ಫ್ಯಾಕ್ಟ್‌ಚೆಕ್ : ದ್ವಿಶತಕ ಭಾರಿಸಿದ ಮ್ಯಾಕ್ಸ್‌ವೆಲ್ ಸಚಿನ್ ಪಾದ ಮುಟ್ಟಿ ಆಶೀರ್ವಾದ ಪಡೆದದ್ದು ನಿಜವೇ?

ಅಫ್ಘಾನಿಸ್ತಾನದ ವಿರುದ್ಧ ಗ್ಲೆನ್ ಮ್ಯಾಕ್ಸ್‌ವೆಲ್ ಆಡಿದ ನಂಬಲಸಾಧ್ಯವಾದ ಇನ್ನಿಂಗ್ಸ್‌ಗೆ ಇಡೀ ವಿಶ್ವವೇ ನಿಬ್ಬೆರಗಾಗಿದೆ. 292 ರನ್‌ಗಳ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ 91 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗಲೂ ಎದೆಗುಂದದ ಮ್ಯಾಕ್ಸ್‌ವೆಲ್ ಅಮೋಘ ಆಟದ ಮೂಲಕ ಆಸಿಸ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದು 128 ಎಸೆತಗಳನ್ನು ಎದುರಿಸಿ ಬರೊಬ್ಬರಿ 201 ರನ್ ಬಾರಿಸಿದ್ದಲ್ಲದೆ ತಂಡವನ್ನು ಗೆಲ್ಲಿಸಿದ್ದರು.

ಇದೇ ವೇಳೆ ಗ್ಲೆನ್ ಮ್ಯಾಕ್ಸ್‌ವೆಲ್ ಕ್ರಿಕೆಟ್ ಲೋಕದ ದೇವರು ಎನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಕಾಲಿಗೆ ನಮಸ್ಕರಿಸಿದ್ದಾರೆ ಎಂದು ಪ್ರತಿಪಾದಿಸಿ  ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊವೊಂದು ಸಖತ್ ವೈರಲ್ ಆಗಿದೆ. ವೈರಲ್ ಫೋಟೊದಲ್ಲಿ ದ್ವಿ ಶತಕ ಬಾರಿಸಿದ ಮ್ಯಾಕ್ಸ್‌ವೆಲ್ ಸಚಿನ್ ಕಾಲಿಗೆ ನಮಸ್ಕರಿಸುತ್ತಿರುವ ಚಿತ್ರ ವನ್ನು ಹಂಚಿಕೊಳ್ಳಲಾಗುತ್ತಿದೆ.

https://twitter.com/KaushikPar57449/status/1722564582794051648

ಸಚಿನ್ ತೆಂಡೂಲ್ಕರ್ ದ್ವಿಶತಕ ಸಿಡಿಸಿದ ಮ್ಯಾಕ್ಸ್‌ವೆಲ್ ಅವರನ್ನು ಅಭಿನಂದಿಸಲು ಬಂದಾಗ, ಶ್ರೇಷ್ಠ ಆಟ ಪ್ರದರ್ಶಿಸಿದ ಮ್ಯಾಕ್ಸ್‌ವೆಲ್  ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದದರು. ಕ್ರಿಕೆಟ್ ಇತಿಹಾಸದ ಶ್ರೇಷ್ಠ ಕ್ಷಣಗಳಲ್ಲಿ ಒಂದಾಗಿದೆ. ಈ ಮಹಾನ್ ಕ್ರಿಕೆಟಿಗರಿಗೆ ಸಲಾಂ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಘಟನೆ ನಡೆದಿರುವುದು ನಿಜವೇ? ಮ್ಯಾಕ್ಸ್‌ವೆಲ್ ನಿಜವಾಗಿಯೂ ಸಚಿನ್ ಕಾಲು ಮುಟ್ಟಿ ನಮಸ್ಕರಿಸಿದರೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಗ್ಲೆಲ್ ಮ್ಯಾಕ್ಸ್‌ವೆಲ್ ಸಚಿನ್ ಕಾಲಿಗೆ ನಮಸ್ಕಸಿದ್ದು ನಿಜವೇ ಎಂದು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅದೇ ಟೀ ಶರ್ಟ್ ಧರಿಸಿ ಆಫ್ಘನ್ ಆಟಗಾರರೊಂದಿಗೆ ಮಾತನಾಡುತ್ತಿರುವ ಚಿತ್ರವೊಂದು ಲಭ್ಯವಾಗಿದೆ.

ಅದರ ಕ್ಲೂ ತೆಗೆದುಕೊಂಡು ಮತ್ತಷ್ಟು ಸರ್ಚ್ ಮಾಡಿದಾಗ, ಮ್ಯಾಕ್ಸ್‌ವೆಲ್ ಸಚಿನ್ ಕಾಲಿಗೆ ನಮಸ್ಕರಿಸುತ್ತಿರುವಂತೆ ಚಿತ್ರವನ್ನು ಎಡಿಟ್ ಮಾಡಿರುವುದು ಗೊತ್ತಾಗುತ್ತದೆ.

ಮೂಲ ಚಿತ್ರ ಮತ್ತು ವೈರಲ್ ಚಿತ್ರವನ್ನು ಹೋಲಿಕೆ ಮಾಡಿದಾಗ, ಸಚಿನ್ ತೆಂಡೂಲ್ಕರ್ ಒಂದೇ ರೀತಿಯ ಗೆಸ್ಚರ್‌ಅನ್ನು ಕಾಣಬಹುದು. ಅವರು ಆಫ್ಘನ್ ಆಟಗಾರರಿಗೆ ಸಲಹೆಗಳನ್ನು ನೀಡುತ್ತಿರುವಾಗಿನ ಚಿತ್ರವನ್ನು ಎಡಿಟ್ ಮಾಡಿ ಮ್ಯಾಕ್ಸ್‌ವೆಲ್ ಆಟದ ನಡುವೆ ಭಾಗಿರುವ ಚಿತ್ರವನ್ನು ಸಚಿನ್ ಚಿತ್ರಕ್ಕೆ ಜೋಡಿಸಲಾಗಿದೆ.

ಆಫ್ಘನ್ ಆಟಗಾರನಿಗೆ ಕೈಕುಲುಕುತ್ತಿರುವ ಚಿತ್ರಕ್ಕೆ ಮ್ಯಾಕ್ಟ್‌ವೆಲ್ ಚಿತ್ರವನ್ನು ಸೇರಿಸಿರುವುದು ಸ್ಪಷ್ಟವಾಗಿದೆ.

ಅಫ್ಘಾನಿಸ್ತಾನದ ಆಟಗಾರ ಜದ್ರಾನ್ ಅವರ ಶತಕವನ್ನು ಕೊಂಡಾಡಿರುವ ಸಚಿನ್ ತೆಂಡೂಲ್ಕರ್ ಅಫ್ಘಾನಿಸ್ತಾನ ಉತ್ತಮ ಮೊತ್ತವನ್ನು ಗಳಿಸಲು ಈ ಆಟಗಾರ ಕಾರಣವಾದರು ಎಂದು ಹೊಗಳಿದ್ದಾರೆ. ಬೌಲಿಂಗ್‌ನಲ್ಲಿಯೂ ದ್ವಿತಿಯಾರ್ಧವನ್ನು ಅಫ್ಘಾನಿಸ್ತಾನ ಅದ್ಭುತವಾಗಿ ಆರಂಭಿಸಿದರೂ ಮ್ಯಾಕ್ಸ್‌ವೆಲ್ ಆಟ ಎಲ್ಲವನ್ನೂ ಬದಲಾಯಿಸಲು ಕಾರಣವಾಯುತು ಎಂದಿದ್ದಾರೆ. ಅಲ್ಲದೆ ನಾನು ಕಂಡ ಅದ್ಭಯತವಾದ ಏಕದಿನ ಬ್ಯಾಟಿಂಗ್ ಪ್ರದರ್ಶನ ಇದು ಎಂದಿದ್ದಾರೆ ಸಚಿನ್ ತೆಂಡೂಲ್ಕರ್.

“ಅಫ್ಘಾನಿಸ್ತಾನ ತಂಡವನ್ನು ಉತ್ತಮ ಸ್ಥಾನದಲ್ಲಿರಿಸಲು ಜದ್ರಾನ್ ಅವರಿಂದ ಬಂದ ಆಟ ಅದ್ಭುತವಾಗಿತ್ತು. ಅವರು ದ್ವಿತಿಯಾರ್ಧವನ್ನು ಕೂಡ ಅದ್ಭುತವಾಗಿ ಆರಂಭಿಸಿದರು. ಒಟ್ಟಾರೆಯಾಗಿ 70 ಓವರ್‌ಗಳಲ್ಲಿ ಅವರು ಅದ್ಭುತ ಕ್ರಿಕೆಟ್ ಆಟವನ್ನು ಪ್ರದರ್ಶಿಸಿದರು. ಆದರೆ ಕೊನೆಯ 25 ಓವರ್‌ಗಳ ಆಟ ಅವರ ದೆಸೆಯನ್ನೇ ಬದಲಾಯಿಸಿತು. ಮ್ಯಾಕ್ಸ್‌ ಆಟಕ್ಕೆ ಇನ್ನಿಲ್ಲದಷ್ಟು ಒತ್ತಡವಿತ್ತು! ನಾನು ನನ್ನ ಜೀವನದಲ್ಲಿ ಕಂಡ ಅತ್ಯುತ್ತಮ ಏಕದಿನ ಬ್ಯಾಟಿಂಗ್ ಪ್ರದರ್ಶನ” ಎಂದು ಎಕ್ಸ್‌ನಲ್ಲಿ ಸಚಿನ್ ತೆಂಡೂಲ್ಕರ್ ಪೋಸ್ಟ್ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಚಿನ್ ತೆಂಡೂಲ್ಕರ್ ಆಫ್ಘನ್ ಆಟಗಾರರೊಂದಿಗೆ ಸಮಾಲೋಚನೆಯಲ್ಲಿ ತೊಡಗಿದ್ದ ವೇಳೆ ಸೆರೆ ಹಿಡಿದ ಚಿತ್ರವನ್ನು ಎಡಿಟ್ ಮಾಡಿ, ಮ್ಯಾಕ್ಸ್‌ವೆಲ್ ಸಚಿನ್ ಕಾಲಿಗೆರಗಿ ಆಶೀರ್ವಾದ ಪಡೆದಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕಾಂಗ್ರೆಸ್ ಸರ್ಕಾರವಿರುವ ರಾಜಸ್ಥಾನದಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲವೆ? ಪೊಲೀಸರಿಗೆ ಹೊಡೆಯುತ್ತಿರುವುದು ಮುಸ್ಲಿಮರೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights