ಜಿಲ್ಲೆಯ ಅಧಿಕಾರಿಗಳು ಬಿಜೆಪಿಯ ಕೈಗೊಂಬೆ – ಜೆಡಿಎಸ್ ಕಾರ್ಯಕರ್ತರ ಬಂಧನಕ್ಕೆ ಹೆಚ್ಡಿ.ರೇವಣ್ಣ ಕಿಡಿ

ಕೆಆರ್,ಪೇಟೆ ಉಪಚುನಾವಣೆ ಸಂಬಂಧ ನಂಬಿಹಳ್ಳಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಗಲಾಟೆ ವಿಚಾರಕ್ಕೆ  ನಮ್ಮ ಕಾರ್ಯಕರ್ತರನ್ನ ಮಾತ್ರ ಪೊಲೀಸ್ರು ಬಂಧಿಸಿದ್ದಾರೆ ಬಿಜೆಪಿಯವರನ್ನ ಬಂಧಿಸಿಲ್ಲಾ ಎಂದು ಹಾಸನದಲ್ಲಿ ಮಾಜಿ ಸಚಿವ ಹೆಚ್,ಡಿ,ರೇವಣ್ಣ ಹೇಳಿದ್ದಾರೆ.

ಕೇಸ್ ನಲ್ಲಿ ಇಲ್ಲದ ಜೆಡಿಎಸ್ ಕಾರ್ಯಕರ್ತರನ್ನ ಪೊಲೀಸ್ರು ಬಂಧಿಸಿದ್ದಾರೆ. ಜೆಡಿಎಸ್ ಪಕ್ಷದಿಂದ ಎಸ್ ಪಿ ಕಚೇರಿ ಮುಂದೆ ಪ್ರತಿಭಟನೆ ಮಾಡಲು ಮುಂದಾಗಿದ್ದೆವು. ಆದ್ರೆ ಎಸ್ ಪಿ ಮನವಿ ಮಾಡಿದ್ದಕ್ಕೆ ನಾವು ಪ್ರತಿಭಟನೆ ಕೈಬಿಟ್ಟಿದ್ದೆವು. ನಂಬಿಹಳ್ಳಿ ಗಲಾಟೆ ಪ್ರಕರಣದಲ್ಲಿ ಬಿಜೆಪಿಯ ಕೆಲವು ರೌಡಿ ಶೀಟರ್ ಗಳಿದ್ದಾರೆ ಅವರನ್ನ ಬಂಧಿಸಬೇಕು. ಜಿಲ್ಲೆಯ ಅಧಿಕಾರಿಗಳು ಬಿಜೆಪಿ ಕೈಗೊಂಬೆಯಾಗಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವಾಗ ಚನ್ನರಾಯಪಟ್ಟಣ ಸಿಪಿಐರನ್ನ ಸರ್ಕಾರ ವರ್ಗಾಯಿಸಿದೆ.ಎರಡು ದಿನಗಳ ಬಳಿಕ ಜೆಡಿಎಸ್ ಶಾಸಕರು ಮತ್ತು ಸಂಸದರು ಎಸ್ ಪಿ ಕಚೇರಿ ಮುಂಭಾಗ ಧರಣಿ ಮಾಡುತ್ತೇವೆ. ಎಸ್ ಪಿ ಕಚೇರಿ ಮುಂಭಾಗ ಶಾಂತಿಯುತವಾಗಿ ಧರಣಿ ಮಾಡುತ್ತೇವೆ.

ಸಕಲೇಶಪುರದಲ್ಲಿ 1000 ಎಕರೆ ಅಕ್ರಮ ಮಂಜೂರು ಪ್ರಕರಣ ಹಿನ್ನೆಲೆಯಲ್ಲಿ ಅಕ್ರಮದ ಬಗ್ಗೆ ದೂರು ನೀಡಿದ ಅಧಿಕಾರಿಯನ್ನ ವರ್ಗಾವಣೆ ಮಾಡಿದ್ದಾರೆ. ಹಾಸನ ತಹಶೀಲ್ದಾರ್ ರಿಗೆ ಕೆಲವರು ಧಮ್ಕಿ ಹಾಕಿದ್ದಾರೆಂದು ಆರೋಪ ಮಾಡಲಾಗಿತ್ತು. ಹಾಸನ ತಹಶೀಲ್ದಾರ್ ಮೇಘನಾರಿಗೆ ಕೆಲಸ ಮಾಡಲು ಸರ್ಕಾರ ಬಿಡುತ್ತಿಲ್ಲಾ. ಹಾಸನ ತಹಶೀಲ್ದಾರ್ ರನ್ನ ಸರ್ಕಾರ ವರ್ಗಾವಣೆ ಮಾಡಿದೆ ಎಂದು ಆರೋಪಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights