ಫ್ಯಾಕ್ಟ್‌ಚೆಕ್ : ಕೇರಳದಲ್ಲಿ ಹಿಂದೂ ಜನಸಂಖ್ಯೆ ಕಡಿಮೆ ಇರುವುದರಿಂದ ದೀಪಾವಳಿಯನ್ನು ಆಚರಿಸಲ್ವಂತೆ
“ದೀಪಾವಳಿಯನ್ನು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಭಾರತದಲ್ಲಿಯೂ ಸಹ ಅಂದು ರಾಷ್ಟ್ರೀಯ ರಜೆ ಘೋಷಿಸಿದ್ದಾರೆ. ಆದರೆ ಭಾರತದಲ್ಲಿ ಒಂದು ರಾಜ್ಯ ಮಾತ್ರ ಸಡಗರದಿಂದ ದೀಪಾವಳಿಯನ್ನು ಆಚರಿಸುವುದಿಲ್ಲ.
ನಿಜ ನೀವು ಕೇಳಿದ್ದು ಸತ್ಯ. ಭಾರತದಾದ್ಯಂತ ಸಂಭ್ರಮ ಸಡಗರದಿಂದ ದೀಪಾವಳಿಯನ್ನು ಆಚರಿಸಲಾಗುತ್ತದೆ. ದೀಪಾವಳಿಯಂದೇ ಭಗವಾನ್ ರಾಮ ತನ್ನ ಹದಿನಾಲ್ಕು ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತಿದೆ. ಆದರೆ ಕೇರಳದಲ್ಲಿ ಈ ಹಬ್ಬವನ್ನು ಆಚರಿಸುವುದಿಲ್ಲ. ಇದರ ಕಾರಣ ಏನು ಅಂದರೆ ಆ ದಿನವೇ ಮಹಾರಾಜ ಮಹಾಬಲಿಯು ಸಾವನ್ನಪ್ಪಿದ್ದರಿಂದ ಆ ದಿನ ದೀಪಾವಳಿಯನ್ನು ಆಚರಿಸುವುದಿಲ್ಲ. ಇದರ ಹಿಂದೆ ಇನ್ನೊಂದು ಕಾರಣವಿದೆ ಕೇರಳದಲ್ಲಿ ಹಿಂದುಗಳ ಸಂಖ್ಯೆ ಕಡಿಮೆ ಇರುವುದರಿಂದ ಕೂಡ ಹಬ್ಬವನ್ನು ಆಚರಿಸುವುದಿಲ್ಲ” ಎಂಬ ಪ್ರತಿಪಾದನೆಯೊಂದಿಗೆ ಆಜ್‌ತಕ್‌ನ ನಿರೂಪಕಿಯೊಬ್ಬರು ಹೇಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಕೇರಳದಲ್ಲಿ ಹಿಂದುಗಳ ಸಂಖ್ಯೆ ಕಡಿಮೆ ಇದೆ ಎಂದಿರುವ ಕಾರಣಕ್ಕೆ ಅನೇಕರು ಅಜ್‌ತಕ್ ವರದಿಯನ್ನು ಟೀಕಿಸಿ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಆಜ್‌ತಕ್ ನ ನಿರೂಪಕಿ ಮಾಡಿರುವ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಆಜ್‌ತಕ್‌ನ ನಿರೂಪಕಿ ಮಾಡಿದ ಪ್ರತಿಪಾದನೆಯಂತೆ ಕೇರಳದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಇದೆಯೇ ಎಂದು ಪರಿಶೀಲಿಸಿದಾಗ, ಕೇರಳದಲ್ಲಿ ಹಿಂದುಗಳೇ ಬಹುಸಂಖ್ಯಾತರಾಗಿದ್ದು 2011ರ ಜನಗಣತಿಯ ಪ್ರಕಾರ 54.9% ರಷ್ಟು ಹಿಂದುಗಳಿದ್ದಾರೆ.
ಕೇರಳವು ಭಾರತದ ಉಳಿದ ಭಾಗಗಳಿಗಿಂತ ವಿಭಿನ್ನ ಕ್ಯಾಲೆಂಡರ್ ಮತ್ತು ಹವಾಮಾನವನ್ನು ಅನುಸರಿಸುತ್ತದೆ. ದೀಪಾವಳಿಯು ಮಳೆಗಾಲದ ಅಂತ್ಯ ಮತ್ತು ಉತ್ತರದಲ್ಲಿ ಚಳಿಗಾಲದ ಆರಂಭವನ್ನು ಸೂಚಿಸುತ್ತದೆ, ಆದರೆ ಕೇರಳವು ಯಾವುದೇ ವಿಶಿಷ್ಟ ಋತುಗಳಿಲ್ಲದ ಉಷ್ಣವಲಯದ ಹವಾಮಾನವನ್ನು ಹೊಂದಿರುತ್ತದೆ.
ಕೇರಳಕ್ಕೆ ರಾಮಾಯಣದ ಪ್ರಭಾವ ಕಡಿಮೆ ಇರುವ ಕಾರಣದಿಂದಲೂ ಸಹ ದೀಪಾವಳಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಿಲ್ಲ. ಕೇರಳದಲ್ಲಿ ಹಿಂದುಗಳಂತೆಯೇ ಕ್ರಿಶ್ಚಿಯನ್ನರು ಮತ್ತು ಮುಸ್ಲಿಂ ಸಮುದಾಯದ ಹಬ್ಬಗಳಿಗೂ ಸಮಾನವಾದ ಪ್ರಾಶಸ್ತ್ಯ ನೀಡುವ ಕಾರಣದಿಂದಲೂ ದೀಪಾವಳಿ ಹಿಂದುಗಳ ಕೂಡಿಸುವ ಹಬ್ಬವಾಗದೇ ಉಳಿದಿದೆ. ಬಹುಸಾಂಸ್ಕೃತಿಕತೆಯ ಪ್ರಭಾವ ಹೊಂದಿರುವ ಜನರ ನಂಬಿಕೆಯಲ್ಲಿನ ವ್ಯತ್ಯಾಸವು ಸಹ ಪ್ರಮುಖ ಅಂಶವಾಗಿದೆ.
ಆಜ್‌ತಕ್‌ನ ವರದಿಯನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು X ನಲ್ಲಿ ಪೋಸ್ಟ್ ಮಾಡುತ್ತಾ ಸುಳ್ಳು ವರದಿ ಪ್ರಕಟಿಸಿ “15 ಗಂಟೆಗಳು ಕಳೆದಿದ್ದರು ಇಂಡಿಯಾ ಟುಡೆ ಗ್ರೂಪ್‌ನಿಂದ ಕ್ಷಮೆಯಾಚನೆಯಾಗಿಲ್ಲ ಎಂದಿದ್ದಾರೆ. ಒಂದು ರಾಜ್ಯಕ್ಕೆ ಅವಮಾನ ಮಾಡುವ ಪ್ರಯತ್ನದಲ್ಲಿ, ಕೇರಳದಲ್ಲಿ ಹಿಂದೂಗಳು ಕಡಿಮೆ ಇರುವ ಕಾರಣಕ್ಕೆದೀಪಾವಳಿಯನ್ನು ಆಚರಿಸುವುದಿಲ್ಲ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಿದರು.
Why is Diwali not celebrated in Kerala?
Aaj Tak: “Because the Hindu population is less in Kerala.”
Aaj Tak deleted this tweet just now after getting called out. Godi Media's fake news propaganda campaign against Kerala continues. pic.twitter.com/iOi8SRqM8c
— Advaid അദ്വൈത് (@Advaidism) November 10, 2023
ಇನ್ನೂ ಬಹುಮಖ್ಯವಾದ ಕಾರಣ ಎಂದರೆ ಕೇರಳದ ಪ್ರಸಿದ್ಧ ರಾಜ ಬಲಿ ಚಕ್ರವರ್ತಿಯನ್ನು ಕೊಂದ ನೆನಪಿಗೆ ದೀಪಾವಳಿಯನ್ನು ಆಚರಿಸುವುದನ್ನು ಕೇರಳಿಗರು ನಿರಾಕರಿಸಿದ್ದಾರೆ. ಆದ್ದರಿಂದ ಕೇರಳದಲ್ಲಿ ದೀಪಾವಳಿ ಪ್ರಸಿದ್ದಿ ಪಡೆದಿಲ್ಲವೇ ಹೊರತು ಹಿಂದುಗಳ ಸಂಖ್ಯೆ ಕಡಿಮೆ ಇರುವುದರಿಂದ ದೀಪಾವಳಿಯನ್ನು ಆಚರಿಸುವುದಿಲ್ಲ ಎಂಬ ಆಜ್‌ತಕ್ ವರದಿ ಸುಳ್ಳು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ದ್ವಿಶತಕ ಭಾರಿಸಿದ ಮ್ಯಾಕ್ಸ್‌ವೆಲ್ ಸಚಿನ್ ಪಾದ ಮುಟ್ಟಿ ಆಶೀರ್ವಾದ ಪಡೆದದ್ದು ನಿಜವೇ?