ಫ್ಯಾಕ್ಟ್‌ಚೆಕ್ : ಕಾಂಗ್ರೆಸ್‌ನ ಹಸ್ತದ ಗುರುತು, ಮುಸ್ಲಿಂ ಧರ್ಮದಿಂದ ಬಂದಿದೆ ಎಂಬುದು ನಿಜವೇ?
“ಕಾಂಗ್ರೆಸ್ ಪಕ್ಷವು ಇಸ್ಲಾಂ ಧರ್ಮದ ಚಿಹ್ನೆಯನ್ನು ತನ್ನ ಚುನಾವಣಾ ಚಿಹ್ನೆಯಾಗಿ ಅಳವಡಿಸಿಕೊಂಡಿದೆ” ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಪಕ್ಷದ ಚುನಾವಣಾ ಚಿಹ್ನೆ ‘ಹಸ್ತ’ದ ಗುರುತಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳು ಹರಿದಾಡುತ್ತಿವೆ. ಮುಸ್ಲಿಂ ಧರ್ಮದ ಪವಿತ್ರ ಸ್ಥಳಗಳಲ್ಲಿ ಒಂದಾದ ಇರಾಕ್‌ನ ಕರ್ಬಲಾದಿಂದ ಕಾಂಗ್ರೆಸ್‌ನ ‘ಹಸ್ತ’ ದ ಚಿಹ್ನೆಯನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್‌ಗಳೊಂದಿಗೆ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ಇಸ್ಲಾಮಿಸಂನ ಚಿಹ್ನೆಯನ್ನು ಕಾಂಗ್ರೆಸ್ ತನ್ನ ಚುನಾವಣಾ ಚಿಹ್ನೆಯನ್ನಾಗಿ ಮಾಡಿಕೊಂಡಿತು. 99% ಹಿಂದೂಗಳಿಗೆ ಇದರ ಅರಿವಿರಲಿಲ್ಲ, ಆದರೆ ಎಲ್ಲಾ ಮುಸಲ್ಮಾನರಿಗೂ ಇದು ಮೊದಲಿನಿಂದಲೂ ತಿಳಿದಿತ್ತು, ಆದರೆ ಹಿಂದೂಗಳು ಕಾಂಗ್ರೆಸ್‌ಗೆ ಮತ ಹಾಕುವುದನ್ನು ನಿಲ್ಲಿಸಬೇಡಿ ಎಂದು ಯಾರೂ ಹೇಳಲಿಲ್ಲ. ಮುಸ್ಲಿಮರು ತಮ್ಮ ಧಾರ್ಮಿಕ ಗುರುತಿನಿಂದಾಗಿ ಕಾಂಗ್ರೆಸ್‌ನೊಂದಿಗೆ ಉತ್ತಮ ಸಂಬಂಧ ಹೊಂದಿದ್ದರೆ, ಜ್ಞಾನದ ಕೊರತೆ ಮತ್ತು ಕಾಂಗ್ರೆಸ್ ಬಾಂಧವ್ಯದ ಕಾರಣದಿಂದ ಹಿಂದೂಗಳು ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದ್ದರು” ಹಾಗಾಗಿ ಕಾಂಗ್ರೆಸ್ ಒಂದು ಪಕ್ಷವಲ್ಲ, ಅದೊಂದು ದೇಶ ವಿರೋಧಿ ಸಂಘಟನೆ ಎಂದು ಹೇಳುತ್ತೇನೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ. ಚಿತ್ರದಲ್ಲಿರುವ ಹಸ್ತದ ಗುರುತುಗಳ ಬಗ್ಗೆ ಮಾಹಿತಿಯನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ‘ಪಂಜಾ ಆಲಂ’ ಎಂದು ಕರೆಯಲಾಗುವ ಈ ಚಿತ್ರದ ಮುದ್ರೆಗಳನ್ನು ದೆಹಲಿ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಕಾಣಬಹುದು.
ಐದು ಬೆರಳಿನ ‘ಪಂಜಾ ಆಲಂ’ ಹಿನ್ನಲೆ ಏನು?
ಸಂಗ್ರಹಾಲಯದ ಪ್ರಕಾರ ‘ಪಂಜಾ ಆಲಂ’ ಮುಹರಂನ ಬೆಳಗಿನ ಮೆರವಣಿಗೆಯಲ್ಲಿ ಬಳಸಲಾಗುವ ಪ್ರಮುಖ ಧಾರ್ಮಿಕ ಸಂಕೇತವಾಗಿದೆ. ಗುರುತನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ.
ಪಂಜಾವು ಇಮಾಮ್ ಹುಸೇನ್ರ ಮಲಸಹೋದರನಾಗಿದ್ದ ಅಬುಲ್ ಫಜಲ್ ಅಬ್ಬಾಸ್‌ರ ಹತ್ಯೆಗೀಡಾದ ಕೈಗಳನ್ನು ಪ್ರತಿನಿಧಿಸುತ್ತದೆ. ಇಮಾಮ್ ಹುಸೇನ್ ಅವರ ಶಿಬಿರದಲ್ಲಿನ ಬಾಯಾರಿದ ಮಕ್ಕಳಿಗೆ ನೀರು ತರಲು ಕರ್ಬಲಾದಲ್ಲಿನ ಯೂಫ್ರಟಿಸ್ ನದಿಯ ನಹ್ರ್-ಎ-ಫುರತ್ ಗೆ ಹೋದಾಗ ಅಬುಲ್ ಫಜಲ್ ಅಬ್ಬಾಸ್ ರ ಕೈಕತ್ತರಿಸಲಾಗಿದೆ ಎಂದು ಇತಿಹಾಸ ಹೇಳುತ್ತದೆ. ಪಂಜಾ ಅಲಾವ್ (ಅಬುಲ್ ಫಜಲ್ ಅಬ್ಬಾಸ್ ರ) ಐದು ಬೆರಳುಗಳು ಕೊನೆಯ ಪ್ರವಾದಿ ಹಜರತ್ ಮೊಹಮ್ಮದ್, ಹಜರತ್ ಫಾತಿಮಾ, ಹಜರತ್ ಅಲಿ, ಹಜರತ್ ಹಸನ್ ಮತ್ತು ಹಜರತ್ ಹುಸೇನ್ ಅವರನ್ನು ಪ್ರತಿನಿಧಿಸುತ್ತವೆ.
ಕಾಂಗ್ರೆಸ್ ಪಕ್ಷದ ಚುನಾವಣಾ ಗುರುತು?
ಪ್ರಸ್ತುತ ಕಾಂಗ್ರೆಸ್ ಪಕ್ಷದ ಚಿಹ್ನೆಯು ಈ ಚಿಹ್ನೆಯನ್ನು ಹೋಲುತ್ತದೆ. ಆದರೆ, ಪಂಜಾ ಆಲಂನಿಂದಾಗಿ ಕಾಂಗ್ರೆಸ್ ಈ ಚಿಹ್ನೆಯನ್ನು ಆಯ್ಕೆ ಮಾಡಿದೆ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. ಅಷ್ಟೇ ಅಲ್ಲ ಕಾಂಗ್ರೆಸ್ ಪಕ್ಷಕ್ಕೆ ಮೊದಲಿನಿಂದಲೂ ಈ ಚಿಹ್ನೆ ಇರಲಿಲ್ಲ. ಭಾರತದ ಸ್ವಾತಂತ್ರ್ಯದ ನಂತರ, 1951-52ರಲ್ಲಿ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಗಳು ನಡೆದವು. ಆ ಚುನಾವಣೆಯಲ್ಲಿ ನೆಹರೂ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ‘ನೊಗ ಹೊತ್ತ ಎತ್ತುಗಳ ಜೋಡಿ’ಯ ಚಿಹ್ನೆಯೊಂದಿಗೆ ಸ್ಪರ್ಧಿಸಿತ್ತು.
1952 ಮತ್ತು 1969 ರ ನಡುವೆ, ಕಾಂಗ್ರೆಸ್ ಅನ್ನು ನೊಗವನ್ನು ಹೊತ್ತ ಜೋಡಿ ಎತ್ತುಗಳು ಪ್ರತಿನಿಧಿಸಿದವು. ಆದರೆ ಆಗಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಸ್. ನಿಜಲಿಂಗಪ್ಪ ಅವರು ಪಕ್ಷದಿಂದ ಹೊರಹಾಕಲ್ಪಟ್ಟ ನಂತರ ಇಂದಿರಾ ಗಾಂಧಿಯವರು ತಮ್ಮದೇ ಆದ ಬಣ-INC (R) ಅನ್ನು ಪ್ರಾರಂಭಿಸಿದಾಗ, ಅದನ್ನು ಹೊಸ ಚುನಾವಣಾ ಚಿಹ್ನೆ – ಹಸು ಮತ್ತಯ ಕರುವಿನ ಚಿಹ್ನೆ ಮೂಲಕ ಪ್ರತಿನಿಧಿಸಲಾಯಿತು. ಮತ್ತೊಂದೆಡೆ, “ಹಳೆಯ ಕಾಂಗ್ರೆಸ್” (ಕೆಲವೇ ಸಂಸದರ ಬೆಂಬಲವನ್ನು ಹೊಂದಿತ್ತು), ನೊಗವನ್ನು ಹೊತ್ತೊಯ್ಯುವ ಜೋಡಿ ಎತ್ತುಗಳ ಪಕ್ಷದ ಚಿಹ್ನೆಯನ್ನು ಉಳಿಸಿಕೊಂಡಿದೆ. 1977 ರ ಚುನಾವಣೆಯ ನಂತರ ಕಾಂಗ್ರೆಸ್ (ಆರ್) ಬಣದಿಂದ ಬೇರ್ಪಟ್ಟು ಹೊಸ ಕಾಂಗ್ರೆಸ್ (ಐ) ಅನ್ನು ರಚಿಸಿದಾಗ ಇಂದಿರಾ ಗಾಂಧಿ ಅವರು ಪಕ್ಷದ ಪ್ರಸ್ತುತ ಚುನಾವಣಾ ಚಿಹ್ನೆಯನ್ನು ಮೊದಲ ಬಾರಿಗೆ ಬಳಸಿದರು.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ. ಕಾಂಗ್ರೆಸ್‌ನ ಚಿಹ್ನೆಗಳು
ಹಿಂದೂಸ್ಥಾನ್ ಟೈಮ್ಸ್ ನ ವರದಿಯ ಪ್ರಕಾರ ಮಾಜಿ ಪ್ರಧಾನಿ ಇಂದಿರಾಗಾಂಧಿ ದೇವಾಲಯದ ದೇವತೆಯಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ನಂಬುತ್ತಾರೆ. ಈ ಹಿಂದೆ ಎರ್ನಾಕುಲಂನಲ್ಲಿ ನಡೆದ ಎ.ಕೆ.ಆಂಟನಿ ನೇತೃತ್ವದ ಕಾಂಗ್ರೆಸ್ (ಎ) ಮತ್ತು ಕೆ.ಕರುಣಾಕರನ್ ನೇತೃತ್ವದ ಕಾಂಗ್ರೆಸ್ (ಐ) ವಿಲೀನದ ಮಹಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಇಂದಿರಾ ಗಾಂಧಿ ಅವರು ಬಿಡುವು ಮಾಡಿಕೊಂಡು ಇಲ್ಲಿನ ಕಲ್ಲೇಕುಲಂಗರದ ಶ್ರೀ ಎಮೂರ್ ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ಅವರಿಗೆ ಇಬ್ಬರು ತೆರೆದ ಅಂಗೈಗಳನ್ನು ಎತ್ತಿ ತೋರಿಸಿದ್ದರು. ಇದು ಇಂದಿರಾಗಾಂಧಿ ಅವರು ತಮ್ಮ ಪಕ್ಷದ ಚಿನ್ಹೆಯಾಗಿ ಹಸ್ತದ ಗುರುತು ಆಯ್ಕೆ ಮಾಡಲು ಪ್ರೇರಣೆಯಾಯಿತು ಎನ್ನಲಾಗಿದೆ.
ದೈನಿಕ್ ಭಾಸ್ಕರ್ ಮಾಡಿರುವ ವರದಿಯ ಪ್ರಕಾರ. ಹೇಮಾಂಬಿಕಾ ದೇವಸ್ಥಾನದಲ್ಲಿ ದೇವಿಯ ಎರಡು ಕೈಗಳ ಪ್ರತಿಮೆ ಬಗ್ಗೆ ಇಂದಿರಾಗಾಂಧಿ ವಿಶೇಷ ನಂಬಿಕೆ ಹೊಂದಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ವರದಿಯ ಪ್ರಕಾರ- “ಇಂದಿರಾ ಗಾಂಧಿಯವರು ಹೇಮಾಂಬಿಕಾ ದೇವಸ್ಥಾನವನ್ನು ಗಮನದಲ್ಲಿಟ್ಟುಕೊಂಡು ಹಸ್ತದ ಗುರುತನ್ನು ಆರಿಸಿಕೊಂಡರು. ಹೇಮಾಂಬಿಕಾ ದೇವಾಲಯವು ವಿಶ್ವದ ಅತ್ಯಂತ ವಿಶಿಷ್ಟವಾದ ಮಾತಾ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ತಾಯಿಯ ವಿಗ್ರಹವಿಲ್ಲ. ದೇವಿಯೆಂದು ಪೂಜಿಸುವ ಎರಡು ಕೈಗಳು ಮಾತ್ರ ಇವೆ. ಈ ದೇವಾಲಯವನ್ನು ಇಮೂರ್ ಭಗವತಿ ದೇವಾಲಯ ಎಂದೂ ಕರೆಯುತ್ತಾರೆ. ಇದು ಕೇರಳದ ಪಾಲಕ್ಕಾಡ್ ಜಿಲ್ಲೆಯ ಕಾಲೆಕುಲಂಗರ ತಾಲ್ಲೂಕಿನಲ್ಲಿದೆ. ಪರಶುರಾಮನು ಈ ದೇವಾಲಯವನ್ನು ಸ್ಥಾಪಿಸಿದನೆಂದು ನಂಬಲಾಗಿದೆ”.
ಈ ಎಲ್ಲಾ ಆಧಾರಗಳಿಂದ ಸ್ಪಷ್ಟವಾಗಿ ತಿಳಿಯುವುದೇನೆಂದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಪ್ರತಿಪಾದಿಸಿರುವಂತೆ ಕರ್ಬಲಾದಲ್ಲಿ ಹತ್ಯೆಯಾದ ಹಜರತ್ ಇಮಾಮ್ ಹುಸೇನ್ ಅವರ ಸಂಕೇವಾಗಿ ಕಾಂಗ್ರೆಸ್ ಹಸ್ತದ ಚಿಹ್ನೆಯನ್ನು ತೆಗೆದುಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಕೇರಳದ ಪಾಲಕ್ಕಾಡ್ ಜಿಲ್ಲೆಯ ಹೇಮಾಂಬಿಕಾ ದೇವಸ್ಥಾನದ ಹಸ್ತದ ಮೇಲಿನ ನಂಬಿಕೆಯಿಂದಾಗಿ ಕಾಂಗ್ರೆಸ್ ಚುನಾವಣಾ ಚಿಹ್ನೆಯನ್ನು ತೆಗೆದುಕೊಂಡಿದೆ ಎಂಬ ವಾದವೂ ಇದೆ.
ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಪ್ರತಿ ಸಂದರ್ಭದಲ್ಲಿ BJP ಮತ್ತು ಬಲಪಂಥೀಯ ಪ್ರತಿಪಾದಕರು ಕಾಂಗ್ರೆಸ್ ಮುಸ್ಲಿಮರ ಪಕ್ಷ , ಹಸ್ತದ ಗುರುತು ಇಸ್ಲಾಂ ಧರ್ಮದಿಂದ ಬಂದಿದೆ ಎಂದು ಪ್ರಚಾರ ಮಾಡುತ್ತಿರುತ್ತಾರೆ. ಆದರೆ ಇದು ಸುಳ್ಳು, ಕಾಂಗ್ರೆಸ್ ಪಕ್ಷದ ಹಸ್ತದ ಚಿನ್ಹೆ ಹಿಂದೂ ಧಾರ್ಮಿಕ ಹಿನ್ನಲೆಯಿಂದ ಬಂದಿದೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ, ಸಾಮಾಜಿಕ ಮಾಧ್ಯಮ ಬಳಕೆದಾರರು ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : 1966ರಲ್ಲಿ ಮೃತಪಟ್ಟಿದ್ದು 5 ಸಾವಿರ ಸಾಧುಗಳಲ್ಲ! ಮತ್ತೆಷ್ಟು?
Musalmaanaru tammade aada yavude swatantra wagi Bharat dalli yavude Rajkiya party hondilla.
But
Yavude party ge symbol Musalmaan rinda bandre Enadru problem ideya…?
Bharat Deshada yelige mattu swatantrakke tyaga balidana needidantaha samudaya Musleem kooda houdu..