ಕಪ್‌ ನಮ್ದೇ ಅನ್ನೋ RCB ಈ ಬಾರಿ ಗೆಲ್ಲೋ ಸಾಧ್ಯತೆ: ಅದಕ್ಕಾಗಿ ಕೋಹ್ಲಿ ಮಾಡಬೇಕಾದ್ದೇನು?

ಐಪಿಎಲ್ ನಡೆಯುವುದು ಅಂತಿಮವಾಗಿದ್ದೇ ತಡ, ಆಟಗಾರರಿಗಿಂತ ಹೆಚ್ಚಾಗಿ ಅಭಿಮಾನಿಗಳು ಟೂರ್ನಿಗಾಗಿ ಹಾತೊರೆಯುತ್ತಿದ್ದಾರೆ. ಅದ್ರಲ್ಲೂ ಈ ವರ್ಷದ ಐಪಿಎಲ್ ತುಂಬಾನೆ ವಿಚಾರಗಳಿಗಾಗಿ ಡಿಫ್ರೆಂಟ್ ಆಗಿರಲಿದೆ. ಮೊದಲನೆಯದ್ದಾಗಿ, ಟೂರ್ನಿ ಮಾರ್ಚ್‌ನಿಂದ ಮೇ ವರೆಗೆ ನಡೆಯೋದ್ರ ಬದಲಾಗಿ, ಸೆಪ್ಟೆಂಬರ್‌ನಿಂದ ನವೆಂಬರ್ ನಡುವೆ ನಡೆಯಲಿದೆ. ಈ ಬಾರಿ ಐಪಿಎಲ್ ಯುಎಇಯ ಮೂರು ನಗರಗಳಲ್ಲಿ ಅಂದ್ರೆ, ಅಬುಧಾಬಿ, ಶಾರ್ಜಾ ಮತ್ತು ದುಬೈನಲ್ಲಿ ನಡೆಯಲಿದೆ. ಪ್ರತಿ ಬಾರಿ ಕಪ್ ನಮ್ದೆ ಅನ್ನುವ RCB ಅಭಿಮಾನಿಗಳಿಗೆ ಈ ಬಾರಿ ಸಿಹಿ ಹಂಚುವ ಅಚಕಾಶ ದೊರೆಯಲಿದೆ ಅಂತಾರೆ experts…

ಇನ್ನು ಬದಲಾದ ಸನ್ನಿವೇಷದಲ್ಲಿ  ತಂಡಗಳಿಗೆ ಬದಲಾವಣೆ ಬಯಸೋಕೆ ಇದು ಸೂಕ್ತ ಸಮಯ. ಅದ್ರಲ್ಲೂ ಆರ್‌ಸಿಬಿ ಕೂಡ ಒಂದು. ಯಾಕಂದ್ರೆ, ಆರ್‌ಸಿಬಿ ಎರೆಡೆರಡು ಬಾರಿ ಫೈನಲ್ ತಲುಪಿದ್ದರು ಇನ್ನೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಆದರೆ ಈ ಸಾಲಿನಲ್ಲಿ,  ಆರ್‌ಸಿಬಿಗೆ ಗೆಲುವಿನ ಅವಕಾಶ ಹೆಚ್ಚಾಗಿದೆ. ಯಾಕಂದ್ರೆ, ಯುಎಯಿನಲ್ಲಿ ಸಮತೋಲಿತ ತಂಡದೊಂದಿಗೆ ಕಣಕ್ಕಿಳಿದ್ರೆ ಮಾತ್ರ ಪ್ರಶಸ್ತಿ ಗೆಲ್ಲೋಕೆ ಸಾಧ್ಯ. ಆ ಸಮತೋಲನ ಆರ್‌ಸಿಬಿ ತಂಡದಲ್ಲಿದೆ ಎನ್ನುವುದು ಕ್ರಿಕೆಟ್ ಪಂಡಿತರ ಅಭಿಪ್ರಾಯ…

ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಬ್ರೆಟ್‌ ಲಿ  ಹೇಳುವ  ಪ್ರಕಾರ ಆರ್‌ಸಿಬಿ ಗೆಲ್ಲಬೇಕು ಅಂದ್ರೆ, ತಂಡದಲ್ಲಿ ಮಹತ್ವದ ಕೆಲಸವೊಂದು ಆಗಬೇಕಿದೆ.  ಇದು ಆರ್‌ಸಿಬಿ ತಂಡಕ್ಕೆ ಅವರು ನೀಡಿರೋ ಸಲಹೆ  ಯಾವುದೆಂದರೆ “ವಿರಾಟ್ ಕೊಹ್ಲಿ, ಯುಎಇನಲ್ಲಿ ತಮ್ಮ ಕ್ರಿಕೆಟ್‌ ಅನ್ನು ಆನಂದಿಸಬೇಕೆಂದು, ಜೊತೆಯಲ್ಲೇ ನಾಯಕ ಮತ್ತು ಆಟಗಾರನಾಗಿ ಎಲ್ಲ ಒತ್ತಡಗಳನ್ನು ತಾನೇ ತೆಗೆದುಕೊಳ್ಳಬೇಕು. ಒತ್ತಡದಲ್ಲಿ ಎಂತಹವರು ವಿಫಲರಾಗಿಬಿಡ್ತಾರೆ. ಆದ್ರೆ, ವಿರಾಟ್‌ಗೆ ಎಲ್ಲಾ ಒತ್ತಡಗಳನ್ನೂ ಸಹಿಸಿಕೊಳ್ಳೋ ಶಕ್ತಿಯಿದೆ. ಜೊತೆಯಲ್ಲೇ ಎಲ್ಲಾ ಆಟಗಾರರನ್ನೂ ಪೋಷಿಸಿವುದನ್ನ ಬದಗಿಟ್ಟು, ಕೇವಲ ತಂಡದ ಗೆಲುವಿಗಷ್ಟೇ ಗಮನಹರಿಸಬೇಕು. ಟೀಮ್ ಇಂಡಿಯಾದಲ್ಲಿದ್ದಾಗ ತೋರೋ ಯಶಸ್ಸಿನ ಪ್ರಯತ್ನವನ್ನ ಆರ್‌ಸಿಬಿಯಲ್ಲೂ ತೋರಬೇಕು.”  ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ, ಆಗ ಮಾತ್ರ RCB ಗೆ ಗೆಲುಚುವ ಅವಕಾಶ ಹೆಚ್ಚು ಅನ್ನುವುದು ಅವರ ಅಭಿಪ್ರಾಯ..

ಇನ್ನೂ ಭಾರತೀಯ ಕ್ರಿಕೆಟ್‌ನ ಮಾಜಿ ನಾಯಕ, ಸಂಜಯ್ ಮಂಜ್ರೇಕರ್ ಕೂಡ ಆರ್‌ಸಿಬಿ ತಂಡವನ್ನ ಶ್ಲಾಘಿಸಿದ್ದಾರೆ. ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರನ್ನು ಹೊರತುಪಡಿಸಿದ್ರೆ, ಫಿಂಚ್ ತಂಡಕ್ಕೆ ಮತ್ತೊಬ್ಬ ಅಸ್ತ್ರವಾಗಲಿದ್ದಾರೆ ಎಂದಿದ್ದಾರೆ. ಈ ಎಲ್ಲ experts ಅಭಿಪ್ರಾಯಗಳು ಎಷ್ಡು ನಿಜವಾಗುತ್ತವೆ ಅನ್ನುವುದನ್ನು ಕಾದು ನೋದಬೇಕು...


ಇದನ್ನೂ ಓದಿ: ದೇವರಾದ ಕೊರೊನಾ: ಕೋಳಿ ಕೋಯ್ದು ಹಬ್ಬ ಮಾಡಿದ ಹಳ್ಳಿ ಜನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights