ.60.09
ಬೆಳಗಾವಿ- ಶೇ.59.07
ಯಾದಗಿರಿ- ಶೇ.58.38
ಕಲಬುರಗಿ- ಶೇ. 58.27
ಚಿತ್ರದುರ್ಗ- ಶೇ.56.08
ರಾಯಚೂರು- ಶೇ.56.22
ವಿಜಯಪುರ- ಶೇ.54.22

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights