ಫ್ಯಾಕ್ಟ್‌ಚೆಕ್ : ಕಂದಾಯ ಸಚಿವ R.ಅಶೋಕ ಹೆಸರಿನ ಫೇಸ್‌ಬುಕ್ ಖಾತೆಯಿಂದ ಸುಳ್ಳು ಪೋಸ್ಟ್‌ ಹಂಚಿಕೆ

ಕಂದಾಯ ಸಚಿವ R. Ashoka ಅವರ ಹೆಸರಿನ ಫೇಸ್‌ಬುಕ್ ಖಾತೆಯ ಮೂಲಕ ಫೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.  “ಹುತಾತ್ಮ ವೀರಯೋಧನ ಚಿತಾಭಸ್ಮವನ್ನು ಹಣೆಗೆ ಹಚ್ಚಿಕೊಂಡ ಯೋಗಿ ಆದಿತ್ಯನಾಥ್! ಇಂತಹ ಒಬ್ಬೇ ಒಬ್ಬ ಮುಖ್ಯಮಂತ್ರಿ ಬಿಜೆಪಿ ಬಿಟ್ಟು ಬೇರೆ ಪಕ್ಷದಲ್ಲಿದ್ದರೆ ಹೇಳಿ!” ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಹುತಾತ್ಮರಾದ ಉತ್ತರ ಪ್ರದೇಶದ ಯೋಧನ ಚಿತಾಭಸ್ಮವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಹಣೆಗೆ ಹಚ್ಚಿಕೊಂಡಿದ್ದಾರೆ ಎಂದು ಪ್ರತಿಪಾದಿಸಿ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

 ಇದೇ ಪ್ರತಿಪಾದನೆಯೊದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಗಳು ಹಂಚಿಕೊಂಡಿದ್ದಾರೆ. ವಿಡಿಯೋದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.

ಈ ಪೋಸ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾಧ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಪೋಸ್ಟ್ನಲ್ಲಿ R.Ashoka ಹೆಸರಿ ಖಾತೆಯಿಂದ ಹಂಚಿಕೊಳ್ಳಲಾದ ವೀಡಿಯೊದ ಸ್ಕ್ರೀನ್ ಶಾಟ್ಗಳ ಸಹಾಯದಿಂದ ಗೂಗಲ್  ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ವೈರಲ್ ಪೋಸ್ಟ್‌ನಲ್ಲಿರುವ ವೀಡಿಯೊವನ್ನು ಹೋಲುವಂತಹ ಹಲವು ವಿಡಿಯೋಗಳು ಕಂಡುಬಂದಿವೆ. ಭಗವಾ ಕ್ರಾಂತಿ ಸೇನಾ ಅಧ್ಯಕ್ಷ ಪ್ರಾಚಿ ಸಾಧ್ವಿ ಅವರು 22 ಮಾರ್ಚ್ 2022 ರಂದು ಮಾಡಿರುವ ಟ್ವೀಟ್ ನಲ್ಲಿ ಈ  ವಿಡಿಯೊವನ್ನು  ಶೇರ್ ಮಾಡಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಹೋಳಿ ಹಬ್ಬದ  ಸಾಂಪ್ರದಾಯಿಕ  ಆಚರಣೆಯ  ಭಾಗವಾಗಿ  ತನ್ನ ಹಣೆಯ ಮೇಲೆ ಹೋಲಿಕಾದಹನದ  ತಿಲಕವನ್ನು  ಹಚ್ಚಿಕೊಂಡಿದ್ದಾರೆಇದೇ  ರೀತಿಯ  ವಿವರಣೆಯೊಂದಿಗೆ  ಇತರ  ಕೆಲವು  ಸ್ಥಳೀಯ ಸುದ್ದಿ ವಾಹಿನಿಗಳು ವೀಡಿಯೊವನ್ನು ಪ್ರಕಟಿಸಿವೆಅವುಗಳನ್ನು ಇಲ್ಲಿಇಲ್ಲಿ ಕಾಣಬಹುದು.

https://twitter.com/Sadhvi_prachi/status/1506310563709997056?ref_src=twsrc%5Etfw%7Ctwcamp%5Etweetembed%7Ctwterm%5E1506310563709997056%7Ctwgr%5E%7Ctwcon%5Es1_&ref_url=https%3A%2F%2Ffactly.in%2Fyogi-adityanath-applying-ashes-of-holikadahan-as-tilak-during-2022-holi-celebrations-is-shared-with-a-false-narrative%2F

ಉತ್ತರ ಪ್ರದೇಶ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಯೋಗಿ ಆದಿತ್ಯನಾಥ್ ಗೋರಖ್‌ಪುರ ಗೋರಕ್ಷಾಪೀಠದಲ್ಲಿ ಜನರೊಂದಿಗೆ ಹೋಳಿ ಆಚರಿಸಿದ್ದಾರೆ ಎಂದು ತಿಳಿದು ಬಂದಿದೆ. ಆದಾಗ್ಯೂ, ಗೋರಖನಾಥ ದೇವಾಲಯವು ಹೋಳಿ ದಹನದ ನಂತರ ಚಿತಾಭಸ್ಮವನ್ನು ತಿಲಕದಿಂದ ಅಭಿಷೇಕಿಸಿ ಹೋಳಿ ಆಚರಣೆಯನ್ನು ಪ್ರಾರಂಭಿಸುವ ಪದ್ದತಿ ಇಂದಿಗೂ ರೂಡಿಯಲ್ಲಿದೆ. 1996 ರಿಂದ 2019 ರವರೆಗೆ ಗೋರಖ್‌ಪುರ ಗೋರಖ್‌ಪುರದ ಗೋರಕ್ಷಾ ಪೀಠದ ಪೀಠಾಧಿಪತಿಯಾಗಿ ಸೇವೆ ಸಲ್ಲಿಸಿದ ಯೋಗಿ ಆದಿತ್ಯನಾಥ್ ಅವರು ಹಲವು ವರ್ಷಗಳಿಂದ ಈ ಆಚರಣೆಯನ್ನು ಅನುಸರಿಸುತ್ತಾ ಬಂದಿದ್ದಾರೆ.

ಗೋರಖ್‌ಪುರ ಗೋರಕ್ಷಾಪೀಠದಲ್ಲಿ ಯೋಗಿ ಆದಿತ್ಯನಾಥ್‌ ಹೋಳಿ ಆಚರಿಸುತ್ತಿರುವ ದೃಶ್ಯಗಳನ್ನು ಇಲ್ಲಿ , ಇಲ್ಲಿ ನೋಡಬಹುದು. ಈ ವಿವರಗಳನ್ನು ಆಧರಿಸಿ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಯೋಗಿ ಆದಿತ್ಯನಾಥ್ ಅವರ ಹಣೆಯ ಮೇಲೆ ತಿಲಕ   ಇಟ್ಟುಕೊಂಡಿದ್ದ ಹೋಳಿಕಾ ದಹನದ್ದೆ ಹೊರತು ದೇಶದ ಹುತಾತ್ಮ ಸೈನಿಕನ ಚಿತಾಭಸ್ಮವಲ್ಲ ಎಂದು ಖಚಿತವಾಗಿ ಹೇಳಬಹುದು.

ಆದರೆ ಕರ್ನಾಟಕದ ಕಂದಾಯ ಸಚಿವ R.Ashoka ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಸುಳ್ಳು ಮತ್ತು ತಪ್ಪಾಗಿದೆ. ವಾಸ್ತವವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಹಣಗೆ ಹಚ್ಚಿಕೊಳ್ಳುತ್ತಿರುವುದು ಸೈನಿಕರ ಚಿತಾಭಸ್ಮವಲ್ಲ. ಬದಲಿಗೆ ಹೋಳಿ ಹಬ್ಬದ ಸಾಂಪ್ರದಾಯಿಕ ಆಚರಣೆಯ ಭಾಗವಾಗಿ ತನ್ನ ಹಣೆಯ ಮೇಲೆ ಹೋಲಿಕಾದಹನದ ತಿಲಕವನ್ನು ಹಚ್ಚಿಕೊಂಡಿದ್ದಾರೆ. ಇದನ್ನೆ ಸೈನಿಕರ ಚಿತಾಭಸ್ಮ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವದಾದರೆ ಯೋಗಿ ಆದಿತ್ಯನಾಥ್ ಅವರು ಹೋಳಿ ಆಚರಣೆಯ ಸಂದರ್ಭದಲ್ಲಿ ದೇಗುಲದ ಹೋಳಿಕಾಳ ಚಿತಾಭಸ್ಮ ತಿಲಕವನ್ನು ಹಣೆಗೆ ಇಟ್ಟುಕೊಂಡ ದೃಶ್ಯಗಳನ್ನು ತಿರುಚಿ ಸೈನಿಕನ ಚಿತಾಭಸ್ಮದವನ್ನು ಸೈನಿಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ತಿಲಕದಂತೆ ಹಚ್ಚಿಕೊಂಡಿದ್ದಾರೆ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಪಾಕ್‌ನ ಸಂಸತ್‌ನಲ್ಲಿ ಮೋದಿಗೆ ಜೈಕಾರ ಹಾಕಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights