ಫ್ಯಾಕ್ಟ್‌ಚೆಕ್: ಕ್ಯಾನ್ಸರ್‌ನಿಂದ ಸಾವನಪ್ಪಿದ್ದು ದಕ್ಷಿಣ ಆಫ್ರಿಕಾದ ಕ್ರಿಕೆಟರ್ ಡೇವಿಡ್ ಮಿಲ್ಲರ್ ಮಗಳಲ್ಲ!

ಹಲವು ವರ್ಷಗಳಿಂದ ಮಿಲ್ಲರ್ ಪುತ್ರಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇದೀಗ ಡೇವಿಡ್ ಮಿಲ್ಲರ್ ಭಾರತದಲ್ಲಿ ಏಕದಿನ ಕ್ರಿಕೆಟ್ ಸರಣಿ  ಆಡುತ್ತಿರುವಾಗಲೇ ದಕ್ಷಿಣ ಆಫ್ರಿಕಾದಲ್ಲಿ ಮಗಳು ಮೃತಪಟ್ಟಿರುವ ಸುದ್ದಿ ಆಫಾತ ತರಿಸಿದೆ. ಎಂದು ಹಲವು ಸುದ್ದಿ ಮಾಧ್ಯಮಗಳು ವರದಿಯನ್ನು ಪ್ರಸಾರ ಮಾಡಿವೆ..

ನನ್ನ ಪುಟ್ಟ ರಾಜಕುಮಾರಿಯನ್ನು ಕಳೆದುಕೊಂಡಿದ್ದೇನೆ. ನನ್ನ ರಾಜಕುಮಾರಿ ಜೀವನದಲ್ಲಿ ಹಲವು ಕಷ್ಟದ ಹಾದಿಯನ್ನು ಎದುರಿಸಿ ನಗುತ್ತ ಇದ್ದಳು. ಇದೀಗ ನನ್ನನ್ನು ಬಿಟ್ಟು ಹೋಗಿದ್ದಾಳೆ. ಐ ಲವ್ ಯೂ, ರಿಪ್ ಎಂದು ಬರೆದುಕೊಂಡು ಮಿಲ್ಲರ್ ಮಗಳೊಂದಿಗಿನ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಪ್ರತಿಪಾದಿಸಲಾಗಿದೆ.

ಹಾಗಿದ್ದರೆ ಡೇವಿಡ್ ಮಿಲ್ಲರ್ ಪುತ್ರಿ ಸಾವನಪ್ಪಿದ್ದಾಳೆ ಎಂಬ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್ :

ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಸುದ್ದಿಯನ್ನು ಪರಿಶೀಲಿಸಲು ಮೃತಪಟ್ಟ ಮಗು ಡೇವಿಡ್ ಮಿಲ್ಲರ್ ಪುತ್ರಿಯೇ ಎಂದು ಸರ್ಚ್ ಮಾಡಿದಾಗ, ಡೇವಿಡ್ ಮಿಲ್ಲರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಲಭ್ಯವಾಗಿದೆ. ಅದರಲ್ಲಿ ಒಂದು ಮಗುವಿನೊಂದಿಗೆ ಮಿಲ್ಲರ್ ಫೋಟೊ ತೆಗೆಸಿಕೊಂಡಿದ್ದಾರೆ.

 

View this post on Instagram

 

A post shared by Dave Miller (@davidmillersa12)

RIP, ನಾನು ನಿನ್ನನ್ನು ಎಂದೆಂದಿಗೂ ಪ್ರೀತಿಸುತ್ತೇನೆ ನನ್ನ ಪುಟ್ಟ ರಾಕ್‌ಸ್ಟಾರ್” ಎಂಬ ಶೀರ್ಷಿಕೆಯನ್ನು ಬರೆದಿದ್ದು. ಮಿಲ್ಲರ್ ಹಂಚಿಕೊಂಡ ಈ ವೀಡಿಯೊದಲ್ಲಿ ಮಿಲ್ಲರ್ ಜೊತೆ ಬಾಲಕಿ ಕ್ರಿಕೆಟ್ ಆಡಿರುವ ಹಾಗೂ ಆಟವಾಡುತ್ತಿರುವ ಫೋಟೋಗಳನ್ನು ಕಾಣಬಹುದು.

ತೀರಿಕೊಂಡ ಮಗುವಿನ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಲು ಸರ್ಚ್ ಮಾಡಿದಾಗ, ಪ್ರಜಾವಾಣಿ ವರದಿಯೊಂದು ಲಭ್ಯವಾಗಿದ್ದು, ವರದಿಯ ಪ್ರಕಾರ, ಮೃತ ಬಾಲಕಿ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಡೇವಿಡ್ ಮಿಲ್ಲರ್ ಅವರ ಆಪ್ತ ಸ್ನೇಹಿತನ ಮಗಳು ಆ್ಯನೆ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಹಲವು ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆ್ಯನೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯಾಗಿದೆ. ಮಿಲ್ಲರ್, ಆ್ಯನೆ ಅವರನ್ನು ಹಲವು ಬಾರಿ ಕ್ರೀಡಾಂಗಣಕ್ಕೆ ಕರೆದೊಯ್ದಿದ್ದರು. ಹಾಗಾಗಿ ಕೆಲವರು ಆ್ಯನೆ ಅವರನ್ನು ಮಿಲ್ಲರ್ ಮಗಳು ಎಂದು ಭಾವಿಸಿದ್ದರು. ಹಾಗೆಯೇ ಸುದ್ದಿ ಮಾಧ್ಯಮಗಳು ಕೂಡ ಅದೇ ರೀತಿ ವರದಿನ್ನು ಬಿತ್ತರಿಸಿದ್ದವು, ಆಕೆ ಮಿಲ್ಲರ್‌ನ ಆಪ್ತ ಸ್ನೇಹಿತನ ಮಗಳು ಎಂಬ ಸುದ್ದಿ ದೃಢಪಡುತ್ತಿದ್ದಂತೆ ಮೊದಲು ಮಾಡಿದ ವರದಿಗಳನ್ನು ಡಿಲೀಟ್ ಮಾಡಿದ್ದವು.

Not His Daughter, South African Cricketer David Miller Fan Has Passed Away

ನಿನ್ನ ಪ್ರಯಾಣದಲ್ಲಿ ನೀನು ಪ್ರತಿಯೊಬ್ಬ ವ್ಯಕ್ತಿಯನ್ನು ಮತ್ತು ಪ್ರತಿ ಸವಾಲನ್ನು ಸ್ವೀಕರಿಸಿದ್ದೀಯಾ. ಜೀವನದಲ್ಲಿ ಪ್ರತಿಯೊಂದು ಕ್ಷಣವನ್ನು ಪಾಲಿಸುವುದರ ಬಗ್ಗೆ ನೀನು ನನಗೆ ತುಂಬಾ ಕಲಿಸಿದ್ದೀಯಾ!” ಎಂದು ಡೇವಿಡ್ ಮಿಲ್ಲರ್ ಅಭಿಮಾನಿ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ.

“ನಿನ್ನ ಜೊತೆಯಲ್ಲಿ ಬದುಕಿನಲ್ಲಿ ಪ್ರಯಾಣ ಮಾಡಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ!” ಎಂದು ಮಿಲ್ಲರ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಗಾಂಧಿ ಬ್ರಿಟೀಷರಿಂದ ಪಿಂಚಣಿ ಪಡೆಯುತ್ತಿದ್ದರು ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights