ಫ್ಯಾಕ್ಟ್‌ಚೆಕ್ : ಮಹಿಳೆಯರೊಂದಿಗೆ ನೃತ್ಯ ಮಾಡುತ್ತಿರುವ ವ್ಯಕ್ತಿ ಪ್ರಧಾನಿ ಮೋದಿಯಲ್ಲ! ಮತ್ಯಾರು?

ಹಂಪಿಯಲ್ಲಿ ಈಚೆಗೆ ನಡೆದ ‘ಕರ್ನಾಟಕ ಸಂಭ್ರಮ–50’ರ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಡಾನ್ಸ್‌ ಮಾಡಿದ್ದ ವಿಡಿಯೋ ಫುಲ್ ವೈರಲ್ ಆಗಿತ್ತು. ಈಗ ಅಂತಹದ್ದೆ ಮತ್ತೊಂದು ವಿಡಿಯೋ ಸೋ‍ಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಈ ಬಾರಿ ವೈರಲ್ ಆಗುತ್ತಿರುವ ವಿಡಿಯೋ ಸಿದ್ದರಾಮಯ್ಯ ಅವರದಲ್ಲ, ಬದಲಿಗೆ ಪ್ರಧಾನಿ ಮೋದಿ ಅವರದು.

ಹೌದು ನವರಾತ್ರಿ ಪ್ರಯುಕ್ತ ಪ್ರಧಾನಿ ಮೋದಿ ಸ್ಟೆಪ್ಸ್‌ ಹಾಕಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. “ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಗುಂಪಿನೊಂದಿಗೆ ಸಾಂಪ್ರದಾಯಿಕ ಗುಜರಾತಿ ನೃತ್ಯ ‘ಗರ್ಬಾ’ ಪ್ರದರ್ಶಿಸುತ್ತಿರುವಂತೆ ತೋರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. “ನವರಾತ್ರಿ ಗರ್ಭಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ನೃತ್ಯ ಮಾಡಿದ್ದಾರೆ. ತುಂಬಾ ಆಕರ್ಷಕವಾದ” ದೃಶ್ಯಗಳು ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ವಿಡಿಯೋ 35,00 ಕ್ಕೂ ಹೆಚ್ಚು ವೀವ್ಸ್‌ ಪಡೆದುಕೊಂಡಿದೆ. (ಆರ್ಕೈವ್)

ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ನೃತ್ಯ ಮಾಡಿರುವ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಎಂಬುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಲು ಪ್ರಧಾನಿ ಮೋದಿಯವರ ‍X ಅಕೌಂಟ್‌ನಲ್ಲಿ ಸರ್ಚ್ ಮಾಡುವ ಮೂಲಕ ಚೆಕ್ ಮಾಡಿದಾಗ, ಪ್ರಧಾನಿ ನರೇಂದ್ರ ಮೋದಿ ಗರ್ಬಾ ನೃತ್ಯ ಮಾಡಿರುವ ಯಾವ ವಿಡಿಯೋಗಳು ಲಭ್ಯವಾಗಿಲ್ಲ. ಮಾಹಿತಿಗಾಗಿ ಮತ್ತಷ್ಟು ಸರ್ಚ್ ಮಾಡಿದಾಗ,

X ನಲ್ಲಿ, @Lala_The_Don ಹೆಸರಿನ ಬಳಕೆದಾರರು @vikas_mahante ಖಾತೆಯಿಂದ Instagram ಸ್ಟೋರಿಯಲ್ಲಿ ಪೋಸ್ಟ್ ಮಾಡಿದ ಅದೇ ಈವೆಂಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿರುವುದು ಕಂಡು ಬಂದವು. ಫೋಟೋದಲ್ಲಿರುವ ವ್ಯಕ್ತಿ ಪ್ರಧಾನಿ ಮೋದಿಯಂತೆ ಡ್ರೆಸ್ ಮಾಡಿಕೊಂಡು ಅವರನ್ನು ಹೋಲುವುದನ್ನು ಕಾಣಬಹುದು.

ನೃತ್ಯ ಮಾಡುತ್ತಿರುವ ವ್ಯಕ್ತಿ ಪ್ರಧಾನಿ ಮೋದಿ ಅಲ್ಲ

X ಬಳಕೆದಾರರು ಹಂಚಿಕೊಂಡ ಸ್ಕ್ರೀನ್‌ಶಾಟ್ ಅನ್ನು ಆಧಾರವಾಗಿ ಇಟ್ಟುಕೊಂಡು ಸರ್ಚ್ ಮಾಡಿದಾಗ, ವಿಕಾಸ್ ಮಹಾಂತೆಯ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗಳು ಲಭ್ಯವಾದವು. ಅವರು ಪ್ರಧಾನಿ ಮೋದಿಯವರ ಹಾಗೆ ಕಾಣುವಂತೆ ಮೇಕಪ್ ಮಾಡಿಕೊಂಡು ಕಾರ್ಯಕ್ರಮಗಳಿಗೆ ಹಾಜರಾಗುವ ಹಲವಾರು ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಾರೆ.

ಲಂಡನ್‌ನಲ್ಲಿ ನಡೆಯಲಿರುವ ದೀಪಾವಳಿ ಮೇಳದಲ್ಲಿ ಪಾಲ್ಗೊಳ್ಳಲು ಮುಖ್ಯ ಅತಿಥಿಯಾಗಿ ತಮ್ಮನ್ನು ಆಹ್ವಾನಿಸಲಾಗಿದೆ ಎಂದು ಮಹಂತೇ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ ಪೋಸ್ಟ್ ಮಾಡಿದ್ದರು. ವೈರಲ್ ವೀಡಿಯೊ ಮತ್ತು ಮಹಾಂತೇ ಹಂಚಿಕೊಂಡ ರೀಲ್‌ನ ಹೋಲಿಕೆಯು ಎರಡೂ ದೃಶ್ಯಗಳು ಹೋಲಿಕೆಯಾಗುತ್ತವೆ. ಎರಡೂ ಕ್ಲಿಪ್‌ಗಳಲ್ಲಿ ಮಹಾಂತೇ ಒಂದೇ ರೀತಿಯ ಉಡುಪನ್ನು ಧರಿಸಿದ್ದಾರೆ ಎಂದು ಚಿತ್ರಿಸುತ್ತದೆ ಮತ್ತು ವೈರಲ್ ವಿಡಿಯೋ ಲಂಡನ್‌ನಲ್ಲಿ ನಡೆದ ಅದೇ ಘಟನೆಯಿಂದ ಬಂದಿದೆ ಎಂದು ಸೂಚಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ,  ವಿಕಾಸ್ ಮಹಂತೆ ಎಂಬುವವರು ಪ್ರಧಾನಿ ನರೇಂದ್ರ ಮೋದಿಯಂತೆ ಮೇಕಪ್ ಮಾಡಿಕೊಂಡು ಲಂಡನ್‌ನ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡುವ ದೃಶ್ಯಗಳನ್ನು, ಪ್ರಧಾನಿ ಮೋದಿ ನವರಾತ್ರಿ ಗರ್ಭಾ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

 


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಡೀಪ್‌ಫೇಕ್ ತಂತ್ರಜ್ಞಾನಕ್ಕೆ ಗುರಿಯಾದ ನಟಿ ರಶ್ಮಿಕಾ ಮಂದಣ್ಣ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights