ಫ್ಯಾಕ್ಟ್‌ಚೆಕ್ :ತಮಿಳುನಾಡಿನ BJP ನಾಯಕರು ಮದ್ಯ ಮತ್ತು ಮಾಂಸದೊಂದಿಗೆ ಇರುವ ಫೋಟೊ ವೈರಲ್! ವಾಸ್ತವವೇನು?

ತಮಿಳುನಾಡಿನ BJP ಘಟಕದ ಸದಸ್ಯರು ಡೈನಿಂಗ್ ಟೇಬಲ್ ಸುತ್ತಲೂ ಕುಳಿತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ತಮ್ಮ ಊಟದ ಎಲ್ಲೆಯಲ್ಲಿ ಚಿಕನ್  ಮತ್ತು ಟೇಬಲ್‌ ಮೇಲೆ ಬಿಯರ್ ಬಾಟಲಿಗಳನ್ನು ಇಟ್ಟುಕೊಂಡು ಪಾರ್ಟಿ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಚಿತ್ರದಲ್ಲಿ BJP ತಮಿಳುನಾಡು ಪ್ರಧಾನ ಕಾರ್ಯದರ್ಶಿ ಕೇಶವ್ ವಿನಾಯಕ್, ಕೊಯಮತ್ತೂರು ಬಿಜೆಪಿ ಜಿಲ್ಲಾಧ್ಯಕ್ಷ ಬಾಲಾಜಿ ಉತ್ತಮರಸಾಮಿ ಮತ್ತು ತೆಲಂಗಾಣ ಬಿಜೆಪಿ ಉಪಾಧ್ಯಕ್ಷ ಸೆಲ್ವ ಕುಮಾರ್ ಕೆಲವರ ಜೊತೆ ಊಟ ಮಾಡುತ್ತಿದ್ದಾರೆ ಎಂದು ಹೇಳಲಾಗಿದ್ದು ಇದುತಮಿಳು ನಾಡಿದ BJP ಘಟಕದ ಪರಿಸ್ಥಿತಿ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದೆ.

ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಡೈನಿಂಗ್ ಟೇಬಲ್‌ ಮೇಲೆ ಇರಿಸಿರುವ ಬಿಯರ್ ಬಾಟಲಿಗಳ ಪ್ರತಿಬಿಂಬಕ್ಕೂ ಬಾಟಲಿಗಳಿಗೂ ಸ್ವಲ್ಪವೂ ಸಂಬಂಧವಿಲ್ಲದಂತೆ ಕಾಣುತ್ತದೆ. ನೀರಿನ ಬಾಟಲಿಗಳು ಇರುವ ಚಿತ್ರಕ್ಕೆ ಬಿಯರ್ ಬಾಟಲಿಗಳನ್ನು ಎಡಿಟ್ ಮಾಡಿ ಸೇರಿಸಲಾಗಿದೆ ಎಂದು ಪರಿಶೀಲಿಸಿದಾಗ ತಿಳಿದುಬಂದಿದೆ.

ತೆಲಂಗಾಣ ಬಿಜೆಪಿ ಉಪಾಧ್ಯಕ್ಷ ಸೆಲ್ವ ಕುಮಾರ್ ಅವರು ಫೆಬ್ರವರಿ 27 ರಂದು ಇದೇ ರೀತಿಯ ಚಿತ್ರವನ್ನು ಟ್ವೀಟ್ ಮಾಡಿದ್ದು ಅದನ್ನು ಇಲ್ಲಿ ನೋಡಬಹುದು. ಈ ಮೂಲಚಿತ್ರದಲ್ಲಿ ಊಟದ ಟೇಬಲ್‌ ಮೇಲೆ ಬಿಯರ್ ಬಾಟಲ್‌ಗಳನ್ನು ಇರಿಸಲಾಗಿಲ್ಲ.  ವಾಸ್ತವವಾಗಿ ಇಲ್ಲಿರುವುದು ನೀರಿನ ಬಾಟಲಿಗಳು ಎಂದು ತಿಳಿದುಬಂದಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರು ಫೋಟೋ ಮತ್ತು ಮೂಲ ಫೋಟೊಗಳನ್ನು ಹೋಲಿಕೆ ಮಾಡಿ ನೋಡಿದಾಗ, ಎರಡೂ ಚಿತ್ರಗಳು ಪಂದೇ ಆಗಿದ್ದು ಮೂಲ ಚಿತ್ರಕ್ಕೆ ಎಡಿಟ್ ಮಾಡುವ ಮೂಲಕ ನೀರಿನ ಬಾಟಲಿಗಳು ಇರುವ ಜಾಗದಲ್ಲಿ ಬಿಯರ್ ಬಾಟಲಿಗಳನ್ನು ಇರಿಸಲಾಗಿದೆ.

ಊಟದ ಎಲ್ಲೆಯಲ್ಲಿ ಇರುವುದು ಮಾಂಸಹಾರವಲ್ಲ ಮತ್ತು ಟೇಬಲ್‌ ಮೇಲೆ ಬಿಯರ್ ಬಾಟಲಿಗಳಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಆಲ್ಟ್‌ ನ್ಯೂಸ್ ಫ್ಯಾಕ್ಟ್‌ಚೆಕ್ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ BJP ತಮಿಳುನಾಡು ಮತ್ತು ತೆಲಂಗಾಣ ನಾಯಕರು ಮದ್ಯ ಮತ್ತು ಮಾಂಸಹಾರ ಸೇವಿಸುತ್ತಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಪಾಕ್‌ನ ಸಂಸತ್‌ನಲ್ಲಿ ಮೋದಿಗೆ ಜೈಕಾರ ಹಾಕಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights