ಫ್ಯಾಕ್ಟ್‌ಚೆಕ್: ತೆಲಂಗಾಣದಲ್ಲಿ ಕೋಳಿ ಮತ್ತು ಮದ್ಯ ಹಂಚಿದ್ದು BJP ನಾಯಕರೇ?

BJP ನಾಯಕರು ಮತದಾರರಿಗೆ ಕೋಳಿ ಮತ್ತು ಮದ್ಯ ಹಂಚುತ್ತಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ಕೆಲ ವ್ಯಕ್ತಿಗಳು ನೀಡುತ್ತಿರುವ ಕೋಳಿ ಮತ್ತು ಮದ್ಯದ ಬಾಟಲಿಗಳನ್ನು ಸ್ವೀಕರಿಸುತ್ತಿರುವ ಜನರನ್ನು ವೈರಲ್  ವೀಡಿಯೊದಲ್ಲಿ ಕಾಣಬಹುದು.

“ಬಿಜೆಪಿಯಿಂದ ಮಾತ್ರ ಇಂತಹದನ್ನು ಮಾಡಲು ಸಾಧ್ಯ” ಎಂಬ ಶೀರ್ಷಿಕೆಯೊಂದಿಗೆ  ಫೇಸ್‌ಬುಕ್‌ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್‌ನಲ್ಲಿ ಸರ್ಚ್ ಮಾಡಲು “ಬಿಜೆಪಿ ಕೋಳಿ ಮತ್ತು ಮದ್ಯವನ್ನು ವಿತರಿಸುತ್ತಿದೆಯೇ” ಎಂಬ ಕೀವರ್ಡ್‌ಗಳ ಸಹಾಯದಿಂದ ಹುಡುಕಿದಾಗ,ಇದೇ ರೀತಿಯ ವೀಡಿಯೊವನ್ನು ಒಳಗೊಂಡ ವೀಡಿಯೋವನ್ನು ಪ್ರಸಾರ ಮಾಡಿರುವ  ಸುದ್ದಿ ವರದಿಗಳು ಲಭ್ಯವಾಗಿವೆ. ವರದಿಗಳ ಪ್ರಕಾರ, ಕೋಳಿ ಮತ್ತು ಮದ್ಯವನ್ನು ಹಂಚುತ್ತಿರುವುದು TRS ನಾಯಕರು ಎಂದು ಉಲ್ಲೇಖಿಸಿವೆ.

ತೆಲಂಗಾಣದ ವಾರಂಗಲ್‌ನಲ್ಲಿ ಈ ವಿತರಣೆ ನಡೆದಿದೆ ಎಂದು ಅಕ್ಟೋಬರ್ 4 ರಂದು ಇಂಡಿಯಾ ಟುಡೇ ವರದಿ ಮಾಡಿದೆ. ಈ ಘಟನೆಯ ನಂತರ TRS ವಿರುದ್ದ BJP ವಾಗ್ದಾಳಿ ನಡೆಸಿದೆ.

ಆಂಧ್ರಪ್ರದೇಶ BJP ರಾಜ್ಯ ಪ್ರಧಾನ ಕಾರ್ಯದರ್ಶಿ ವಿಷ್ಣು ವರ್ಧನ್ ರೆಡ್ಡಿ, TRS ಅಧ್ಯಕ್ಷ ಕೆಟಿ ರಾಮರಾವ್ ಅವರನ್ನು ಟ್ಯಾಗ್ ಮಾಡಿ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ “ಹಾಗಾಗಿ ಈಗ ಟಿಆರ್‌ಎಸ್ ನಾಯಕರು ಕೆಸಿಆರ್ ಗಾರು ಅವರನ್ನು ಪ್ರಧಾನಿ ಮಾಡಲು ಮದ್ಯ ಮತ್ತು ಚಿಕನ್ ಹಂಚುತ್ತಿದ್ದಾರೆ”  ಎಂಬ ಹೇಳಿಕೆಯೊಂದಿಗೆ, ಇದು ರಾಮರಾವ್ ಅವರ ಆಲೋಚನೆಯೇ ಎಂದು ಪ್ರಶ್ನಿಸಿದ್ದಾರೆ.

https://twitter.com/SVishnuReddy/status/1577238049897189377?ref_src=twsrc%5Etfw%7Ctwcamp%5Etweetembed%7Ctwterm%5E1577238049897189377%7Ctwgr%5E084533bbc46856eb9b771dcbc65cedd0ed51bde0%7Ctwcon%5Es1_&ref_url=https%3A%2F%2Fwww.indiatoday.in%2Ffact-check%2Fstory%2Ffact-check-fowl-play-this-video-shows-trs-leader-distributing-liquor-and-chicken-not-bjp-2283623-2022-10-10

ಸ್ಥಳಿಯ 200 ಕಾರ್ಮಿಕರಿಗೆ ಮದ್ಯದ ಬಾಟಲಿಗಳು ಮತ್ತು ಕೋಳಿಗಳನ್ನು ವಿತರಿಸಿದ TRS ನಾಯಕ ರಾಜನಾಳ ಶ್ರೀಹರಿ ಎಂದು ಅಕ್ಟೋಬರ್ 4 ರಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಟಿಸಿದೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ವಾರಂಗಲ್‌ನಲ್ಲಿ ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸುವ ಮುನ್ನವೇ ಈ ವಿತರಣೆ ನಡೆದಿದೆ ಎಂದು ವರದಿಯಾಗಿದೆ.

ಸುದ್ದಿ ಸಂಸ್ಥೆ ANI ಕೂಡ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ವಿಡಿಯೋದಲ್ಲಿರುವ ವ್ಯಕ್ತಿ TRS ನಾಯಕ ರಾಜನಾಳ ಶ್ರೀಹರಿ ಎಂದು ಹೇಳಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮದ್ಯ ಮತ್ತು ಕೋಳಿ ಹಂಚುತ್ತಿರುವುದು TRS ಪಕ್ಷದ ಸದಸ್ಯರಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ BJP ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಗಾಂಧಿ ಬ್ರಿಟೀಷರಿಂದ ಪಿಂಚಣಿ ಪಡೆಯುತ್ತಿದ್ದರು ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights