ಫ್ಯಾಕ್ಟ್‌ಚೆಕ್: ಕೇಜ್ರಿವಾಲ್ ಪೋರ್ನ್ ಅಕೌಂಟ್‌ ಫಾಲೋ ಮಾಡುತ್ತಿದ್ದಾರೆಂದು ತಪ್ಪಾಗಿ ಸುದ್ದಿ ಮಾಡಿದ OP India !

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಎಸ್ಮೀ (@Esmee4Keeps) ಎಂಬ ಫೋರ್ನ್ ಟ್ವಿಟರ್‌ಅನ್ನು ಫಾಲೋ ಮಾಡುತ್ತಿದ್ದಾರೆ ಎಂಬ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. OP India ಎಂಬ ಬಲಪಂಥೀಯ ಪ್ರತಿಪಾದಕ ವೆಬ್‌ಸೈಟ್‌ ಕೂಡ ಇದೇ ಪ್ರತಿಪಾದನೆಯೊಂದಿಗೆ ವರದಿಯೊಂದನ್ನು ಪ್ರಕಟಿಸಿದೆ.

ಕೇಜ್ರಿವಾಲ್, ಪಾಡ್‌ಕಾಸ್ಟರ್ ಅಮಿತ್ ವರ್ಮಾ ಮತ್ತು Unacademy  ಸಂಸ್ಥಾಪಕ ರೋಮನ್ ಸೈನಿ ಸೇರಿದಂತೆ ಹಲವಾರು ಪ್ರಮುಖರು ಈ ಖಾತೆಯನ್ನು ಅನುಸರಿಸುತ್ತಿದ್ದಾರೆ. 2022 ರ ಏಪ್ರಿಲ್‌ನಲ್ಲಿ ರಚಿಸಲಾದ @Esmee4Keeps ಟ್ವಿಟರ್ ಖಾತೆಯು ಪ್ರಸ್ತುತ 129 K ಫಾಲೋವರ್ಸ್‌ಗಳನ್ನು ಹೊಂದಿದೆ.

ಪೋಸ್ಟ್‌ನ ಆರ್ಕೈವ್ ಲಿಂಕ್‌ಅನ್ನು ಇಲ್ಲಿ ನೋಡಬಹುದು.

“ನಾವು ರಾಜಕೀಯವನ್ನು ಬದಲಾಯಿಸಲು ಬಂದಿದ್ದೇವೆ” ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವುದು ಇವರೇನಾ ಎಂಬ ಶೀರ್ಷಿಕೆಯೊಂದಿಗೆ ಪೋರ್ನ್ ಖಾತೆಯನ್ನು ಅನುಸರಿಸುತ್ತಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ ಕೇಜ್ರಿವಾಲ್ ಅವರ ಪ್ರೊಫೈಲ್‌ನ ಸ್ಕ್ರೀನ್‌ಶಾಟ್ ವೀಡಿಯೋವನ್ನು ರಿಷಿ ಬಾಗ್ರೀ ಕೂಡ ಟ್ವೀಟ್ ಮಾಡಿದ್ದಾರೆ.

ಇದೇ ಪ್ರತಿಪಾದನೆಯನ್ನು OP India ಕೂಡ ಮಾಡಿದ್ದು ಅರವಿಂದ್ ಕೇಜ್ರಿವಾಲ್ @Esmee4Keeps ಹೆಸರಿನ ಟ್ವಿಟ್ಟರ್ ಖಾತೆಯನ್ನು ಅನುಸರಿಸುತ್ತಿದ್ದು, ಅದರಲ್ಲಿ ಅಶ್ಲೀಲ ಕಂಟೆಂಟ್ ಮತ್ತು ಅರೆ ನಗ್ನ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಹೊಂದಿರುವ ಖಾತೆ ಎಂದು ಸಾಮಾಜಿಕ ಮಾಧ್ಯಮದ ಬಳಕೆದಾರರು ಆರೋಪಿಸಿದ್ದಾರೆ ಎಂದು ವರದಿ ಮಾಡಿದೆ.

ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಫೋಟೊ ಮತ್ತು ವರದಿಗಳು ಪ್ರತಿಪಾದಿಸಿದಂತೆ ಅರವಿಂದ್ ಕೇಜ್ರಿವಾಲ್ ಪೋರ್ನ್ ಅಕೌಂಟ್‌ ಅನ್ನು ಫಾಲೋ ಮಾಡುತ್ತಿದ್ದಾರೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್ :

ದೆಹಲಿ ಸಿಎಂ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಪಾದಿಸಿ ಹಂಚಿಕೊಳ್ಳಲಾದ ಪೋರ್ನ್ ಅಕೌಂಟ್‌ ಬಗ್ಗೆ ಪರಿಶೀಲಿಸಲು ಸರ್ಚ್ ನಡೆಸಿದಾಗ,  @Esmee4Keeps ಎಂಬ ಹೆಸರನ ಖಾತೆಯು ಪ್ರಾರಂಭದಲ್ಲಿ @WastedVideos ಎಂಬ ಹೆಸರನ್ನು ಹೊಂದಿತ್ತು. ಸದ್ಯ ಈ ಟ್ವಿಟ್ಟರ್ ಖಾತೆಯು ಆರಂಭದಲ್ಲಿ ಇಂತಹ ಫೋಟೋಗಳನ್ನು ಪೋಸ್ಟ್‌ ಮಾಡುತ್ತಿರಲಿಲ್ಲ ಮತ್ತು ಅಕ್ಟೋಬರ್ 7, 2022 ರ ನಂತರ ಯಾವಾಗ ತನ್ನ ಖಾತೆಯ ಹೆಸರನ್ನು ಬದಲಾಯಿಸಿಕೊಂಡಿತೋ ಆನಂತರ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದೆ ಎಂದು ಬೂಮ್ ವರದಿ ಮಾಡಿದೆ.

@WastedVideos ಎಂಬ ಹೆಸರಿನಲ್ಲಿದ ಖಾತೆಯಲ್ಲಿ ಮೊದಲು ಫನ್ನಿ ವಿಡಿಯೋಗಳು ಮತ್ತು ಹಾಸ್ಯದ ವಿಡಿಯೋಗಳನ್ನು ಪೋಸ್ಟ್‌ ಮಾಡಲಾಗುತ್ತಿತ್ತು.

ಖಾತೆಯ ಆರ್ಕೈವ್ ಮಾಡಿದ ಲಿಂಕ್‌ಅನ್ನು ಇಲ್ಲಿ ನೋಡಬಹುದು. @wastedvideos_ ನೊಂದಿಗೆ Google ನಲ್ಲಿ ಸರ್ಚ್ ಮಾಡಿದಾಗ Twitter ನಲ್ಲಿ ಈ ಮೊದಲು  ಪೋಸ್ಟ್ ಮಾಡಲು ಬಳಸಿರುವ ವಿವಿದ ವೀಡಿಯೊ ಪ್ರಕಾರಗಳನ್ನು ನೋಡಬಹುದು.

ಪ್ರಸ್ತುತ ಇರುವ ಟ್ವಟರ್ ಖಾತೆಯನ್ನು ಪರಿಶೀಲಿಸಿದಾಗ @esmee4keeps  ನಿಂದ ಬಂದಿರುವ ರಿಪ್ಲೇಗಳು, @wastedvideos_ನಿಂದ ಬಂದಿರುವ ರಿಪ್ಲೇಗಳ ದಿನಾಂಕಗಳನ್ನು ಗಮನಿಸಬಹುದು. ಹಾಗಾಗಿ ಹಳೆಯ @wastedvideos ಎಂಬ ಹೆಸರಿನಲ್ಲಿದ್ದ ಖಾತೆಯನ್ನು @esmee4keeps ಎಂದು ಬದಲಾಯಿಸಿರುವುದು ಸ್ಪಷ್ಟವಾಗಿದೆ.

ಈಗ @WastedVideos ಟ್ವೀಟ್ ಗೆ ಬಂದಿರುವ ರಿಪ್ಲೇಗಳನ್ನು ವೀಕ್ಷಿಸಿದಾಗ, ಈ ಖಾತೆಯಿಂದ ಟ್ವೀಟ್‌ಗಳನ್ನು ಅಳಿಸಲಾಗಿದೆ ಎಂದು ಖಚಿತವಾಗಿದೆ. @WastedVideos ಹೆಸರಿಗೆ ಕೊನೆಯ ರಿಪ್ಲೇ ಬಂದಿರುವುದು ಅಕ್ಟೋಬರ್ 7, 2022 ರಂದು, ಅಂದರೆ ಕೆಲವೇ ದಿನಗಳ ಅಂತರದಲ್ಲಿ ಖಾತೆಯು ತನ್ನ ಹ್ಯಾಂಡಲ್ ಹೆಸರನ್ನು ಬದಲಾಯಿಸಿದೆ ಎಂಬುದು ಸ್ಪಷ್ಟವಾಗಿದೆ.

@esmee4keeps ಹ್ಯಾಂಡಲ್‌ನ Twitter ಐಡಿ 1520004626665414663 ಆಗಿದೆ.

ಈ ಟ್ವಿಟ್ಟರ್ ಐಡಿ – ‘1520004626665414663’ ಹಳೆಯ ಖಾತೆಯ ಸಂಗ್ರಹದ ಆರ್ಕೈವ್‌ನೊಂದಿಗೆ ಕ್ರಾಸ್ ಚೆಕ್ ಮಾಡಿದಾಗ ಅದರ ಹಿಂದಿನ ಹ್ಯಾಂಡಲ್ ಹೆಸರಿನ (@WastedVideos_) Twitter ಐಡಿಗೆ ಹೊಂದಾಣಿಕೆಯಾಗುತ್ತದೆ. ಎರಡೂ ಒಂದೇ ಖಾತೆ ಎಂದು ಹೊಂದಿಕೆಯಾಗುವ ಟ್ವಿಟರ್ ಐಡಿ ಖಚಿತ ಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈಗಾಗಲೇ ಚಾಲ್ತಿಯಲ್ಲಿದ್ದ @Waste videos ಎಂಬ ಖಾತೆಯನ್ನು Esmee (@Esemee4Keeps) ಎಂಬ ಹೆರಿಗೆ ಬದಲಾಯಿಸಲಾಗಿದ್ದು, ಹೆಸರು ಬದಲಾಯಿಸುವ ಸಂದರ್ಭದಲ್ಲಿ ಅಶ್ಲೀಲ ಟ್ವಿಟರ್ ಅಕೌಂಟ್ ಎಂಬಂತೆ ಬದಲಾಯಿಸಲಾಗಿದೆ. ಹಾಗಾಗಿ ಈ ಮೊದಲೇ ಈ ಖಾತೆಯನ್ನು ಅನುಸರಿಸುತ್ತಿದ್ದ ದೆಹಲಿ ಸಿಎಂ ಅವರು, ಈಗ ಪೋರ್ನ್‌ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ ಎಂಬಂತೆ ಬಿಂಬಿಸಿ ಸಾಮಾಜಿಕ ಮಾಧ್ಯಮ ಮತ್ತು OP INDIA ಎಂಬ ಬಲಪಂಥೀಯ ಪ್ರತಿಪಾದಕ ವೆಬ್‌ಸೈಟ್ ತಪ್ಪು ವರದಿಯನ್ನು ಬಿತ್ತರಿಸಿತ್ತು. ಇದೊಂದು ಸುಳ್ಳು ಸುದ್ದಿ ಎಂಬುದು ಈಗ ಸ್ಪಷ್ಟವಾಗಿದೆ.

ಕೃಪೆ : ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಇದು ಗುಜರಾತಿನ ಬುಲೆಟ್‌ ಟ್ರೈನ್ ನಿಲ್ದಾಣವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights