ಫ್ಯಾಕ್ಟ್‌ಚೆಕ್ : ಪಾಕ್‌ನ ಸಂಸತ್‌ನಲ್ಲಿ ಮೋದಿಗೆ ಜೈಕಾರ ಹಾಕಲಾಗಿದೆಯೇ?

ಪಾಕಿಸ್ತಾನದ ಸಂಸತ್ತಿನಲ್ಲಿ ಜೈ ಶ್ರೀರಾಮ, ಜೈ ಮೋದಿ, ಜೈಜೈ ಮೋದಿ ಎಂಬ ಘೋಷಣೆಗಳು ಕೇಳಿ ಬಂದಿವೆ ಎಂಬ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಶಾ ಮೊಹಮದ್ ಖುರೇಷಿ ಪಾಕಿಸ್ತಾನದ ಸಂಸತ್ ನಲ್ಲಿ ಮಾತನಾಡುವ ವೇಳೆ ಮೋದಿ ಮೋದಿ ಎಂಬ ಘೋಷಣೆಗಳು ಮೊಳಗಿವೆ ಎಂದು ಆ ವೀಡಿಯೋದಲ್ಲಿ ಪ್ರತಿಪಾದಿಸಲಾಗಿದೆ.

ಈ ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸುವಂತೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಏನ್‌ಸುದ್ದಿ.ಕಾಂಗೆ ಸಂದೇಶಗಳ ಮೂಲಕ ವಿನಂತಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಪರಿಶೀಲಿಸಿದಾಗ ಪಾಕ್‌ನ ಸಂಸತ್‌ನಲ್ಲಿ ಮೋದಿ ಮೋದಿ, ಜೈಶ್ರೀರಾಮ್ ಶ್ರೀರಾಮ್ ಎಂಬ ಘೋಷಣೆ ಕೂಗಿದ್ದಾರೆ ಎಂಬುದು ಸುಳ್ಳು ಎಂದು ತಿಳಿದುಬಂದಿದೆ.

ಚಾರ್ಲಿ ಹೆಬ್ಡೋ ಕಾರ್ಟೂನ್ ಮತ್ತು ಇಸ್ಲಾಮೋಫೋಬಿಯಾ ವಿಚಾರವಾಗಿ ಪಾಕ್ ಸಂಸತ್ ನಲ್ಲಿ ಚರ್ಚೆ ನಡೆಯುತ್ತಿತ್ತು. ಈ ವೇಳೆ ಬಲೂಚಿಸ್ತಾನ್ ಸಂಸದರು ಜೋರು ಧ್ವನಿಯಲ್ಲಿ “ವೋಟಿಂಗ್ ವೋಟಿಂಗ್.. ವೋಟಿಂಗ್ …” ಎಂದು ಘೋಷಣೆ ಕೂಗಿದ್ದಾರೆ. ಇದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವ ಮೊಹಮ್ಮದ್  ಖುರೇಷಿ ವ್ಯಂಗ್ಯಗೊಂಡು ತಮ್ಮ ಭಾಷಣವನ್ನು ಮಧ್ಯದಲ್ಲಿಯೇ ಮೊಟುಗೊಳಿಸಿ ಸಂಸತ್ತಿನಿಂದ ಹೊರ ನಡೆದಿದ್ದಾರೆ. ಬಲೂಚಿಸ್ತಾನ್ ವಿಷಯ ಕುರಿತು ಖುರೇಷಿ ಮಾತನಾಡುತ್ತಿದ್ದಾಗ ಬಲೂಚಿಸ್ತಾನ್ ಸಂಸದರು ಮೋದಿಯನ್ನು ಕೊಂಡಾಡಿದ್ದಾರೆ. ಪದೇ ಪದೇ ವೋಟಿಂಗ್ .. ವೋಟಿಂಗ್ .. ವೋಟಿಂಗ್ .. ವೋಟಿಂಗ್ ..  ಘೋಷಣೆ ಕೂಗಿ ಸಚಿವರ ಭಾಷಣವನ್ನು ಪದೇ ಪದೇ ಅಡ್ಡಿಪಡಿಸಿದರು ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಪಾಕಿಸ್ತಾನಕ್ಕೆ ಮೋದಿ ಬೇಕು ಪಾಕ್ ಯುವಕ

ಇತ್ತೀಚೆಗೆ ಪಾಕಿಸ್ತಾನದ ಪ್ರಜೆಯೊಬ್ಬ ನಮಗೆ ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕಿತ್ತು ಎಂದು ಹೇಳಿದ್ದ ವಿಡಿಯೋ ಎಲ್ಲೆಡೆ ಸದ್ದು ಮಾಡಿತ್ತು. ಪಾಕ್‌ನ ಯುವಕ ಶೆಹಬಾಜ್ ಷರೀಫ್ ಸರ್ಕಾರದ ವೈಫಲ್ಯಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತ , ನರೇಂದ್ರ ಮೋದಿ ಅವರು ನಮ್ಮ ಪ್ರಧಾನಿಯಾಗಿದ್ದರೆ ನಾವು ಕೂಡ ಸೂಕ್ತ ಬೆಲೆಗೆ ಸರಕುಗಳನ್ನು ಖರೀದಿಸಲು ಸಾಧ್ಯವಾಗುತ್ತಿತ್ತು ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಯೂಟ್ಯೂಬರ್ ಸನಾ ಅಮ್ಜದ್ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು.

ಈ ಹಿನ್ನಲೆಯಲ್ಲಿ ಹಳೆಯ ಫೇಕ್‌ ವಿಡಿಯೋವನ್ನು ಮತ್ತೊಮ್ಮೆ ಹಂಚಿಕೊಳ್ಳುವ ಮೂಲಕ ಪಾಕ್‌ನ ಸಂಸತ್‌ನಲ್ಲಿ ಜೈ ಜೈ ಮೋದಿ ಘೋಷಣೆ ಕೂಗಲಾಗಿದೆ ಎಂಬ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಈ ಅಧಿವೇಶನದ ಕುರಿತು ಪಾಕಿಸ್ತಾನದ DAWN ಪತ್ರಿಕೆಯು ವಿವರವಾಗಿ ವರದಿ ಮಾಡಿದ್ದು, ಅದರಲ್ಲಿ ವಿರೋಧ ಪಕ್ಷಗಳು ವೋಟಿಂಗ್ ನಡೆಸುವುದಕ್ಕಾಗಿ ಘೋಷಣೆ ಕೂಗಿದ್ದಾರೆ ಎಂಬುದನ್ನು ಸಹ ಉಲ್ಲೇಖಿಸಿದೆ. ಅದನ್ನು ಇಲ್ಲಿ ಓದಬಹುದು.

ಇಂಡಿಯಾ ಟುಡೆ ಪತ್ರಿಕೆಯು ಪಾಕಿಸ್ತಾನದ ಹಿರಿಯ ಪತ್ರಕರ್ತ ಮತೀನ್ ಹೈದರ್ ಅವರನ್ನು ಸಂಪರ್ಕಿಸಿದಾಗ “ಪಾಕಿಸ್ತಾನದ ಸಂಸತ್ತಿನಲ್ಲಿ ಭಾರತ ಸರ್ಕಾರವನ್ನು/ ಮೋದಿಯವರನ್ನು ಬೆಂಬಲಿಸುವ ಯಾವುದೇ ಘೋಷಣೆಗಳು ಕೇಳಿಬಂದಿಲ್ಲ” ಎಂದು ಖಚಿತಪಡಿಸಿದ್ದಾರೆ ಎಂದು ವರದಿ ಮಾಡಿದೆ. ಒಂದು ವೇಳೆ ಪಾಕಿಸ್ತಾನದ ಸಂಸತ್ತಿನಲ್ಲಿ ಮೋದಿ ಮೋದಿ ಎಂದು ಘೋಷನೆಗಳು ಕೇಳಿಬಂದಿದ್ದರೆ ಅದು ಪಾಕಿಸ್ತಾನದ ಮತ್ತು ಭಾರತದ ಮುಖ್ಯವಾಹಿನಿ ಪತ್ರಿಕೆಗಳಲ್ಲಿ ವರದಿಯಾಗಿರುತ್ತಿತ್ತು. ಆದರೆ ಅಂತಹ ಯಾವುದೇ ವರದಿಗಳು ನಮಗೆ ಕಂಡುಬಂದಿಲ್ಲ. ಹಾಗಾಗಿ ಆ ಘೋಷಣೆಗಳು ಕೂಗಿಲ್ಲ ಎಂದು ಖಚಿತವಾಗಿ ಹೇಳಬಹುದು.

ಆದರೆ ಕೆಲ ದುಷ್ಕರ್ಮಿಗಳು ಆ ವೋಟಿಂಗ್ ವೋಟಿಂಗ್ ಎಂಬ ಘೋಷಣೆಗಳನ್ನು ತೆಗೆದು ಆ ಜಾಗಕ್ಕೆ ಮೋದಿ ಮೋದಿ ಎಂಬ ದ್ವನಿಯನ್ನು ಎಡಿಟ್ ಮಾಡಿ ಸಿಂಕ್ ಮಾಡಲಾಗಿದೆ. ಹಾಗಾಗಿ ಇದು ಎಡಿಟ್ ಮಾಡಿದ ಫೇಕ್ ವಿಡಿಯೋ ಆಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಹಿಜಾಬ್ ಧರಿಸದ ಕಾರಣಕ್ಕೆ ಇರಾನ್‌ನಲ್ಲಿ ಬಾಲಕಿಗೆ ರಕ್ತ ಬರುವಂತೆ ಥಳಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights