ಒಂದೇ ಬಾರಿ 10 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ; ವಿಶ್ವ ದಾಖಲೆಯ ಮಹಾತಾಯಿ!

ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು ಹತ್ತು ಶಿಶುಗಳಿಗೆ ಜನ್ಮ ನೀಡಿದ್ದಾರೆ ಎಂದು ಹೇಳಲಾಗಿದೆ. ಆಕೆ 10 ಮಕ್ಕಳಿಗೆ ಜನ್ಮ ನೀಡಿರುವುದನ್ನು  ವೈದ್ಯರು ದೃಢೀಕರಿಸಿದಲ್ಲಿ, ಇದು ಒಂದೇ ಸಂದರ್ಭದಲ್ಲಿ ಹೆಚ್ಚು ಮಕ್ಕಳ ಜನನಗಳ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸುತ್ತದೆ.

ದಕ್ಷಿಣ ಆಫ್ರಿಕಾದ 37 ವರ್ಷದ ಗೋಸಿಯಮ್ ತಮಾರಾ ಸಿಥೋಲ್ ಎಂಬಾಕೆ ಹತ್ತು ಶಿಶುಗಳಿಗೆ ಜನ್ಮ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಪೈಕಿ ಏಳು ಗಂಡು ಮತ್ತು ಮೂರು ಹೆಣ್ಣು ಎಂದು ಆಕೆಯ ಪತಿ ಟೆಬೋಗೊ ತ್ಸೊಟೆಟ್ಸಿ ತಿಳಿಸಿದ್ದಾರೆ. ಜೂನ್ 7 ರಂದು ಪ್ರಿಟೋರಿಯಾದ ಆಸ್ಪತ್ರೆಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆಯಿಂದ ಶಿಶುಗಳನ್ನು ಹೆರಿಗೆ ಮಾಡಲಾಗಿದೆ.

ಆರು ಶಿಶುಗಳೊಂದಿಗೆ ಗರ್ಭಿಣಿಯಾಗಿದ್ದಾರೆ ಎಂದು ವೈದ್ಯರು ಆರಂಭದಲ್ಲಿ ಸಿಥೋಲ್‌ಗೆ ತಿಳಿಸಿದ್ದರು ಎಂದು ವರದಿಯಾಗಿದೆ. ಆದರೆ ಶಸ್ತ್ರಚಿಕಿತ್ಸೆ ಮಾಡಿದ ನಂತರವೇ ಆಕೆ 10 ಶಿಶುಗಳೊಂದಿಗೆ ಗರ್ಭಿಣಿಯಾಗಿದ್ದರು ಎಂದು ಗೊತ್ತಾಗಿದೆ.

ಗೋಸಿಯಮ್ ಸಿಥೋಲ್ ಮತ್ತು ಅವಳ ಪತಿ ತ್ಸೊಟೆಟ್ಸಿ ಈಗಾಗಲೇ ಆರು ವರ್ಷದ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ತ್ಸೊಟೆಟ್ಸಿ ಪ್ರಸ್ತುತ ನಿರುದ್ಯೋಗಿಗಳಾಗಿದ್ದಾರೆ.

“ತನ್ನ ಪತ್ನಿ ಏಳು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ನನಗೆ ಸಂತೋಷವಾಗಿದೆ. ನಾನು ಭಾವುಕ. ನಾನು ಹೆಚ್ಚು ಮಾತನಾಡಲು ಸಾಧ್ಯವಿಲ್ಲ” ಎಂದು ತ್ಸೊಟೆಟ್ಸಿ ಹೇಳಿದ್ದಾರೆ.

ಕಳೆದ ತಿಂಗಳು ಮಾಲಿಯ ಮೂಲದ ಹಲಿಮಾ ಸಿಸ್ಸೆ ಎಂಬ ಮಹಿಳೆ ಮೊರಾಕೊದಲ್ಲಿ ಒಂಬತ್ತು ಶಿಶುಗಳಿಗೆ ಜನ್ಮ ನೀಡಿದ್ದರು. ಇದೀಗ ದಕ್ಷಿಣ ಆಫ್ರಿಕಾದ ಈ ಮಹಿಳೆ 10 ಮಕ್ಕಳಿಗೆ ಜನ್ಮ ನೀಡಿದ್ದಾರೆ.

Read Also: ಬೆಂಗಳೂರಿನಲ್ಲಿ ಮರಣ ಪ್ರಮಾಣ ದರ 2020ಕ್ಕಿಂತ 04 ಪಟ್ಟು ಹೆಚ್ಚಳ; ಕೆಟ್ಟ ಪರಿಸ್ಥಿತಿಯಲ್ಲಿದೆ ರಾಜ್ಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights