FACT CHECK | ಉತ್ತರ ಪ್ರದೇಶದ ಯೋಗಿ ಸರ್ಕಾರದಲ್ಲಿ IAS ಪರೀಕ್ಷೆ ವೇಳೆ ಸಾಮೂಹಿಕ ನಕಲು ನಡೆಸಲಾಗಿದೆಯೇ?
ಉತ್ತರ ಪ್ರದೇಶದಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆಯುವ ವೇಳೆ ಸಾಮೂಹಿಕ ನಕಲು ಮಾಡಿಸಲಾಗುತ್ತಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೀಗೆ IAS ಮತ್ತು IPS ಪರೀಕ್ಷೆ ಬರೆದು ಅಧಿಕಾರಿಗಳಾಗುವ ಉತ್ತರ ಪ್ರದೇಶದ ಮೂಲದವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ನೀವೆ ಹೇಳಿ? ಇದೇ ಕಾರಣಕ್ಕೆ ಹೆಚ್ಚಿನ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಉತ್ತರದಿಂದ ಬರುತ್ತಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಸನ್ನು ಹಂಚಿಕೊಳ್ಳಲಾಗುತ್ತಿದೆ.
ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others
ಫ್ಯಾಕ್ಟ್‌ಚೆಕ್ :
ಉತ್ತರ ಪ್ರದೇಶದಲ್ಲಿ ಹೀಗೆ IAAS ಪರೀಕ್ಷೆಯಲ್ಲಿ ಸಾಮೂಹಿಕವಾಗಿ ನಕಲು ಮಾಡಿಸಿ ಪರೀಕ್ಷೆಯನ್ನು ಬರೆಸಲಾಗುತ್ತಿದೆಯೇ ಎಂದು ಪರಿಶೀಲಿಸಿದಾಗ, ಮಾರ್ಚ್ 1, 2024 ರಂದು ಆಜ್ ತಕ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿ ವರದಿಯೊಂದು ಲಭ್ಯವಾಗಿದೆ. ವರದಿಯ ಪ್ರಕಾರ, ವಿಡಿಯೋದಲ್ಲಿನ ದೃಶ್ಯಗಳು ಉತ್ತರ ಪ್ರದೇಶದ ಬಾರಾಬಂಕಿಯಲ್ಲಿರುವ ಪರೀಕ್ಷಾ ಕೇಂದ್ರವಾದ ಸಿಟಿ ಲಾ ಕಾಲೇಜಿನದ್ದು ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ ವಿಡಿಯೋದಲ್ಲಿರುವ ದೃಶ್ಯಾವಳಿಗಳು ಕಾನೂನು ಪರೀಕ್ಷೆಗೆ ಸಂಬಂಧಿಸಿದೆ.
ಮಾರ್ಚ್ 7, 2024 ರಂದು ಮೀಡಿಯಾ ಔಟ್ಲೆಟ್, ದೈನಿಕ್ ಭಾಸ್ಕರ್ ಸೇರಿದಂತೆ ಹಲವು ಮಾಧ್ಯಮಗಳು ಇದನ್ನು ವರದಿ ಮಾಡಿವೆ. ಬಾರಾಬಂಕಿಯ ಸಿಟಿ ಲಾ ಕಾಲೇಜಿನಲ್ಲಿ ಸಾಮೂಹಿಕ ಪರೀಕ್ಷಾ ನಕಲು ನಡೆದಿದ್ದು ಈ ವಂಚನೆಯನ್ನು ಪತ್ತೆಹಚ್ಚಲಾಗಿideೆದ ಎಂದು ವರದಿಯಾಗಿದೆ. ಪರೀಕ್ಷೆಯ ಮೊದಲ ಪಾಳಿಯ ಸಮಯದಲ್ಲಿ, ಫೆಬ್ರವರಿ 27 ರಂದು, ಶಿವಂ ಸಿಂಗ್ ಎಂಬ ಎಲ್‌ಎಲ್‌ಬಿ ವಿದ್ಯಾರ್ಥಿ ಫೇಸ್‌ಬುಕ್‌ನಲ್ಲಿ ನಕಲು ಮಾಡುವುದನ್ನು ಲೈವ್-ಸ್ಟ್ರೀಮ್ ಮಾಡಿದ್ದಾನೆ. ಇದರ ಪರಿಣಾಮವಾಗಿ, ಕಾನೂನು ಪರೀಕ್ಷೆಯನ್ನು ರದ್ದುಗೊಳಿಸಲಾಯಿತು ಮತ್ತು ಪರೀಕ್ಷಾ ಕೇಂದ್ರಕ್ಕೆ ₹ 2 ಲಕ್ಷ ದಂಡ ವಿಧಿಸಲಾಗಿದ್ದು ಮುಂದಿನ ಆರು ವರ್ಷಗಳವರೆಗೆ ಈ ಕಾಲೇಜನ್ನು ಪರೀಕ್ಷಾ ಕೇಂದ್ರವಾಗಿ ಕಾರ್ಯನಿರ್ವಹಿಸುವಂತಿಲ್ಲ ಎಂದು ಆದೇಶಿಸಲಾಗಿದೆ.
ಬಾರಾಬಂಕಿಯ ಸಿಟಿ ಲಾ ಕಾಲೇಜಿನಲ್ಲಿ ನಡೆದ ಸಾಮೂಹಿಕ ವಂಚನೆಯ ಘಟನೆಯ ಬಗ್ಗೆ ಇದೇ ರೀತಿಯ ಸುದ್ದಿಗಳನ್ನು ETV ಭಾರತ್ ಮತ್ತು ಝೀ ನ್ಯೂಸ್‌ನ ವೆಬ್‌ಸೈಟ್‌ಗಳಲ್ಲಿಯೂ ಕಾಣಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರ ಪ್ರದೇಶದಲ್ಲಿ ಕಾನೂನು ಪರೀಕ್ಷೆಯ ಸಮಯದಲ್ಲಿ ಸಾಮೂಹಿಕ ನಕಲು ಮಾಡುವ ವೈರಲ್ ವೀಡಿಯೊವನ್ನು IAS ಪರೀಕ್ಷೆ ವೇಳೆ ಸಾಮೂಹಿಕ ನಕಲು ಎಂದು ತಪ್ಪಾಗಿ ಲಿಂಕ್ ಮಾಡಲಾಗಿದೆ. ಯಾವುದೇ ಪರೀಕ್ಷಯಾಗಲಿ ಈ ರೀತಿ ಸಾಮೂಹಿಕ ಪರಿಕ್ಷಾ ನಕಲು ಮಾಡುವುದು ತಪ್ಪು, ಅಂತಹವರ ವಿರುದ್ದ ಪ್ರಕರಣ ದಾಖಲಿಸಿ ಶಿಕ್ಷೆ ನೀಡುವ ಮೂಲಕ ಇಂತಹ ಕೃತ್ಯದಲ್ಲಿ ತೊಡಗುವವರಿಗೆ ತಕ್ಕ ಪಾಠ ಕಲಿಸುವಂತಾಗಬೇಕು.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಎಲೆಕ್ಟ್ರೋಲ್ ಬಾಂಡ್ ಕುರಿತು ಸುಳ್ಳು ಅಂಕಿ ಅಂಶ ನೀಡಿದ ಗೃಹ ಸಚಿವ ಅಮಿತ್ ಶಾ