ಫ್ಯಾಕ್ಟ್‌ಚೆಕ್: ನಾನು ಪತ್ರಕರ್ತಳಲ್ಲ, ನಾನು BJPಯ ಅನಧಿಕೃತ ವಕ್ತಾರೆ ಎಂಬ ನಾಮಫಲಕದ ವಾಸ್ತವವೇನು?
ದೆಹಲಿಯ ಮೇಲ್ಸೇತುವೆಯೊಂದರಲ್ಲಿ ಸುದ್ದಿ ನಿರೂಪಕಿ ಅಂಜನಾ ಓಂ ಕಶ್ಯಪ್ ಅವರ ಫೋಟೋವನ್ನು ಪ್ರದರ್ಶಿಸುವ ಜಾಹೀರಾತು ಫಲಕದ ಚಿತ್ರದಲ್ಲಿ “ನಾನು ಪತ್ರಕರ್ತಳಲ್ಲ, ನಾನು BJPಯ ಅನಧಿಕೃತ ವಕ್ತಾರೆ” ಎಂದು ಬರೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ದೆಹಲಿಯ ಫ್ಲೈ ಓವರ್ ಮೇಲೆ ಈ ಪೋಸ್ಟರ್ ಅನ್ನು ಯಾರೋ ಹಾಕಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :
ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ 2019 ರಿಂದ ಅದೇ ಚಿತ್ರ ವೈರಲ್ ಆಗಿರುವುದು ಕಂಡುಬಂದಿದೆ. 2019 ರಲ್ಲಿ ಅಂಜನಾ ಅವರು ರಾಹುಲ್ ಗಾಂಧಿಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದಾಗ, ಈ ಜಾಹೀರಾತು ಫಲಕದ ಚಿತ್ರವನ್ನು ಪ್ರದರ್ಶಿಸಿ “BJPಯ ಅನಧಿಕೃತ ವಕ್ತಾರೆ” ಎಂದು ಹಂಚಿಕೊಳ್ಳಲಾಗಿತ್ತು. ಕೆಲ ಫೇಸ್‌ಬುಕ್ ಮತ್ತು ಟ್ವಿಟರ್ ಬಳಕೆದಾರರು ಈ ಚಿತ್ರವನ್ನು ಹಂಚಿಕೊಂಡಿದ್ದರು. ಕೆಲವು ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
#anjanaommodi
Retweet for this pic.twitter.com/iyfAZJ3UfZ— Muhammad Mushir (@mushir_sre) September 22, 2019
ಪೋಸ್ಟ್‌ಗೆ ಸಂಬಂಧಿಸಿದಂತೆ ಮತ್ತಷ್ಟು ಹುಡುಕಾಟ ನಡೆಸಿದಾಗ 01 ಮೇ 2017 ರಂದು ಇಂಡಿಯಾ ಟುಡೆಯ ಟ್ವಿಟರ್ ಪೋಸ್ಟ್ ಲಭ್ಯವಾಗಿದ್ದು. ಪೋಸ್ಟ್ ನಲ್ಲಿ ಅಂಜನಾ ಅವರ ಫೋಟೋನ್ನು ಒಳಗೊಂಡ ಬಿಲ್‌ಬೋರ್ಡ್ ಜಾಹೀರಾತನ್ನು ಪ್ರದರ್ಶಿಸಲಾಗಿದೆ. ಎರಡು ಚಿತ್ರಗಳನ್ನು ಹೋಲಿಸಿ ನೋಡಿದಾಗ, ಈ ಬಿಲ್‌ಬೋರ್ಡ್‌ನಲ್ಲಿರುವ ಪಠ್ಯವನ್ನು ಬದಲಾಯಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
News does not wait. It breaks.
And whenever it does, it finds us ready.
No buffering here. Only connecting. #ReachedAndWaiting pic.twitter.com/qSyWuxpvAW— IndiaToday (@IndiaToday) May 1, 2017
ಅಂತೆಯೇ, ಅದೇ ಬಿಲ್ಬೋರ್ಡ್ ಚಿತ್ರವನ್ನು ಇತರ ಮಾಧ್ಯಮದ ವ್ಯಕ್ತಿಗಳನ್ನು ಅಪಹಾಸ್ಯ ಮಾಡಲು ಬಳಸಲಾಗುತ್ತದೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.


ಒಟ್ಟಾರೆಯಾಗಿ ಹೇಳುವುದಾದರೆ, 2017 ರಲ್ಲಿ ಇಂಡಿಯಾ ಟುಡೆ ಹಂಚಿಕೊಂಡಿರುವ ಜಾಹಿರಾತು ಫಲಕದಲ್ಲಿರುವ ಪಠ್ಯವನ್ನು ಬದಲಾಯಿಸಿ ಅಂಜನಾ ಓಂ ಕಶ್ಯಪ್ ಅವರ ಪೋಟೋ ಇರುವ ಜಾಹೀರಾತು ಫಲಕದ ಚಿತ್ರಕ್ಕೆ “ನಾನು ಪತ್ರಕರ್ತಳಲ್ಲ. ನಾನು ಬಿಜೆಪಿಯ ಅನಧಿಕೃತ ವಕ್ತಾರೆ” ಎಂದು ಫೋಟೊ ಎಡಿಟ್ ಮಾಡಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಇದು ಗುಜರಾತಿನ ಬುಲೆಟ್ ಟ್ರೈನ್ ನಿಲ್ದಾಣವೇ ?

