ಫ್ಯಾಕ್ಟ್‌ಚೆಕ್ : ಹಿಜಾಬ್ ಧರಿಸದ ಕಾರಣಕ್ಕೆ ಇರಾನ್‌ನಲ್ಲಿ ಬಾಲಕಿಗೆ ರಕ್ತ ಬರುವಂತೆ ಥಳಿಸಿದ್ದು ನಿಜವೇ?

ಇರಾನ್‌ನಲ್ಲಿ ಸಾರಾ ಎಂಬ ಬಾಲಕಿ ಹಿಜಾಬ್ ಧರಿಸಿಲ್ಲ ಎಂದು ಮುಸ್ಲಿಂ ಮತಾಂದರು ಪುಟ್ಟ ಬಾಲಕಿಯನ್ನು ಥಳಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಹುಡುಗಿಯೊಬ್ಬಳು ರಕ್ತದಲ್ಲಿ ತೊಯ್ದಿರುವುದನ್ನು ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಇರಾನ್‌ನಲ್ಲಿ 22 ವರ್ಷದ  ಹುಡುಗಿ ಮಹ್ಸಾ ಅಮಿನಿಯ ಸಾವು ಇಸ್ಲಾಮಿಕ್ ರಾಷ್ಟ್ರದಲ್ಲಿ ಮಹಿಳೆಯರಿಗೆ ಕಡ್ಡಾಯವಾಗಿ ಮುಸುಕು ಹಾಕುವುದರ ವಿರುದ್ಧ ದೇಶದಲ್ಲಿ ಭಾರಿ ಕೋಲಾಹಲವನ್ನು ಉಂಟುಮಾಡಿತು. ಈ ಸಮಸ್ಯೆಯು ಇರಾನ್‌ನ ಮೂಲಭೂತ ಆಡಳಿತ ಮತ್ತು ಅದರ ‘ಮಹಿಳಾ ವಿರೋಧಿ’ ನೀತಿಗಳನ್ನು ಮತ್ತೊಮ್ಮೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಗಮನ ಸೆಳೆಯಿತು. ಇರಾನ್‌ನಲ್ಲಿ ಮಹಿಳೆಯರ ಅವಸ್ಥೆಯನ್ನು ಮತ್ತು ಅವರ ಹಕ್ಕುಗಳ ದಮನವನ್ನು ತೋರಿಸಲಾಗಿತ್ತು.

https://twitter.com/activistjyot/status/1628352069479587840?s=20

ಎಬಿಪಿ ನ್ಯೂಸ್ ಆಂಕರ್ ಶೋಭನಾ ಯಾದವ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಚಿತ್ರವನ್ನು ಪೋಸ್ಟ್ ಮಾಡಿದ್ದು, ಇರಾನ್‌ನಲ್ಲಿ ಹಿಜಾಬ್ ಧರಿಸದ ಕಾರಣಕ್ಕಾಗಿ ರಜಿಯಾ ಮತ್ತು ಅವರ ಸಹೋದರರು ಸಾರಾ ಎಂಬ ಈ ಹುಡುಗಿಯನ್ನು ಕ್ರೂರವಾಗಿ ಥಳಿಸಿದ್ದಾರೆ. ಇಷ್ಟು ಚಿಕ್ಕ ಹುಡುಗಿಗೆ ಹಿಜಾಬ್ ಧರಿಸಲು ಒತ್ತಾಯಿಸುವ ಜನರಿಗೆ ನಾಚಿಕೆಯಾಗಬೇಕು” ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

OP India, ಫಸ್ಟ್‌ಪೋಸ್ಟ್ ಮತ್ತು ಐಬಿ ಟೈಮ್ಸ್ ಕೂಡ ವೈರಲ್ ವೀಡಿಯೊಗೆ ಸಂಬಂಧಿಸಿದಂತೆ ವರದಿಗಳನ್ನು ಪ್ರಕಟಿಸಿವೆ. ಹಿಜಾಬ್ ಧರಿಸದಿದ್ದಕ್ಕಾಗಿ ಬಾಲಕಿಯನ್ನು ಥಳಿಸಲಾಗಿದೆ ಎಂಬ ಪ್ರತಿಪಾದನೆಯೊಂದಿಗೆ ಸುದ್ದಿಯನ್ನು ಬಿತ್ತರಿಸಲಾಗಿದೆ. ಹಾಗಿದ್ದರೆ ಈ  ಸುದ್ದಿ ನಿಜವೇ ಎಂದು ಪರಿಶೀಲಿಸೋಣ.

ಫ್ತಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮಾರ್ಚ್ 3, 2023 ರಂದು ಮೆಹರ್ ನ್ಯೂಸ್ ಮಾಡಿದ ವರದಿ ಲಭ್ಯವಾಗಿದೆ.  ಈ ವರದಿಯ ಪ್ರಕಾರ,  ಶಾಲೆ ಮುಗಿದ ನಂತರ ಇಬ್ಬರು ವಿದಾರ್ಥಿಗಳ ನಡುವೆ ಜಗಳ ನಡೆದಿದ್ದು, ಹುಡುಗಿ ಒಬ್ಬಳು ಗಾಯಗೊಂಡಿದ್ದಾಳೆ. ಬಳಿಕ ವಿದ್ಯಾರ್ಥಿನಿಯೊಬ್ಬಳ ತಾಯಿ ತನ್ನ ಮಗುವಿನ ರಕ್ಷಣೆಗಾಗಿ ಜಗಳವಾಡಿ ಬಾಲಕಿಯನ್ನು ತಳ್ಳಿದ್ದಾಳೆ. ತಳ್ಳಿದ ರಬಸಕ್ಕೆ ಸಾರಾ ಎಂಬ ಬಾಲಕಿ ತಲೆಗೆ ಪೆಟ್ಟಾಗಿದೆ. ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು ಬಾಲಕಿಯನ್ನು ಥಳಿಸಿದ ಮತ್ತೊಬ್ಬ ವಿದ್ಯಾರ್ಥಿನಿಯ ತಾಯಿಯನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಈ ಘಟನೆಯು ಇಬ್ಬರು ವಿದ್ಯಾರ್ಥಿಗಳ ನಡುವಿನ ಜಗಳ ಎಂದು ಇಸ್ಫಹಾನ್ ಪ್ರಾಂತ್ಯದ ಶಿಕ್ಷಣ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಜಲಾಲ್ ಸಲ್ಮಾನಿ ಇರಾನ್ ಸುದ್ದಿ ಸಂಸ್ಥೆ ಮೆಹರ್ ನ್ಯೂಸ್‌ನಲ್ಲಿ ಉಲ್ಲೇಖಿಸಿರುವ ವರದಿ  ಲಭ್ಯವಾಗಿದೆ. ಶಾಲೆ ಮುಗಿದ ಬಳಿಕ  ಮನೆಗೆ ಹಿಂದಿರುಗುವಾಗ ಈ ಘಟನೆ ನಡೆದಿದೆ . ಈ ಇಬ್ಬರು ವಿದ್ಯಾರ್ಥಿಗಳ ನಡುವಿನ ಈ ಜಗಳಕ್ಕೂ ಹಿಜಾಬ್ ವಿಷಯಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ಸೈಬರ್‌ಸ್ಪೇಸ್‌ನಲ್ಲಿ ಪ್ರಕಟವಾಗಿರುವುದು ತಪ್ಪು ಮಾಹಿತಿ ಎಂದು ಸ್ಪಷ್ಟಪಡಿಸಿದ್ದಾರೆ.

“ಪ್ರಾಥಮಿಕ ತನಿಖೆಯ ನಂತರ, ವಿದ್ಯಾರ್ಥಿಗಳ ನಡುವಿನ ವೈಯಕ್ತಿಕ ಸಮಸ್ಯೆ ಈ ಘಟನೆಗೆ ಕಾರಣವೆಂದು ತಿಳಿದುಬಂದಿದ್ದು, ಸೈಬರ್‌ ಸ್ಪೇಸ್‌ನಲ್ಲಿ ಪ್ರಕಟವಾಗಿರುವುದು ಸುಳ್ಳು ಸುದ್ದಿಯಾಗಿದ್ದು. ಘಟನೆಗೂ ಹಿಜಾಬ್‌ಗೂ ಯಾವುದೇ ಸಂಬಂಧವಿಲ್ಲ, ಬಾಲಕಿಯನ್ನು ತಳ್ಳಿ ಗಾಯಗೊಳಿಸಿದ ಮತ್ತುಬ್ಬ ವಿದ್ಯಾರ್ಥಿನಿಯ ತಾಯಿಯ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಇರಾನಿನಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ವೈಯಕ್ತಿಕ ಜಗಳದಲ್ಲಿ ಬಾಲಕಿಯೊಬ್ಬಳಿಗೆ ಪೆಟ್ಟಾಗಿ ರಕ್ತ ಸಿರಿದಿದೆ. ಆದರೆ ಈ ಘಟನೆಯನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಇರಾನ್‌ನಲ್ಲಿ ಹಿಜಾಬ್ ಧರಿಸದ ಕಾರಣಕ್ಕೆ ಬಾಲಕಿಯನ್ನು ರಕ್ತ ಸುರಿಯುವಂತೆ ಥಳಿಸಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ನ್ಯೂಸ್ ಚೆಕ್ಕರ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಯೋಗ ಕಸರತ್ತು ಮಾಡುತ್ತಿರುವ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights