ನೀರಿನಲ್ಲೂ ಕೊರೊನಾ : ಜನರಲ್ಲಿ ಹೆಚ್ಚಾದ ಆತಂಕ – ಎಚ್ಚೆತ್ತುಕೊಂಡ BWSSB

ಪ್ರಾಣಿಯಾಯ್ತು. ಮನುಷ್ಯ ಆಯ್ತು. ಕೊರೊನಾ ವೈರಸ್ ನ ಮುಂದಿನ ಟಾರ್ಗೆಟ್ ನೀರಾಗಿರಬಹುದಾ..? ಇಂಹತದ್ದೊಂದು ಆತಂಕ ಜನರ ನಿದ್ದೆಗೆಡಿಸಿದೆ.

ಹೌದು…  ಫ್ರಾನ್ಸ್​​ನಲ್ಲಿ ರಸ್ತೆ ತೊಳೆಯಲು ಹಾಗೂ ಇನ್​ಫೆಕ್ಷನ್​​ ತೆಗೆದು ಹಾಕಲು ಬಳಸುವ ನೀರಿನಲ್ಲಿ ಕೊರೊನಾ ವೈರಸ್​ನ ಅಂಶ ಪತ್ತೆಯಾದ ಸಂಗತಿ ವಿಶ್ವದೆಲ್ಲೆಡೆ ಆತಂಕ ಹೆಚ್ಚಿಸಿದೆ.  ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೂ ಸಾಕಷ್ಟು ಆತಂಕ ಮೂಡಿದ್ದು, ಬೆಂಗಳೂರು ಜಲ ಮಂಡಳಿಗೆ ದೊಡ್ಡ ತಲೆನೋವಾಗಿದೆ.

ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಬಿಡಬ್ಲುಎಸ್​ಎಸ್​ಬಿ ಕಾವೇರಿ ನೀರು ಪೂರೈಕೆಯಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಿದೆ. ಜಲಮಂಡಳಿ ಪಂಪಿಂಗ್ ಸ್ಟೇಷನ್​​ಗಳಲ್ಲಿ ಸ್ವಚ್ಛತೆ ಕಾಪಾಡುವುದು ಸೇರಿದಂತೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡಿದೆ. ಪ್ರತಿದಿನ ಕಾವೇರಿ ನೀರು ಹಾಗೂ ಎಸ್.ಟಿ.ಪಿ(ತ್ಯಾಜ್ಯ ನೀರು ಸಂಸ್ಕರಣೆ ಘಟಕ) ನೀರನ್ನು ಟೆಸ್ಟ್‌ ಮಾಡುವಂತೆ ನಿರ್ದೇಶನ ನೀಡಲಾಗಿದೆ. STPಯಲ್ಲಿ ಸಂಸ್ಕರಣೆ ಮಾಡಿದ ನೀರನ್ನು ಬೆಂಗಳೂರಿನಲ್ಲಿ ಬಹಳಷ್ಟು ಮಂದಿ ಬಳಕೆ ಮಾಡ್ತಾರೆ. ಹೀಗಾಗಿ ಹೆಚ್ಚಿನ ನಿಗಾ ವಹಿಸಲಾಗಿದೆ. ಹಿರಿಯ ಅಧಿಕಾರಿಗಳಿಂದ ಕಾವೇರಿ ಹಾಗೂ ಎಸ್.ಟಿ.ಪಿ ನೀರಿನ ಪರೀಕ್ಷೆ ನಡೆಯಲಿದೆ.

ಇನ್ನು ಕಳೆದವಾರ ಫ್ರಾನ್ಸ್​ ರಾಜಧಾನಿ ಪ್ಯಾರಿಸ್​​ನಲ್ಲಿ ವಿವಿಧ ಭಾಗಗಳಿಂದ ತಂದ ನಾಲ್ಕು ರಸ್ತೆ ಶುದ್ಧಿಗೆ ಬಳಸುವ ನೀರಿನ ಸ್ಯಾಂಪಲ್ಸ್​ ತಂದು ಪರೀಕ್ಷಿಸಲಾಗಿತ್ತು. ಆ ನೀರಿನಲ್ಲಿ ಕೊರೊನಾ ವೈರಸ್​​​​ ಇರೋದು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿತ್ತು. ತದನಂತರದಲ್ಲಿ ಕುಡಿಯುವ ನೀರು ಪೂರೈಕೆ ಪೈಪ್​ಲೈನ್​ ಹಾಗೂ ರಸ್ತೆ ಶುದ್ಧಿಗೆ ಬಳಸುವ ನೀರಿನ ಪೈಪ್​​ಲೈನ್​ಗಳನ್ನು ಸಂಪೂರ್ಣವಾಗಿ ಶುದ್ಧೀಕರಿಸಲಾಗಿತ್ತು. ಇನ್ನು ಫ್ರಾನ್ಸ್​ನಲ್ಲಿ ಇಲ್ಲಿಯ ತನಕ 1 ಲಕ್ಷ 50 ಸಾವಿರಕ್ಕೂ ಅಧಿಕ ಕೊರೊನಾ ಸೋಂಕಿತ ಕೇಸ್​ಗಳು ಪತ್ತೆಯಾಗಿದ್ದು, 20 ಸಾವಿರಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights