ಫ್ಯಾಕ್ಟ್‌ಚೆಕ್ : ಡೀಪ್‌ಫೇಕ್ ತಂತ್ರಜ್ಞಾನಕ್ಕೆ ಗುರಿಯಾದ ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರದ್ದು ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋವನ್ನು ಹಲವರು ಹಂಚಿಕೊಂಡಿದ್ದರು. ರಶ್ಮಿಕಾ ಮಂದಣ್ಣ ಯಾಕೆ ಹೀಗೆ ಎಂದು ಹಲವರು ಪ್ರಶ್ನಿಸಿದ್ದರು.

ವೈರಲ್ ವಿಡಿಯೋದಲ್ಲಿ ಏನಿದೆ?

ವೈರಲ್ ವಿಡಿಯೋದಲ್ಲಿ  ರಶ್ಮಿಕಾ ಮಂದಣ್ಣ ಕಪ್ಪು ಉಡುಪಿನಲ್ಲಿ ಲಿಫ್ಟ್‌ಗೆ ಪ್ರವೇಶಿಸುವುದನ್ನು ಕಾಣಬಹುದು.

ಕಪ್ಪು ಸ್ಲೀವ್ ಲೆಸ್ ಜಂಪ್‌ಸೂಟ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿರುವ 7 ಸೆಕೆಂಡುಗಳ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ 7 ಸೆಕೆಂಡುಗಳ ಕ್ಲಿಪ್ ಅನ್ನು ಹಲವು ಶೀರ್ಷಿಕೆಗಳೊಂದಿಗೆ ಹಂಚಿಕೊಂಡಿದ್ದಾರೆ. ಕೆಲವರು ಕಮೆಂಟ್‌ನಲ್ಲಿ ಇದು ನಕಲಿ ಎಂದು ಪ್ರತಿಕ್ರಿಯಿಸಿದ್ದಾರೆ. ಹಾಗಿದ್ದರೆ ಈ ವಿಡಿಯೋದಲ್ಲಿ ಕಾಣುತ್ತಿರುವುದು ನಿಜವಾಗಿಯೂ ನಟಿ ರಶ್ಮಿಕಾ ಮಂದಣ್ಣನ ಅಥವಾ ಬೇರೆ ಯಾರಾದ್ದೋ ಎಡಿಟೆಡ್ ವಿಡಿಯೋನಾ? ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಲಿಫ್ಟ್‌ಗೆ ಎಂಟ್ರಿ ನೀಡುವಾಗ ಕಾಣುವ ಮುಖ ಬೇರೆ ಮಹಿಳೆಯದ್ದು, ಕ್ಷಣಮಾತ್ರದಲ್ಲಿ ರಶ್ಮಿಕಾ ಮಂದಣ್ಣ ಅವರ ಮುಖವಾಗಿ ಬದಲಾಗುವುದನ್ನು ಕಾಣಬಹುದು.

ವೀಡಿಯೊದ ಆರಂಭದಲ್ಲಿ ಬೇರೆ ಮಹಿಳೆ ಲಿಫ್ಟ್‌ಗೆ ಪ್ರವೇಶಿಸುವುದನ್ನು ನಾವು ಗಮನಿಸಿದ್ದೇವೆ ಮತ್ತು ನಂತರ, ನಟಿ ರಶ್ಮಿಕಾ ಮಂದಣ್ಣ ಅವರ ಮುಖವು ಇದ್ದಕ್ಕಿದ್ದಂತೆ ಬದಲಾಗಿದೆ. ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸುವ ವೀಡಿಯೊಗಳಲ್ಲಿ ಇದು ಸಾಮಾನ್ಯ ಲಕ್ಷಣವಾಗಿದೆ.

ರಶ್ಮಿಕಾ ಮಂದಣ್ಣ ಅವರು ಎಲೆವೆಟರ್‌ ಪ್ರವೇಶಿಸುವ ವಿಡಿಯೋ ಇದಾಗಿದೆ. ಆದರೆ, ಈ ವಿಡಿಯೋ ಒರಿಜಿನಲ್‌ ಅಲ್ಲ. ಝರಾ ಪಾಟೀಲ್‌ ಎಂಬ ಬ್ರಿಟಿಷ್‌ ಭಾರತೀಯ ಮಹಿಳೆಯು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋದ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಡೀಫ್‌ ಫೇಕ್‌ ಆವೃತ್ತಿಯಾಗಿದೆ. ಝರಾ ಖಾನ್‌ ಅವರ ಮುಖದ ಬದಲು ರಶ್ಮಿಕಾ ಮಂದಣ್ಣ ಮುಖವನ್ನು ಈ ವಿಡಿಯೋದಲ್ಲಿ ಜೋಡಿಸಲಾಗಿದೆ.

“ಈ ವಿಡಿಯೋದ ಕುರಿತು ಕಾನೂನು ಕ್ರಮ ಕೈಗೊಳ್ಳುವ ತುರ್ತು ಇದೆ. ನಾವು ಈಗ ರಶ್ಮಿಕಾ ಮಂದಣ್ಣರ ವೈರಲ್‌ ವಿಡಿಯೋ ನೋಡುತ್ತಿದ್ದೇವೆ. ಆದರೆ, ಅದು ಝರಾ ಪಾಟೇಲ್‌ ಅವರ ವಿಡಿಯೋದ ಡೀಪ್‌ಫೇಕ್‌ ಆವೃತ್ತಿಯಾಗಿದೆ.” ಎಂದು ಅಭಿಷೇಕ್‌ ಎಂಬವರು ಅಭಿಪ್ರಾಯಪಟ್ಟಿದ್ದಾರೆ.

https://twitter.com/AbhishekSay/status/1721088692675072009?ref_src=twsrc%5Etfw%7Ctwcamp%5Etweetembed%7Ctwterm%5E1721088741136052271%7Ctwgr%5Ecc61b3948d2e7ceab8efb980ff8c3a39562f27d9%7Ctwcon%5Es2_&ref_url=https%3A%2F%2Fkannada.hindustantimes.com%2Fentertainment%2Fbollowood-news-rashmika-mandana-ai-deepfake-video-viral-amitabh-bachchan-raises-concern-what-is-ai-deepfake-how-it-wo-181699257894051.html

ಅಭಿಷೇಕ್ ಅನ್ನುವವರು ಮೂಲ ವಿಡಿಯೋವನ್ನು ಪತ್ತೆ ಮಾಡಿ ಎರಡೂ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

ರಶ್ಮಿಕಾ ಅವರ ಈ ಡೀಪ್‌ಫೇಕ್ ವೀಡಿಯೊದ ಸತ್ಯಾಸತ್ಯತೆಯ ಕುರಿತು ಅಭಿಷೇಕ್ ಎಂಬುವವರು Xನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು, ಈ ಡೀಪ್‌ಫೇಕ್ ವಿಡಿಯೋ ರಚಿಸಲು ಬಳಸಿದ ಮೂಲ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ”ಭಾರತದಲ್ಲಿ ಡೀಪ್‌ಫೇಕ್ ವಿಡಿಯೋಗಳ ತೊಂದರೆ ಎದುರಿಸಲು ಕಾನೂನು ಮತ್ತು ನಿಯಂತ್ರಕ ಚೌಕಟ್ಟಿನ ತುರ್ತು ಅವಶ್ಯಕತೆಯಿದೆ. ನಟಿ ರಶ್ಮಿಕಾ ಮಂದಣ್ಣ ಅವರ ಈ ವೈರಲ್ ವೀಡಿಯೊವನ್ನು ನೀವು Instagram ನಲ್ಲಿ ನೋಡಿರಬಹುದು. ಆದರೆ ನಿರೀಕ್ಷಿಸಿ, ಇದು ಜರಾ ಪಟೇಲ್ (sic) ಅವರ ಡೀಪ್‌ಫೇಕ್ ವೀಡಿಯೊ” ಎಂದು ಅಭಿಷೇಕ್ ತಿಳಿಸಿದ್ದಾರೆ.

https://twitter.com/AbhishekSay/status/1721088692675072009?ref_src=twsrc%5Etfw%7Ctwcamp%5Etweetembed%7Ctwterm%5E1721088741136052271%7Ctwgr%5Ecc61b3948d2e7ceab8efb980ff8c3a39562f27d9%7Ctwcon%5Es2_&ref_url=https%3A%2F%2Fkannada.hindustantimes.com%2Fentertainment%2Fbollowood-news-rashmika-mandana-ai-deepfake-video-viral-amitabh-bachchan-raises-concern-what-is-ai-deepfake-how-it-wo-181699257894051.html

ರಶ್ಮಿಕಾ ಅವರ ಮುಖ ಕಾಣಿಸಿಕೊಳ್ಳುವ ಮೊದಲು ಡೀಪ್‌ಫೇಕ್ ವೀಡಿಯೊದಲ್ಲಿ ಜರಾ ಅವರ ಮುಖವು ಒಂದು ಸೆಕೆಂಡ್ ಗೋಚರಿಸುತ್ತದೆ ಎಂದು ಅಭಿಷೇಕ್ ಗಮನಸೆಳೆದಿದ್ದಾರೆ. ”ಇದು ಡೀಪ್‌ಫೇಕ್ ವಿಡಿಯೋ ಎನ್ನುವುದು ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ತಿಳಿಯುವಷ್ಟು ಸ್ಪಷ್ಟವಾಗಿದೆ. ನೀವು ವೀಡಿಯೊವನ್ನು ಎಚ್ಚರಿಕೆಯಿಂದ ನೋಡಿದರೆ, ಮೊದಲ 0:01ಸೆಕೆಂಡ್ ನಲ್ಲಿ ಜರಾ ಅವರ ಮುಖ ಕಾಣಿಸಿ ನಂತರ ರಶ್ಮಿಕಾ ಮುಖ ಕಾಣಿಸಿಕೊಳ್ಳುತ್ತದೆ” ಎಂದು ಅವರು ಬರೆದುಕೊಂಡಿದ್ದಾರೆ.

ಜಾರಾ ಪಾಟೇಲ್ ಪ್ರತಿಕ್ರಿಯೆ:

 

ಮೂಲ ವಿಡಿಯೋದಲ್ಲಿರುವ ಮಹಿಳೆ ಜಾರಾ ಪಟೇಲ್ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಇರುವ ವಿಡಿಯೋವನ್ನು ಡೀಪ್‌ಫೇಕ್ ಬಳಸಿ ಎಡಿಟ್ ಮಾಡಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು ಇಲ್ಲಿ ಏನು ನಡೆಯುತ್ತಿದೆ, ಈ ಘಟನೆ ಬಗ್ಗೆ ತೀವ್ರ ಅಸಮಾಧಾನವಿದೆ ಎಂದು ಬರೆದಿದ್ದಾರೆ.

ಇದರಿಂದ ತನಗೆ ನೋವಾಗಿದೆ ಎಂದ ರಶ್ಮಿಕಾ ಮಂದಣ್ಣ

ಇದನ್ನು ಹಂಚಿಕೊಳ್ಳಲು ನನಗೆ ತುಂಬಾ ನೋವಾಗುತ್ತದೆ ಮತ್ತು ಆನ್‌ಲೈನ್‌ನಲ್ಲಿ ಹರಡಿರುವ ನನ್ನ ಡೀಪ್‌ಫೇಕ್ ವೀಡಿಯೊದ ಬಗ್ಗೆ ಮಾತನಾಡಬೇಕಾಗಿದೆ.

ಈ ರೀತಿಯ ವಿಷಯವು ಪ್ರಾಮಾಣಿಕವಾಗಿ, ನನಗೆ ಮಾತ್ರವಲ್ಲದೆ, ತಂತ್ರಜ್ಞಾನವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಕಾರಣದಿಂದಾಗಿ ನಮ್ಮಲ್ಲಿ ಪ್ರತಿಯೊಬ್ಬರಿಗೂ ಅತ್ಯಂತ ಭಯಾನಕವಾಗಿದೆ.

ಇಂದು, ಮಹಿಳೆಯಾಗಿ ಮತ್ತು ನಟಿಯಾಗಿ, ನನ್ನ ರಕ್ಷಣೆ ಮತ್ತು ಬೆಂಬಲ ವ್ಯವಸ್ಥೆಯಾಗಿರುವ ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ಆದರೆ ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ನನಗೆ ಇದು ಸಂಭವಿಸಿದರೆ, ನಾನು ಇದನ್ನು ಹೇಗೆ ನಿಭಾಯಿಸಬಹುದು ಎಂದು ನಾನು ನಿಜವಾಗಿಯೂ ಊಹಿಸಲು ಸಾಧ್ಯವಿಲ್ಲ.

ನಮ್ಮಲ್ಲಿ ಹೆಚ್ಚಿನವರು ಇಂತಹ ಅಪಾಯಕ್ಕೆ ಈಡಾಗುವ ಮೊದಲು ನಾವು ಇದನ್ನು ಸಮುದಾಯವಾಗಿ ಮತ್ತು ತುರ್ತುಸ್ಥಿತಿಯೊಂದಿಗೆ ಪರಿಹರಿಸಬೇಕಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇಷ್ಟಕ್ಕೂ ಏನಿದು ಡೀಪ್ ಫೇಕ್ ತಂತ್ರಜ್ಞಾನ?

ಈ ಡೀಪ್ ಫೇಕ್ ತಂತ್ರಜ್ಞಾನವನ್ನು 21ನೇ ಶತಮಾನದ ಫೋಟೋಶಾಪ್ ನ ಉತ್ತರದಾಯಿ ಎಂದು ಹೇಳಲಾಗುತ್ತಿದೆ. ಕೃತಕ ಬುದ್ದಿಮತ್ತೆಯ ಸಹಾಯದಿಂದ ಯಾರದ್ದೋ ದೇಹಕ್ಕೆ ಯಾರದ್ದೋ ತಲೆಯನ್ನು ಫೋಟೋ ಎಡಿಟಿಂಗ್‌ ಟೂಲ್‌ ಮೂಲಕ ಜೋಡಿಸಲಾಗುತ್ತದೆ. ಇದು ಫೋಟೋ ಫಾರ್ಮ್ಯಾಟ್ ನಲ್ಲಿದ್ದರೆ ನೋಡುಗರಿಗೆ ಸಾಮಾನ್ಯವಾಗಿ ಸ್ವಲ್ಪವಾದರೂ ಅನುಮಾನ ಬರುತ್ತದೆ. ಆದರೆ ಈ ಡೀಪ್‌ ಫೇಕ್‌ ತಂತ್ರಜ್ಞಾನದಲ್ಲಿ ಯಾವುದೇ ಅನುಮಾನ ಬಾರದಂತೆ ಫೋಟೋ ಅಲ್ಲ ವಿಡಿಯೋವನ್ನೇ ಸೃಷ್ಟಿ ಮಾಡಲಾಗುತ್ತದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ತಂತ್ರಜ್ಞಾನ ನೆರವಿನಿಂದ ಮಾರ್ಫಿಂಗ್ ವಿಡಿಯೋ, ಫೋಟೋಗಳು ಸೃಷ್ಟಿ ಮಾಡುವುದಕ್ಕೆ ಡೀಪ್‌ಫೇಕ್‌ ಎಂದು ಕರೆಯಲಾಗುತ್ತದೆ. ವಿಡಿಯೋ ಎಷ್ಟು ನೈಜತೆಯಿಂದ ಇರುತ್ತದೆ ಎಂದರೆ ವ್ಯಕ್ತಿಯ ದೇಹಕ್ಕೂ ಮತ್ತು ಮುಖಕ್ಕೆ ನೇರ ಸಂಬಂಧ ಇದ್ದಂತೆ ಇರುತ್ತದೆ. ಮೂಲ ವಿಡಿಯೋ ಬೇರೆ ಆಗಿದ್ದರೂ ಈ ವ್ಯಕ್ತಿಯೇ ವಿಡಿಯೋದಲ್ಲಿ ನಟಿಸುತ್ತಿದ್ದಂತೆ ಬಿಂಬಿಸಲಾಗುತ್ತದೆ. ಆ ವಿಡಿಯೋದಲ್ಲಿ ಇಲ್ಲದ ವ್ಯಕ್ತಿ ನೋಡಿದರೂ ಅದು ತಾನೇ ಏನೋ ಎಂಬ ಅನುಮಾನ ಮೂಡುವಂತೆ ಇರುತ್ತದೆ.

ಒಟ್ಟಾರೆಯಾಗಿಹೇಳುವುದಾದರೆ, ವೈರಲ್ ವಿಡಿಯೋದಲ್ಲಿರುವ ಮಹಿಳೆ ನಟಿ ರಶ್ಮಿಕಾ ಮಂದಣ್ಣ ಅಲ್ಲ. ಜಾರಾ ಪಾಟೇಲ್ ಎಂಬ ಮಹಿಳೆಯ ಮೂಲ ವಿಡಿಯೋವನ್ನು AI ಮತ್ತು ಡೀಪ್‌ಫೇಕ್ ತಂತ್ರಜ್ಞಾನದ ಮೂಲಕ ಎಡಿಟ್ ಮಾಡಿ ರಶ್ಮಿಕಾ ಮಂದಣ್ಣರ ಮುಖವನ್ನು ಜೋಡಿಸಿ ತಪ್ಪಾಗಿ ಹಂಚಲಾಗಿದೆ.

ತಂತ್ರಜ್ಞಾನ ಬೆಳೆದಂತೆಲ್ಲ ಅದರ ಪ್ರಯೋಜನವನ್ನು ದೇಶದ ಏಳಿಗೆ ಮತ್ತು ಜನ ಕಲ್ಯಾಣ ಕೆಲಸಗಳಿಗೆ ಬಳಸಿಕೊಂಡು ಅಭಿವೃದ್ದಿಯತ್ತ ಸಾಗುವ ಕಡೆಗೆ ಆಸ್ತೆವಹಿಸಬೇಕಾಗುತ್ತದೆ. ಆದರೆ ಅದನ್ನು ಹೀಗೆ ತಪ್ಪು ಕೆಲಸಗಳಿಗೆ ಬಳಕೆ ಮಾಡುವ ಮೂಲಕ ವ್ಯಕ್ತಿಯ ಘನತೆ ಮತ್ತು ಸ್ವಾತಂತ್ರಕ್ಕೆ ಅಡ್ಡಿಆಗುವಂತೆ ಮಾಡಿದರೆ ಯಾರಿಗೂ ಲಾಭವಿಲ್ಲ, ಅದರಿಂದ ನಷ್ಟವೇ ಹೆಚ್ಚು. ಇದರ ಬಗ್ಗೆ ಹೆಚ್ಚು ಜಾಗೃತರಾಗೋಣ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕಾಂಗ್ರೆಸ್‌ನ ಹಸ್ತದ ಗುರುತು, ಮುಸ್ಲಿಂ ಧರ್ಮದಿಂದ ಬಂದಿದೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights