ಒಂದು ವರ್ಷದಲ್ಲಿ 1.36 ಲಕ್ಷ ಜನರು ಆತ್ಮಹತ್ಯೆ; ಮಾನಸಿಕ ಒತ್ತಡವೇ ಮೂಲ ಕಾರಣ
ಮಾನಸಿಕ ಒತ್ತಡ ಮತ್ತು ಇನ್ನಿತರೆ ಕಾರಣಗಳಿಂದ ನೊಂದು ದೇಶದಲ್ಲಿ ವಾರ್ಷಿಕ 1.36 ಲಕ್ಷ ಜನರು ಆತ್ಮಹತ್ಯೆಗೆ ಒಳಗಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯ ತಿಳಿದಿದ್ದಾರೆ.
ಒಂದು ವರ್ಷದಲ್ಲಿ ಆತ್ಮಹತ್ಯೆಗೆ ಬಲಿಯಾದವರಲ್ಲಿ 70%ರಷ್ಟು ಜನರು ಯುವಜನರಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರಲ್ಲಿ ಹೆಚ್ಚಿನವರು 18ರಿಂದ 45 ವರ್ಷದೊಳಗಿನವರಾಗಿದ್ದಾರೆ. ದೈಹಿಕ ಆರೋಗ್ಯಕ್ಕೆ ನೀಡುತ್ತಿರುವ ಮಹತ್ವನ್ನು ಮಾನಸಿಕ ಆರೋಗ್ಯಕ್ಕೆ ನೀಡದಿರುವುದೇ ಇದಕ್ಕೆ ಕಾರಣ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ವಿವಿಧ ಮಾನಸಿಕ ಕಾಯಿಲೆಗಳಿಂದ ಯುವಜನರು ಆತ್ಮಹತ್ಯೆಗೆ ಶರಣಾಗತರಾಗುತ್ತಿದ್ದಾರೆ. ಇದು ಆತಂಕಕಾರಿ. ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಇರಡನ್ನೂ ಸಮತೋಲನದಲ್ಲಿ ಕಾಪಾಡುವುಕೊಳ್ಳುವುದರಿಂದ ಮಾತ್ರ ಯಾವುದೇ ಮನುಷ್ಯ ಸಂತೋಷದಿಂದ ಇರಲು ಸಾಧ್ಯ ಎಂದು ಅವರು ಹೇಳಿದ್ದಾರೆ.
ಪ್ರತಿಯೊಬ್ಬರೂ ಮಾನಸಿಕ ವಿಜ್ಞಾನವನ್ನು ಅರಿತುಕೊಳ್ಳಬೇಕಾಗಿದೆ. ದೈಹಿಕ ಒತ್ತಡ ಇಲ್ಲದವರಿಗೆ ಮಾನಸಿಕ ಒತ್ತಡ ಜಾಸ್ತಿ ಇರಲಿದೆ. ತನ್ನ ಮನಸ್ಸಿಗೆ ಅನಿಸಿದ್ದನ್ನು ಮಾಡಲು ಅವಕಾಶ ಇರುವ ವ್ಯಕ್ತಿ ಸಂತೋಷದಿಂದ ಜೀವನ ಸಾಗಿಸಲು ಸಾಧ್ಯ. ಇತ್ತೀಚಿನ ವರ್ಷಗಳಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿ ಮಾನಸಿಕ ಒತ್ತಡವನ್ನು ಎದುರಿಸುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಹಿಳೆಯರು ಕುಟುಂಬ ನಿರ್ವಹಣೆ, ಉದ್ಯೋಗದ ಜೊತೆಗೆ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಿದೆ. ಹೀಗಾಗಿ ಮಹಿಳೆಯರಲ್ಲಿ ಒತ್ತಡ ಜಾಸ್ತಿ ಇರುತ್ತದೆ. ಅವರ ಒತ್ತಡವನ್ನು ಹೋಗಲಾಡಿಲು ನಿಮಾನ್ಸ್ ಸಂಸ್ಥೆಯು ಪ್ರತ್ಯೇಕ ಕೋರ್ಸ್ ಪ್ರಾರಂಭಿಸಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: IPL 2021: ಕೊನೆ ಎಸೆತದಲ್ಲಿ ಸಿಕ್ಸರ್; ಆರ್‌ಸಿಬಿ ಗೆಲುವು ತಂದ ಭರತ್!