ಫ್ಯಾಕ್ಟ್‌ಚೆಕ್ : ಕೇರಳದಲ್ಲಿ ಗೋಮಾಂಸ ತಿನ್ನಲು ಬಯಸಿದರೆ ಕಾಂಗ್ರೆಸ್‌ಗೆ ಮತ ನೀಡಿ ಎಂದು ಕಾಂಗ್ರೆಸ್ ಪ್ರಚಾರ ಮಾಡಿತ್ತು ಎಂಬ ಸುಳ್ಳು ಪೋಸ್ಟ್‌ ಹಂಚಿಕೆ!

ಕೇರಳ ಕಾಂಗ್ರೆಸ್‌ ಪಕ್ಷದ ಚುನಾವಣಾ ಘೋಷಣೆಯ ಹೋರ್ಡಿಂಗ್‌ವೊಂದು  ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಆಗುತ್ತಿದೆ. ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಗೋಮಾಂಸದ ಆಧಾರದಲ್ಲಿ ಮತಗಳನ್ನು ಕೇಳುತ್ತಿದೆ ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.  ಹೋರ್ಡಿಂಗ್‌ನಲ್ಲಿ ಮಲಯಾಳಂ ನಲ್ಲಿ ಶೀರ್ಷಿಕೆಯೊಂದನ್ನ ಹಂಚಿಕೊಳ್ಳಲಾಗಿದೆ “ನೀವು ಗೋಮಾಂಸವನ್ನು ತಿನ್ನಲು ಬಯಸಿದರೆ, ಕಾಂಗ್ರೆಸ್ಗೆ ಮತ ನೀಡಿ” ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

https://twitter.com/AmitavaSumat/status/1629910621000192000?s=20

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ಅನ್ನು ಪರಿಶೀಲಿಸುವಂತೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಏನ್‌ಸುದ್ದಿ.ಕಾಂ ಗೆ ಸಂದೇಶಗಳನ್ನು ಕಳುಹಿಸುವ ಮೂಲಕ ವಿನಂತಿಸಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್ಅನ್ನು ಪರಿಶೀಲಿಸಿದಾಗ, ಕಾಂಗ್ರೆಸ್‌ ತನ್ನ ಪ್ರಚಾರದ ಹೋರ್ಡಿಂಗ್‌ನಲ್ಲಿ ಬಳಸಲಾದ ಶೀರ್ಷಿಕೆಯನ್ನು ತಪ್ಪಾಗಿ ಅನುವಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಕಾಂಗ್ರೆಸ್‌ನ ಪ್ರಚಾರ ಫಲಕದಲ್ಲಿ “ನಮಗೆ ಹಳೆಯ ರಾಜಕೀಯ ಬೇಡ, ಆಹಾರದ ಹೆಸರಿನಲ್ಲಿ ಕೊಲ್ಲುವುದನ್ನು ಈಗಲೂ ನೋಡುತ್ತಿದ್ದೇವೆ ಇದು ನಮಗೆ ಬೇಕೆ?” ಎಂದು ತನ್ನ ಪಕ್ಷದ ಪ್ರಚಾರ ಫಲಕದಲ್ಲಿ ಬರೆದುಕೊಂಡಿದೆ.

ಆದರೆ ಇದನ್ನು ತಿರುಚಿ ಗೋಮಾಂಸ ತಿನ್ನಲು ಕಾಂಗ್ರೆಸ್‌ಗೆ ಮತ ನೀಡಿ, ಗೋಮಾಂಸದ ಹೆಸರಿನಲ್ಲಿ ಕಾಂಗ್ರೆಸ್‌ ಮತ ಕೇಳುತ್ತಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದೆ. ವಾಸ್ತವವಾಗಿ ಈ ರೀತಿ ಕಾಂಗ್ರೆಸ್‌ ತನ್ನ ಪ್ರಚಾರ ಫಲಕದಲ್ಲಿ ಬರೆದುಕೊಂಡಿಲ್ಲ. ವೈರಲ್ ಪೋಸ್ಟ್‌ನಲ್ಲಿ ಹೇಳಿಕೊಂಡಂತೆ ಹೋರ್ಡಿಂಗ್‌ನಲ್ಲಿನ ಪಠ್ಯವು ಗೋಮಾಂಸವನ್ನು ಉಲ್ಲೇಖಿಸಿಲ್ಲ ಎಂದು ನ್ಯೂಸ್‌ ಚೆಕ್ಕರ್ ವರದಿ ಮಾಡಿದೆ.

Viral post wrongly translates Congress election hoarding in Kerala, claiming that the party asked for votes in the name of beef.

2019 ರ ಲೋಕಸಭಾ ಚುನಾವಣೆಗಳು ಏಪ್ರಿಲ್ 11, 2019 ರಿಂದ ಮೇ 19, 2019 ರವರೆಗೆ ನಡೆದಿತ್ತು, ಕೇರಳದಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರಕ್ಕಾಗಿ ಇಂತಹ ಶೀರ್ಷಿಕೆಯಿರುವ ಫಲಕವನ್ನು ಹಂಚಿಕೊಂಡಿದೆ ಎಂದು ಏಪ್ರಿಲ್ 12, 2019 ರಂದು ಟ್ವೀಟ್ ಮಾಡಲಾಗಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿರುವ ಅನುವಾದ ತಪ್ಪಾಗಿದೆ. ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮುಖ್ಯಸ್ಥ ಕೆ ಸುಧಕರನ್ ಅವರ ಪಿಎಸ್‌ ಜಾರ್ಜ್ ಲಾರೆನ್ಸ್ ಅವರನ್ನು ನ್ಯೂಸ್ ಚೆಕ್ಕರ್‌ ಸಂಪರ್ಕಿಸಿದಾಗ , ಪೋಸ್ಟರ್ 2019 ರ ಲೋಕಸಬೇ ಚುನಾವಣೆಯದ್ದು ಪೋಸ್ಟರ್ನಲ್ಲಿ ಗೋಮಾಂಸ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಕೇರಳ ಕಾಂಗ್ರೆಸ್‌ ಪಕ್ಷದ 2019ರ ಚುನಾವಣಾ ಪ್ರಚಾರ ಫಲಕದಲ್ಲಿ ಹಾಕಲಾಗಿದ್ದ ಹೋರ್ಡಿಂಗ್‌ನಲ್ಲಿ ಗೋಮಾಂಸದ ಯಾವುದೇ ಉಲ್ಲೇಖವಿಲ್ಲ, ಆಹಾರದ ಹೆಸರಿನಲ್ಲಿ ಕೊಲ್ಲುವ ರಾಜಕೀಯದಿಂದ ದೂರ ಇರಿ ಎಂದು ಹೇಳಿರುವ ಕಾಂಗ್ರೆಸ್‌ ಪಕ್ಷದ ಪ್ರಚಾರ ಫಲಕದ ಶೀರ್ಷಿಕೆಯನ್ನು ತಪ್ಪಾಗಿ ಅನುವಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ನ್ಯೂಸ್‌ ಚೆಕ್ಕರ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಪಾಕ್‌ನ ಸಂಸತ್‌ನಲ್ಲಿ ಮೋದಿಗೆ ಜೈಕಾರ ಹಾಕಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights